Ultimate magazine theme for WordPress.

vastu tips ಈ ದಿಕ್ಕಿನಲ್ಲಿ 7 ಬಿಳಿಕುದುರೆ ಚಿತ್ರ ಹಾಕಿದರೆ ಮನೆ ಸರ್ವನಾಶ!

0 52,183

vastu tips 7 white horses in this direction ಓಡುತ್ತಿರುವ ಕುದುರೆಯ ಚಿತ್ರವನ್ನು ಈ ದಿಕ್ಕಿನಲ್ಲಿ ಹಾಕಬೇಡಿ ಮನೆ ಸರ್ವನಾಶವಾಗುತ್ತದೆ. ಹಿಂದೂ ಧರ್ಮದಲ್ಲಿ ಸೂರ್ಯದೇವನು ಏಳು ಕುದುರೆಗಳು ಎಳೆಯುವ ರಥವನ್ನು ವಾಹನವಾಗಿ ಬಳಸುತ್ತಾನೆ. ಹಾಗಾಗಿ ಏಳು ಕುದುರೆಗಳು ಬಹಳ ಶುಭವಾಗಿವೆ. ಕುದುರೆಗಳು ಶಕ್ತಿ ಹಾಗೂ ಯಶಸ್ಸಿನ ಸೂಚಕವಾಗಿವೆ. ಹಾಗಾಗಿ ಈ ಚಿತ್ರಪಟಗಳು ವ್ಯಕ್ತಿಯ ಬದುಕಿನಲ್ಲಿ ಯಶಸ್ಸು ಹಾಗೂ ಚೈತನ್ಯವನ್ನು ತರಬಲ್ಲದು.

ವಾಸ್ತುಶಾಸ್ತ್ರದ ಪ್ರಕಾರ ಈ ಚಿತ್ರಪಟ ಮನೆಯಲ್ಲಿರುವ ಎನರ್ಜಿಯನ್ನು ಸಮತೋಲವಾಗಿಡುತ್ತದೆ. ಏಳು ಕುದುರೆಗಳು ಶಾಂತಿ, ಯಶಸ್ಸು ಮತ್ತು ಅಭಿವೃದ್ಧಿಯನ್ನು ತರುತ್ತದೆ. ಆದ್ದರಿಂದ ಏಳು ಕುದುರೆಗಳ ಚಿತ್ರವನ್ನು ಮನೆಯಲ್ಲಿಡುವುದು ಕೆಲಸ ಕಾರ್ಯಗಳಲ್ಲಿ ನಮ್ಮ ಪ್ರಯತ್ನವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. vastu tips

ಆದರೇ ಈ ಏಳು ಕುದುರೆಗಳ ಚಿತ್ರಪಟವನ್ನು ತಪ್ಪಾದ ದಿಕ್ಕಿನಲ್ಲಿ ಹಾಕಿದರೇ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬಿಳಿ ವರ್ಣದ ಏಳು ಕುದುರೆಗಳು ಮನೆಗೆ, ವ್ಯಾಪಾರದ ಸ್ಥಳದಲ್ಲಿ ಅಥವಾ ಕಚೇರಿಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ. ಹಾಗಾಗಿ ಈ ಫೋಟೋವನ್ನು ಹಾಕುವುದರಿಂದ ಸಕಾರಾತ್ಮಕ ಶಕ್ತಿ ಉಂಟಾಗುತ್ತದೆ. vastu tips

ಯಾವ ಸ್ಥಳದಲ್ಲಿ ಬಿಳಿ ವರ್ಣದ ಫೋಟೋವನ್ನು ಹಾಕಿರುತ್ತಾರೋ ಆ ಸ್ಥಳದಲ್ಲಿ ಋಣಾತ್ಮಕ ಚಿಂತನೆಗಳು ದೂರವಾಗುತ್ತವೆ. ವ್ಯವಹಾರ ನಡೆಸುವ ಸ್ಥಳದಲ್ಲಿ ಬಿಳಿ ಬಣ್ಣದ ಓಡುತ್ತಿರುವಂತಹ ಏಳುಕುದುರೆಯ ಫೋಟೋವನ್ನು ಹಾಕುವುದರಿಂದ ಮಾಲೀಕನಿಗೆ ಲಾಭವಾಗುತ್ತದೆ. ಆದರೇ ಈ ಏಳು ಕುದುರೆಗಳ ಫೋಟೋವನ್ನು ಕೊಂಡುಕೊಳ್ಳುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನೀವು ತೆಗೆದುಕೊಳ್ಳುವ ಚಿತ್ರದಲ್ಲಿ ಕುದುರೆಗೆ ಲಗಾಮನ್ನು ಹಾಕಿರಬಾರದು ಹಾಗೂ ಅಶ್ವಗಳ ಮುಖದಲ್ಲಿ ಆಕ್ರೋಶವಿಲ್ಲದೇ ಮಂದಹಾಸವಿರುವ ಫೋಟೋವನ್ನು ಖರೀದಿ ಮಾಡಬೇಕು. ಕುದುರೆ ಫೋಟೋವನ್ನು ಗೋಡೆಯ ದಕ್ಷಿಣ ದಿಕ್ಕಿನಲ್ಲಿ ಹಾಕಬೇಕು. ಕುದುರೆಗಳ ಮುಖ ಉತ್ತರ ದಿಕ್ಕನ್ನು ನೋಡುತ್ತಿರಬೇಕು. ವ್ಯಾಪಾರ ಸ್ಥಳದಲ್ಲಿ ಹಾಕುವುದಾದರೇ vastu tips

ವ್ಯಾಪಾರ ಕ್ಷೇತ್ರದ ಮುಖ್ಯಗೋಡೆಯ ಮೇಲೆ ಹೊರಗಿನಿಂದ ಒಳಗೆ ಬರುವ ರೀತಿ ಕುದುರೆಯ ಫೋಟೋವನ್ನು ಹಾಕಬೇಕು. ಕುದುರೆಗಳ ಮುಖ ಅಲ್ಲಿಯೂ ಉತ್ತರ ದಿಕ್ಕನ್ನೇ ನೋಡುತ್ತಿರಬೇಕು. ಮನೆಯಲ್ಲಿ ಈ ರೀತಿಯ ಚಿತ್ರಪಟವನ್ನು ಹಾಕುವುದಿದ್ದರೇ ವಾಸ್ತುತಜ್ಞರ ಸಲಹೆಯನ್ನು ಕೇಳುವುದು ಒಳ್ಳೆಯದು. ಈ ಪೋಟೋವನ್ನು ಪೂರ್ವದ ಗೋಡೆಯ ಮೇಲೆ ಇಡುವುದರಿಂದ ವೃತ್ತಿ ಬೆಳವಣಿಗೆಯನ್ನು ಬಯಸುತ್ತಿರುವವರಿಗೆ ಒಳ್ಳೆಯದಾಗುತ್ತದೆ. ಏಳು ಜಿಗಿಯುವ ಅದೃಷ್ಠದ ಕುದುರೆಯ ಫೋಟೋವನ್ನು ಇಡುವುದಕ್ಕೆ ಮನೆಯ ಹಾಲ್ ಸೂಕ್ತ ಸ್ಥಳವಾಗಿದೆ.

ಕಿಟಕಿ ಮತ್ತು ಮುಖ್ಯದ್ವಾರದ ಬಳಿ ಇಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ, ದೇವಸ್ಥಾನ, ಪೂಜಾ ಕೊಠಡಿ, ವಾಶ್ ರೂಂ ಗೆ ಎದುರಾಗಿರುವ ಯಾವುದೇ ಗೋಡೆಗಳ ಮೇಲೆ ಅಥವಾ ಅವುಗಳ ಬಾಗಿಲುಗಳ ಮೇಲೆ ಏಳು ಕುದುರೆಗಳ ಫೋಟೋವನ್ನು ಹಾಕುವುದು ಸೂಕ್ತವಲ್ಲ. ಯಾವುದೇ ಅಡೆತಡೆ ಇಲ್ಲದೇ ಓಡುವಂತಹ ಕುದುರೆಗಳನ್ನು ಚಿತ್ರಿಸಬೇಕು ಮತ್ತು ತೆರೆದ ನೆಲದ ಮೇಲೆ ಓಡುವಂತೆ ಚಿತ್ರಿಸಬೇಕು. vastu tips

ಕುದುರೆಗಳು ನೀರಿನ ಮೇಲೆ ಓಡುತ್ತಿರುವ ಚಿತ್ರ ಒಳ್ಳೆಯದಲ್ಲ. ಬೆಸಸಂಖ್ಯೆಯಲ್ಲಿ ಇರುವ ಕುದುರೆಯನ್ನ ಚಿತ್ರಿಸಿರುವ ಚಿತ್ರವನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. ಕೆಂಪು ಹಿನ್ನೆಲೆಯುಳ್ಳ ಏಳು ಕುದುರೆಗಳ ಚಿತ್ರಕಲೆ ಮಂಗಳಗ್ರಹದ ಪ್ರಭಾವವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ಸ್ವಾಭಿಮಾನವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ನೀಲಿ ಬಣ್ಣದಲ್ಲಿ ಚಿತ್ರಿಸಿದ ಏಳು ಕುದುರೆಗಳು ಶನಿಗ್ರಹವನ್ನು ಪ್ರತಿನಿಧಿಸುತ್ತದೆ.

