Ultimate magazine theme for WordPress.

North ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ

0 60,651

North facing door ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ ಎನ್ನುವ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು. ಬಾಯಿಯಿಂದ ಒಳ ಹೋಗುವ ಗಾಳಿ, ನೀರು, ಆಹಾರ, ಶುದ್ಧವಾಗಿದಷ್ಟು ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆಯೇ ಮನೆಯ ಮುಖ್ಯದ್ವಾರ. ಅದನ್ನೇ ಸಿಂಹದ್ವಾರ ಪ್ರಧಾನ ದ್ವಾರವೆಂದು ಕರೆಯುತ್ತೀವಿ.

ಇಲ್ಲಿಂದ ಪ್ರವೇಶಿಸುವ ವ್ಯಕ್ತಿ, ಶಕ್ತಿ ಜೀವನವನ್ನೇ ಬದಲಾಯಿಸಬಹುದು. ಇವುಗಳ ನಿರ್ಗಮಕ್ಕೆ ಹಿಂಬದಿ ದ್ವಾರವೂ ಅಷ್ಟೇ ಮುಖ್ಯ. ಪ್ರಧಾನ ದ್ವಾರಕ್ಕೆ ಹಿಂಬದಿ ದ್ವಾರಕ್ಕೆ ಹೊಸ್ತಿಲು ಇರಲೇಬೇಕು. ಮುಂಬದಿ ದ್ವಾರಕ್ಕಿಂತ ಹಿಂಬದಿ ದ್ವಾರ ಒಂದು ಪಟ್ಟು ಚಿಕ್ಕದಾಗಿರಬೇಕು. ಅದೇ ರೀತಿ ಬಾಗಿಲುಗಳ ಎಡ ಬಲಕ್ಕೆ ಕಿಟಕಿಗಳಿರಬೇಕು. ಅವು ಮನುಷ್ಯನ ಮುಖದಲ್ಲಿನ ಎರಡು ಕಣ್ಣುಗಳಿದ್ದಂತೆ. North

ಕನಿಷ್ಠ ಒಂದು ಕಿಟಕಿಯಾದರೂ ಇರಬೇಕು. ಬಾಗಿಲುಗಳ ಗಾತ್ರಕ್ಕೂ ಕಿಟಕಿಗಳ ಗಾತ್ರಕ್ಕೂ ಹೊಂದಾಣಿಕೆ ಇರಬೇಕು. ಬಾಗಿಲು ಒಂದು ಬದಿಗೆ ಉಚ್ಛದಲ್ಲಿರಬೇಕು. ಸಾರ್ವಜನಿಕ ಕಟ್ಟಡ ದೇವಾಲಯ ಊರಿನ ಮುಖ್ಯಸ್ಥರ ಮನೆ ಇವುಗಳಿಗೆ ಮಧ್ಯ ಭಾಗದಲ್ಲಿ ಬಾಗಿಲು ಇಡಬಹುದು. ಸಾರ್ವಜನಿಕ ರಸ್ತೆ ಯಾವ ಕಡೆ ಬಂದರೂ ಆ ದಿಕ್ಕಿನಲ್ಲಿಯೇ ಮನೆಯ ಮುಖ್ಯದ್ವಾರ ಮತ್ತು ನಿವೇಶನದ ಗೇಟ್‌ ಇಡಬೇಕು.

