Ultimate magazine theme for WordPress.

Knee Pain / ಮಂಡಿ ನೋವಿಗೆ 4 ಮನೆಮದ್ದು

0 11,738

Knee Pain health tips in kannada ನಾವು ಈ ಲೇಖನದಲ್ಲಿ ಮಂಡಿ ನೋವು ಮತ್ತು ಮೊಳಕಾಲು ನೋವಿಗೆ ನಾಲ್ಕು ಮನೆಮದ್ದು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಕೆಲವು ಜನರ ತೂಕ ಹೆಚ್ಚಾಗಿರುತ್ತದೆ. ಇದೊಂದು ಪ್ರಧಾನ ಕಾರಣ. ಈ ಸಮಸ್ಯೆಗೆ ನಮ್ಮ ಅಜೀರ್ಣಾ ಸಮಸ್ಯೆ ಕಾರಣವಾಗುತ್ತದೆ. ಈಗಿನ ