Ultimate magazine theme for WordPress.

allergy ಅಲರ್ಜಿ ಸಮಸ್ಯೆಗೆ ಒಂದು ಉತ್ತಮವಾದ ಮನೆಮದ್ದು

0 7,820

allergy problem in kannadatopten ಅಲರ್ಜಿ ಸಮಸ್ಯೆಗೆ ಒಂದು ಉತ್ತಮವಾದ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಇದನ್ನು ಮಾಡಿದರೆ ಅಲರ್ಜಿ ಸಂಪೂರ್ಣವಾಗಿ ಗುಣವಾಗುತ್ತದೆ. ಮೊದಲು ಅಲರ್ಜಿಯ ಲಕ್ಷಣಗಳ ಬಗ್ಗೆ ತಿಳಿಸಿಕೊಡುತ್ತೇನೆ. ಅಲರ್ಜಿ ಎನ್ನುವುದು ಚಿಕ್ಕಮಕ್ಕಳಿಂದ ದೊಡ್ಡವರಿಗೆ ತಪ್ಪಿದ್ದಲ್ಲ. ಅಲರ್ಜಿಯ ಲಕ್ಷಣಗಳೆಂದರೆ ಪದೇ ಪದೇ ಸೀನುವುದು, ಮೂಗಿನಲ್ಲಿ ನವೆ ಬರುವುದು, ಮೂಗು ಸೋರುವುದು,

ಕಣ್ಣಿನಲ್ಲಿ ನವೆ ಮತ್ತು ಕಣ್ಣು ಕೆಂಪಾಗುವುದು, ಕಿವಿಯೂ ಸಹ ನವೆ ಬರುತ್ತಿರುತ್ತದೆ. ಗಂಟಲು ಕೆರೆತವಾಗುತ್ತಿರುತ್ತದೆ, ಹೀಗೆ ಶುರುವಾದ ಅಲರ್ಜಿ ನಂತರ ಶೀತವಾಗುತ್ತದೆ. ತಲೆ ನೋವಾಗುತ್ತದೆ, ಕಣ್ಣು ಕೆಂಪಾಗುತ್ತದೆ, ತುಂಬಾನೆ ಹಿಂಸೆಕೊಡುತ್ತಿರುತ್ತದೆ. ಇಂತಹ ಅಲರ್ಜಿ ಯನ್ನು ಗುಣಮುಖಮಾಡುವ ಉತ್ತಮವಾದ ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಜೊತೆಗೆ allergy

ಈ ಲೇಖನದಲ್ಲಿ ಕೆಲವು ಮುನ್ನೆಚ್ಚರಿಕೆಯನ್ನು ತಿಳಿಸಿಕೊಡುತ್ತೇನೆ. ಈ ಮನೆಮದ್ದನ್ನು ತಯಾರಿಸಲು ಎರಡು ಪದಾರ್ಥಗಳು ಸಾಕು 100 ಗ್ರಾಂನಷ್ಟು ಶುಂಠಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ ನಂತರ ಸಿಪ್ಪೆಯನ್ನು ಹೊರೆಯಿರಿ. ನಂತರ ತುರಿದುಕೊಳ್ಳಿ. ಶುಂಠಿಯು ಕೊಳಿಯಬಾರದೆಂದು ತುಂಬ ಕೆಮಿಕಲ್‌ ಹಾಕಿರುತ್ತಾರೆ ಮತ್ತು ತುಂಬ ಮಣ್ಣು ಇರುತ್ತದೆ.

ಸಿಪ್ಪೆಯನ್ನು ತೆಗೆದು ಮತ್ತೊಂದು ಸಲ ಸರಿಯಾಗಿ ತೊಳೆದುಕೊಳ್ಳಬೇಕು. ಇದರಲ್ಲಿ ಆಂಟಿ ಇಂಪ್ಲಮೇಟರಿ ಇರುವುದರಿಂದ ಇದು ಅಲರ್ಜಿಯನ್ನು ಸಂಪೂರ್ಣವಾಗಿ ಗುಣಪಡಿಸುವ ಗುಣವನ್ನು ಹೊಂದಿದೆ. ಅಂದರೆ ನಮ್ಮ ದೇಹದಲ್ಲಿ ಅಲರ್ಜಿಯನ್ನು ಉತ್ಪತ್ತಿ ಮಾಡುವ ಜೀವಕೋಶಗಳ ಚಟುವಟಿಕೆಯನ್ನು ಕಡಿಮೆಮಾಡುತ್ತದೆ. ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ. allergy

ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅವರು ಶುಂಠಿಯನ್ನು ತೆಗೆದುಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಂಟಲಿನ ಇನ್ಫೆಕ್ಷನ್‌ಗೂ ಒಳ್ಳೆಯದು. ಕಫ ಆಗಿದ್ದರೂ ಅದನ್ನು ಸಹ ಕಡಿಮೆಮಾಡುತ್ತದೆ. ಮೂಗುಸೋರುವಿಕೆಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ. ದಪ್ಪತಳವಿರುವ ಪಾತ್ರೆಗೆ ಒಂದು ಸ್ಪೂನ್‌ ತುಪ್ಪವನ್ನು ಹಾಕಬೇಕು.