ಇಂತಹ ಸಂದರ್ಭದಲ್ಲಿ ದಿಕ್ಕನ್ನು ಪರಿಗಣಿಸಬೇಕಾಗಿಲ್ಲ. ಮೂಲೆ ದಿಕ್ಕುಗಳು ಸೇರುವ ಜಾಗದಲ್ಲಿ ಯಾವುದೇ ಕಡೆ ಬಾಗಿಲು ಇಡಬಾರದು. ಬಾಗಿಲುಗಳು ಮತ್ತು ಕಿಟಕಿಗಳು ಸಮಸಂಖ್ಯೆಯಲ್ಲಿರಬೇಕು. ವಾಸ್ತುಶಾಸ್ತ್ರದಲ್ಲಿ ಪೂರ್ವ ಶ್ರೇಯಸ್ಸು, ಪಶ್ಚಿಮ ಶಾಂತಿ, ಉತ್ತರ ಸಂಪತ್ತು ಹಾಗೂ ದಕ್ಷಿಣ ಮೋಕ್ಷದ್ವಾರಗಳೆಂದು ಕರೆಯಲಾಗುತ್ತದೆ. ಇನ್ನು ದ್ವಾರಗಳ ಸಂಖ್ಯೆ ಮತ್ತು ಅವುಗಳು ನೀಡುವ ಫಲವನ್ನು ಈ ರೀತಿ ಹೇಳಲಾಗಿದೆ. ಒಂದು ಬಾಗಿಲು ಶುಭಕರ, ಎರಡು ಒಳ್ಳೆಯದು, ಮೂರು ಕಲಹ, North

ಶತ್ರು ವೃದ್ಧಿ ನಾಲ್ಕು ದೀರ್ಘಾಯಸ್ಸು, ಐದು ರೋಗ ಹಾಗೂ ಮೃತ್ಯು ಆರು ಪುತ್ರ ಪ್ರದ, ಏಳು ಮೃತ್ಯುಪ್ರದ, ಎಂಟು ಚಿರಭಾಗ್ಯ, ಒಂಭತ್ತು ದೇಹಪೀಡೆ, ಹತ್ತು ನಾಶ ಹಾಗೂ ಚೋರ ಭಯ, ಹನ್ನೊಂದು ಧನನಾಶ, ಹನ್ನೆರಡು ವ್ಯಾಪಾರಾಭಿವೃದ್ಧಿ, ಹದಿಮೂರು ಶೀಘ್ರ ಮರಣ, ಹದಿನಾಲ್ಕು ಸಂಪತ್ಭರಿತ, ಹದಿನೈದು ಫಲನಾಶ, ಹದಿನಾರು ಧನಲಾಭ, ಹದಿನೇಳು ದಾರಿದ್ರ್ಯ,

ಹದಿನೆಂಟು ಲಕ್ಷ್ಮಿಕಾಂತ, ಹತ್ತೊಂಭತ್ತು ಪೀಡೆ, ಇಪ್ಪತ್ತು ಸದಾರೋಗವೆಂದು ಹೇಳಲಾಗುತ್ತದೆ. ಮನೆ ನಿರ್ಮಿಸುವಾಗ ಅಥವಾ ಖರೀದಿಸುವಾಗ ಪೂರ್ವಾಭಿಮುಖವಾಗಿರುವ ಮನೆ, ಉತ್ತರಾಭಿಮುಖವಾಗಿರುವ ಮನೆಯನ್ನು ಖರೀದಿಸುತ್ತಾರೆ. ಆದರೆ ಕೆಲವು ಕಡೆ ಪಶ್ಚಿಮಾಭಿಮುಖವಾಗಿರುವ ಮನೆಯನ್ನು ನಿರ್ಮಿಸುತ್ತಾರೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ North