ಸಾಮರಸ್ಯ ಮತ್ತು ಶಾಂತಿಯನ್ನು ಆಹ್ವಾನಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಏಳು ಬಿಳಿಕುದುರೆಯ ವರ್ಣಚಿತ್ರವನ್ನು ಆಯ್ಕೆ ಮಾಡಬೇಕು. ಬಿಳಿ ಬಣ್ಣವು ಶಾಂತಿ ಮತ್ತು ಪರಿಶುದ್ಧತೆಯನ್ನು ಸೂಚಿಸುತ್ತದೆ. ಹಾಗೆಯೇ ಧನಾತ್ಮಕ ಭಾವನೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಉತ್ತರ ದಿಕ್ಕಿನಲ್ಲಿ ಕುದುರೆಯ ಫೋಟೋಗಳನ್ನು ಇಟ್ಟರೇ ಕೆರಿಯರ್ ಸೆಟ್ಲ್ ಆಗುತ್ತದೆ. vastu tips

ಉದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವವರು, ಆರ್ಥಿಕ ಸಮಸ್ಯೆಯಲ್ಲಿರುವವರು ಕುದುರೆ ಚಿತ್ರಗಳನ್ನು ಉತ್ತರ ದಿಕ್ಕಿನಲ್ಲಿಡಬೇಕು. ಇದರಿಂದ ಅದೃಷ್ಠವು ಒಲಿದು ಬರುತ್ತದೆ. ಎರಡು ಜೋಡಿ ಕುದುರೆಯ ಫೋಟೋಗಳನ್ನು ಬೆಡ್ ರೂಂ ನಲ್ಲಿ ಇಟ್ಟುಕೊಂಡರೆ ದಂಪತಿಗಳ ನಡುವೆ ಕಲಹಗಳು ಇರುವುದಿಲ್ಲ ಮತ್ತು ಸಾಮರಸ್ಯದ ಜೀವನ ಇರುತ್ತದೆ. ಏಳು ಕುದುರೆಗಳು ಅಕ್ಕಪಕ್ಕ ಓಡುತ್ತಿರುವ ಪೋಟೋವನ್ನು ಇಟ್ಟುಕೊಂಡರೆ

ತುಂಬಾ ಒಳ್ಳೆಯದು. ಇದರಿಂದ ಮನೆ ಮತ್ತು ಆಫೀಸ್ ನಲ್ಲಿರುವ ನೆಗೆಟಿವ್ ಎನರ್ಜಿ ಹೋಗುತ್ತದೆ. ಸಮಸ್ಯೆಗಳೆಲ್ಲಾ ಕಡಿಮೆಯಾಗುತ್ತದೆ. ಯಾವತ್ತೂ ಒಂದೇ ಕುದುರೆ ಓಡುವ ಫೋಟೋವನ್ನು ಹಾಕಬೇಡಿ. ಇದು ದುರಾದೃಷ್ಠವನ್ನು ತರುತ್ತದೆ. ಕುದುರೆಗಳ ಮೇಲೆ ಅಗ್ಗವಿರಬೇಕು ಆದರೇ ಆ ಏಳು ಕುದುರೆಗಳನ್ನು ಅಗ್ಗದಿಂದ ಬಂಧಿಸಿರುವ ಚಿತ್ರ ಇರಬಾರದು. ಇದು ಅಭಿವೃದ್ಧಿಯನ್ನು ತಡೆಯುತ್ತದೆ. ಪೇಟಿಂಗ್ ನಲ್ಲಿ ಕುದುರೆಯ ಪೂರ್ತಿ ಚಿತ್ರ ಕಾಣುವಂತಿರಬೇಕು. ಕುದುರೆಗಳ ಮುಖದಲ್ಲಿ ಸಂತೋಷ, ಧೈರ್ಯ ಎದ್ದು ಕಾಣುವಂತೆ ಇರಬೇಕು.

Leave A Reply

Your email address will not be published.