ತುಪ್ಪವನ್ನು ಎರಡು ಸ್ಪೂನ್‌ ಬೇಕಾದರೂ ತೆಗೆದುಕೊಳ್ಳಬಹುದು. ತುಪ್ಪ ಬಿಸಿಯಾದ ನಂತರ ತುರಿದ ಶುಂಠಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ಅಂದರೆ ಶುಂಠಿಯ ಬಣ್ಣ ಬದಲಾಗಬೇಕು. ಸ್ಟವ್‌ ನ್ನು ಕಡಿಮೆ ಇಟ್ಟುಕೊಂಡು ಶುಂಠಿ ಸ್ವಲ್ಪ ಕೆಂಪಾಗಬೇಕು. ನಾವು ತಿಂದಂತಹ ಆಹಾರವನ್ನು ಜೀರ್ಣಮಾಡಲು ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆಗೆ ಒಳ್ಳೆಯ ಔಷಧಿ. allergy

ಫ್ರೈಯಾದ ಶುಂಠಿಗೆ ಐವತ್ತು ಗ್ರಾಂ ನಷ್ಟು ಬೆಲ್ಲದ ಪುಡಿಯನ್ನು ಸೇರಿಸಿ ಮಿಕ್ಸ್‌ ಮಾಡಬೇಕು. ಸ್ವಲ್ಪ ಪಾಕಬರುವಷ್ಟು ಉರಿಯಬೇಕು. ತಣ್ಣಗಾದ ನಂತರ ಗಾಳಿಯಾಡದ ಬಾಕ್ಸ್‌ಗೆ ಹಾಕಿ ಇಟ್ಟುಕೊಳ್ಳಿ. ಮಕ್ಕಳಿಗ ಕಾಲ್‌ ಸ್ಫೂನ್‌ ದೊಡ್ಡವರಿಗೆ ಅರ್ಧಸ್ಪೂನ್‌ ಆದರೆ ಸಾಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಸ್ಫೂನ್‌, ರಾತ್ರಿ ಊಟವಾದ ನಂತರ ಮಲಗುವ ಮುಂಚೆ ಅರ್ಧಸ್ಪೂನ್‌ ಶುಂಠಿಯ ಲೇಹವನ್ನು ತೆಗೆದುಕೊಳ್ಳಬಹುದು.

ಇದನ್ನು ತಿಂದ ನಂತರ ಸ್ವಲ್ಪ ಬಿಸಿ ನೀರನ್ನು ಕುಡಿಯಬೇಕು. ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವುದು ಉತ್ತಮ. ಬೇಸಿಗೆ ಕಾಲದಲ್ಲಿ ತಣ್ಣಗಿರುವ ನೀರನ್ನು ಕುಡಿದರೂ ತೊಂದರೆ ಇಲ್ಲ. ಒಂದು ವಾರ ತೆಗೆದುಕೊಂಡರೆ ನಿಮಗೆ ಗೊತ್ತಾಗುತ್ತದೆ ಇದು ಎಷ್ಟು ಪರಿಣಾಮಕಾರಿಯಾಗಿದೆ ಎಂದು. ತುಂಬಾ ದಿವಸದಿಂದ ಅಲರ್ಜಿಯಿಂದ ಬಳಲುತ್ತಿರುವವರು ಒಂದು ತಿಂಗಳಾದರೂ ತೆಗೆದುಕೊಳ್ಳುವುದು ಉತ್ತಮ.

ಒಂದು ವಾರವಾದರೂ ಕೆಡುವುದಿಲ್ಲ. ಇದು ತಿನ್ನಲು ರುಚಿಕರ ಮತ್ತು ಅಲರ್ಜಿಯನ್ನು ಹೋಗಲಾಡಿಸುತ್ತದೆ. ಅಲರ್ಜಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ತಿಳಿಸಿಕೊಡುತ್ತೇನೆ. ಹೊರಗಡೆ ತಿರುಗಾಡುವಾಗ ಮತ್ತು ಮನೆಯಲ್ಲಿ ಧೂಳನ್ನು ತೆಗೆಯುವಾಗ, ಕೆಲವರಿಗೆ ಒಗ್ಗರಣೆಯೂ ಆಗಿಬರುವುದಿಲ್ಲ, ಅಂತಹವರಿಗೆ ಬೇಗನೇ ಅಲರ್ಜಿ ಉಂಟಾಗುತ್ತದೆ. allergy

ಆದ್ದರಿಂದ ಮಾಸ್ಕ್‌ ಧರಿಸುವುದು ಉತ್ತಮ. ಅಲರ್ಜಿ ಇರುವವರು ಮೊಸರನ್ನು ತೆಗೆದುಕೊಳ್ಳಬಾರದು ಅದರಲ್ಲೂ ರಾತ್ರಿಯ ಸಮಯದಲ್ಲಿ ಮೊಸರನ್ನು ತಿಂದರೆ ಅಲರ್ಜಿ ಬೇಗನೆ ಆಗುತ್ತದೆ. ರಾತ್ರಿಯ ವೇಳೆಯಲ್ಲಿ ಚಳಿಗಾಲ, ಮಳೆಗಾಲದ ಸಮಯದಲ್ಲಿ ತುಂಬಾ ತಂಪಾಗಿರುವ ಹಣ್ಣುಗಳನ್ನು ಸೇವನೆ ಮಾಡಬಾರದು. ತಂಪಾದ ಪಾನೀಯ ಮತ್ತು ಐಸ್‌ಕ್ರಿಂ ಅನ್ನು ಸೇವನೆ ಮಾಡಬಾರದು. ಐಸ್‌ ಇಲ್ಲದ ಜ್ಯೂಸ್‌ ಕುಡಿಯಿರಿ ಜೊತೆಗೆ ಬೇಸಿಗೆ ಕಾಲದಲ್ಲಿ ಜ್ಯೂಸ್‌ ಕುಡಿಯುವುದು ಉತ್ತಮ. allergy

Leave A Reply

Your email address will not be published.