ನಿಮ್ಮ ಮನೆ ಬಾಗಿಲು ಉತ್ತರಕ್ಕೆ ಮುಖ ಮಾಡಿದರೆ ತುಂಬಾ ಮಂಗಳಕರ. ಉತ್ತರ ದಿಕ್ಕನ್ನು ಕುಬೇರ ದಿಕ್ಕು ಎಂದು ಕರೆಯಲಾಗಿದೆ. ಹಾಗಾಗಿ ಮುಖ್ಯದ್ವಾರ ಈ ದಿಕ್ಕಿನಲ್ಲಿರುವುದೇ ಸೂಕ್ತ ಎಂಬ ಅಭಿಪ್ರಾಯ ವಾಸ್ತುತಜ್ಞರದ್ದು. ಈ ದಿಕ್ಕಿನಲ್ಲಿ ಮುಖ್ಯದ್ವಾರವಿದ್ದರೆ ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುತ್ತದೆ. ಏಕೆಂದರೆ ಹೆಚ್ಚಿನ ದೇವರುಗಳು ಈ ದಿಕ್ಕಿಗೆ ಆಧಾರಿತವಾಗಿವೆ. ಇನ್ನು ನಿಮ್ಮ ಮನೆ ಉತ್ತರ ದಿಕ್ಕಿಗೆ ಮುಖಮಾಡಿದ್ದರ ಮುಖ್ಯದ್ವಾರ ಯಾವಾಗಲೂ ಈಶಾನ್ಯ ಭಾಗದಲ್ಲಿರುವಂತೆ ನೋಡಿಕೊಳ್ಳಬೇಕು.

ಏಕೆಂದರೆ ಪೂರ್ವದಿಂದ ಸೂರ್ಯಬಿಸಿಲಿನ ಹರಿತ ಪಶ್ಚಿಮದ ಕಡೆ ಸಾಗುತ್ತದೆ. ಜೊತೆಗೆ ಸ್ವಲ್ಪ ಮಧ್ಯಭಾಗದಲ್ಲೂ ಬಾಗಿಲು ಮತ್ತು ಈಶಾನ್ಯ ಭಾಗದಲ್ಲಿ ಕಿಟಕಿ ಅಳವಡಿಸಬಹುದು. ಅದೇ ರೀತಿ ಉತ್ತರದ ಬಾಗಿಲು ಅಂದರೆ ನಂದಿ ಬಾಗಿಲು ಯಾವುದೇ ಕಾರಣಕ್ಕೂ ಮನೆಯ ನೈರುತ್ಯ ಭಾಗದ ತಗ್ಗಿನಲ್ಲಿರಬಾರದು. ಮನೆಯ ನೈರುತ್ಯ ಭಾಗ ಮನೆಯ ಎಲ್ಲಾ ಭಾಗಗಳಿಗಿಂತ ಎರಡು ಇಂಚು ಎತ್ತರದಲ್ಲಿರಬೇಕು. North

ಮನೆಯ ದೇವರ ಮೂಲೆ ತಗ್ಗಿರಬೇಕು. ಜೊತೆಗೆ ದೇವರ ಮೂಲೆಯಲ್ಲಿ ಸ್ವಲ್ಪ ಜಾಗವನ್ನು ಬಿಟ್ಟಿರಬೇಕು. ಹಾಗೆಯೇ ಎಲ್ಲಕ್ಕಿಂತ ಮುಖ್ಯವಾದದ್ದು ದೇವ ಮೂಲೆಯಲ್ಲಿ ಬಾರವಾದ ವಸ್ತುಗಳನ್ನು ಇಡಬಾರದು. ಸಾಮಾನ್ಯವಾಗಿ ಹೆಚ್ಚಿನ ಜನರು ನೈರುತ್ಯ ಭಾಗದಲ್ಲಿ ಕುಬೇರ ಮೂಲೆ ಇದೆ ಎಂದು ತಿಳಿದಿರುತ್ತಾರೆ. ಅದರೆ ಸತ್ಯವೇನೆಂದರೆ ಕುಬೇರವಿರುವುದು ಉತ್ತರ ಭಾಗದಲ್ಲಿ ಹಾಗಾಗಿ ಪೂರ್ವ ಮತ್ತು ಉತ್ತರ ಭಾಗದಲ್ಲಿ ಬಾಗಿಲನ್ನು ಇಟ್ಟರೆ ಶುಭ.

ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಯಾವುದೇ ದಿಕ್ಕಿನಲ್ಲಿ ಬಾಗಿಲು ಇಡಬೇಕಾದರೆ ವಾಸ್ತುಶಾಸ್ತ್ರಜ್ಞರನ್ನು ಸಂರ್ಪಕಿಸಿ ವಿಚಾರ ಮಾಡಿ ಮುಂದುವರಿಯುವುದು ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ಮನೆ ಶ್ರೇಯಸ್ಕರವಾಗಿರುತ್ತದೆ. ನಿಮ್ಮ ಮನೆಯ ಎಲ್ಲಾ ಸದಸ್ಯರು ಸುಖವನ್ನು ಅನುಭವಿಸುವುದಕ್ಕೆ ವಾಸ್ತು ಪ್ರಕಾರ ಮನೆಯನ್ನ ನಿರ್ಮಾಣ ಮಾಡಬೇಕು. North

ಅದರಲ್ಲು ದಕ್ಷಿಣ ಮತ್ತು ಪಶ್ಚಿಮಕ್ಕೆ ಬಾಗಿಲನ್ನು ಇಡಬೇಕಾದರೆ ವಾಸ್ತುಶಾಸ್ತ್ರಜ್ಞರನ್ನು ಕೇಳಿಯೇ ಮುಂದುವರಿಯುವುದು ಉತ್ತಮ, ಇಲ್ಲವಾದರೆ ತೊಂದರೆಗಳು ಎದುರಾಗಬಹುದು. ಹಾಗೆಯೇ ಉತ್ತರ ದಿಕ್ಕಿಗೆ ಗುರುಗ್ರಹವಿರುತ್ತಾನೆ. ಹಾಗಾಗೀ ಉತ್ತರ ದಿಕ್ಕಿಗೆ ಬಾಗಿಲು ಇಟ್ಟವರು ಗುರುಗ್ರಹವನ್ನು ಪ್ರಾರ್ಥಿಸಿದರೆ ಅಭಿವೃದ್ಧಿ ಹೊಂದುತ್ತಾರೆ.

ಇನ್ನು ಮುಖ್ಯದ್ವಾರದ ಮೂಲಕ ಮನೆಯ ಒಳಗಡೆ ಬರುವಾಗ ನೆಲದಿಂದ ಮೆಟ್ಟಿಲನ್ನು ಹತ್ತಿಕೊಂಡು ಬರುವಂತೆ ಇರಬೇಕು. ಮನೆಯಿಂದ ಹೊರಗಡೆ ಹೋಗುವಾಗ ಮೆಟ್ಟಿಲನ್ನು ಇಳಿದು ಹೋಗುವಂತೆ ಇರಬೇಕು. ಆ ಮೆಟ್ಟಿಲುಗಳ ಸಂಖ್ಯೆ ಮೂರು ಅಥವಾ ಐದು ಇರಬೇಕು. ಅದಕ್ಕಿಂತ ಹೆಚ್ಚಿಗೆ ಇದ್ದರೆ ಬೆಸ ಸಂಖ್ಯೆಯಲ್ಲಿಯೇ ಹೆಚ್ಚಿಸುತ್ತ ಹೋದರೆ ಸೂಕ್ತ. ಮನೆಯ ಮುಖ್ಯ ಬಾಗಿಲು ಪೂರ್ವ, ಉತ್ತರ, ಈಶಾನ್ಯದಿಕ್ಕಿನಲ್ಲಿದ್ದರೆ ಹೆಚ್ಚಿನದವರಾಗಿರುತ್ತದೆ.

ಈ ದಿಕ್ಕಿನಲ್ಲಿ ಬಾಗಿಲು ಇಡುವುದಕ್ಕೆ ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಪಶ್ಚಿಮ ಅಥವಾ ವಾಯುವ್ಯ ದಿಕ್ಕು ಮಧ್ಯಮ ಫಲ ನೀಡುತ್ತದೆ. ಇನ್ನು ರಾಶಿ ಆಧಾರದಲ್ಲಿ ಹೇಳುವುದಾದರೆ ಕರ್ಕಾಟಕ, ವೃಶ್ಚಿಕ, ಮೀನಾ ರಾಶಿಯವರಿಗೆ ಉತ್ತರ ದಿಕ್ಕು, ಮೇಷ, ಸಿಂಹ, ಧನುಸ್ಸು ರಾಶಿಯವರಿಗೆ ಪೂರ್ವ ದಿಕ್ಕು, ವೃಷಭ, ಕನ್ಯಾ, ಮಕರದವರಿಗೆ ದಕ್ಷಿಣ ದಿಕ್ಕು, ಮಿಥುನ, ತುಲಾ, ಸಿಂಹರಾಶಿಯವರಿಗೆ ಪಶ್ಚಿಮದಿಕ್ಕಿನ ಬಾಗಿಲು ಆಗಿ ಬರುತ್ತದೆ.

ಜೊತೆಗೆ ಮುಖ್ಯದ್ವಾರವು ಇತರೆ ಬಾಗಿಲುಗಳಿಗಿಂತ ಹೆಚ್ಚು ವಿಸ್ತಾರವಾಗಿರಬೇಕು. ಎರಡು ಬಾಗಿಲುಗಳನ್ನು ಇಡುವುದು ಶ್ರೇಯಸ್ಕರ. ಮುಖ್ಯಬಾಗಿಲಿಗೆ ಅತ್ಯುತ್ತಮವಾದ ಮರ ಬಳಸಬೇಕು. ಬಾಗಿಲು ತೆಗೆಯುವಾಗ, ಹಚ್ಚುವಾಗ ಶಬ್ಧಮಾಡಬಾರದು. ಮನೆಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸುವುದಕ್ಕೆ ಮನೆಯ ಮುಖ್ಯಬಾಗಿಲಿನ ಎರಡು ಬದಿಗಳಲ್ಲಿ ಕುಂಕುಮ ಅರಿಶಿಣ ದ್ರಾವಣದೊಂದಿಗೆ ಸ್ವಸ್ತಿಕ್‌ ಓಂ ಚಿಹ್ನೆಯನ್ನು ರಚಿಸಬೇಕು. ಹಾಗೇ ಮನೆಯ ಮುಖ್ಯಬಾಗಿಲು ಮನೆಯ ಒಳಭಾಗಕ್ಕೆ ತೆರೆದುಕೊಳ್ಳುವಂತೆ ಇರಬೇಕು.

ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ, ಮನೆಯೊಳಗೆ ಶಾಂತಿ ನೆಲೆಸುತ್ತದೆ. ಇನ್ನು ಒಡೆದ ಗಾಜಿನ ವಸ್ತುಗಳು ಜಂಕ್‌ ಇತ್ಯಾದಿ ವಸ್ತುಗಳನ್ನು ಮನೆಯ ಮುಖ್ಯದ್ವಾರದ ಬಳಿ ಇಡಬೇಡಿ. ಈ ರೀತಿ ಮಾಡಿದರೆ ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೇ ಇದರಿಂದ ಸಂಪತ್ತು ಮತ್ತು ಹಣದ ನಷ್ಟವಾಗುತ್ತದೆ. ಇನ್ನು ಮುಖ್ಯಬಾಗಿಲು ನೆಲಕ್ಕೆ ತಾಗಿರಬಾರದು.

ಇದು ಮನೆಯಲ್ಲಿ ನಕಾರಾತ್ಮಕ ಹರಿವನ್ನು ಹೆಚ್ಚಿಸುತ್ತದೆ. ಮನೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ಸರಿಪಡಿಸುವುದಕ್ಕೆ ಬಾಗಿಲಿಗೆ ಎಣ್ಣೆಯನ್ನು ಹಚ್ಚಿ ಸರಿಪಡಿಸಬೇಕು. ಮನೆಯ ಮುಖ್ಯದ್ವಾರದ ಮೇಲೆ ಗಣೇಶನ ಚಿತ್ರವನ್ನು ಹಾಕಿ, ಗಣೇಶನನ್ನು ವಿಘ್ನ ವಿನಾಶಕ ಎನ್ನಲಾಗುತ್ತದೆ. ವಿಶ್ನವಿನಾಶಕ ಎಂದರೆ ಎಲ್ಲಾ ದುಖಃ ಮತ್ತು ಕಷ್ಟಗಳನ್ನು ಸೋಲಿಸುವನು ಎಂದರ್ಥ.

ಆದ್ದರಿಂದ ಯಾವುದೇ ಪೂಜೆಗೂ ಮುನ್ನ ಗಣೇಶನನ್ನ ಪೂಜಿಸಬೇಕೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ವಾಸ್ತುದೋಷವಿದ್ದರೆ ಮನೆಯ ಮುಖ್ಯದ್ವಾರದ ಮೇಲೆ ಗಣೇಶನ ಚಿತ್ರವನ್ನು ಇಡಬೇಕು. ಹೀಗೆ ಮಾಡುವುದರಿಂದ ಮನೆಯ ಒಳಗಡೆ ನಕಾರಾತ್ಮಕತೆ ಬರುವುದಿಲ್ಲ. ಜೊತೆಗೆ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಹಾಗೆಯೇ ಮುಖ್ಯಬಾಗಿಲಿನ North

ಮೇಲೆ ತಾಮ್ರದ ಸೂರ್ಯನನ್ನು ಹಾಕಿ ಮಾರುಕಟ್ಟೆಯಲ್ಲಿ ಸೂರ್ಯದೇವನ ವಿಗ್ರಹಗಳು ಲೋಹಗಳಲ್ಲಿ ಸುಲಭವಾಗಿ ಸಿಗುತ್ತವೆ. ಮುಖ್ಯದ್ವಾರದ ಮೇಲೆ ಸೂರ್ಯನ ತಾಮ್ರದ ವಿಗ್ರಹವನ್ನು ಹಾಕಿ ನಂತರ ಮನೆಯ ಒಳಗಡೆ ಬರುವಾಗ ಮತ್ತು ಹೋಗುವಾಗ ಸಂತೋಷ ಮತ್ತು ಸಂಮೃದ್ಧಿಗಾಗಿ ಸೂರ್ಯದೇವರನ್ನು ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ವ್ಯಕ್ತಿಯ ಗ್ರಹದೋಷಗಳು ನಿವಾರಣೆಯಾಗಿ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.

ಹೀಗೆ ಮಾಡುವುದರಿಂದ ಒಬ್ಬ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತನಾಗುತ್ತಾನೆ. ಇನ್ನು ಮನೆಯಲ್ಲಿರುವ ವಾಸ್ತುದೋಷವನ್ನು ಮನೆಯಿಂದ ಹೊರಗಡೆ ಹಾಕಬೇಕೆಂದರೆ ಮನೆಯ ಹಾಲ್‌ನಲ್ಲಿ ಬೆಳಿಗ್ಗೆ ಸಾಯಂಕಾಲ ಅರ್ಧಗಂಟೆ ಓಂಕಾರ ಮೊಳಗುವ ಶಬ್ಧವನ್ನು ಹಾಕಬೇಕು. ಇದರಿಂದ ಬಹಳ ಒಳ್ಳೆ ರೀತಿಯಲ್ಲಿ ವಾಸ್ತುದೋಷ ನಿವಾರಣೆಯಾಗುತ್ತದೆ. ಈ ಸ್ಥಳದಲ್ಲಿ ಉಪ್ಪನ್ನು ಇಟ್ಟರೆ ತುಂಬಾ ಒಳ್ಳೆಯದು. ಇದರಿಂದ ಎಲ್ಲಾ ವಾಸ್ತುದೋಷಗಳು ಪರಿಹಾರವಾಗುತ್ತದೆ.

Leave A Reply

Your email address will not be published.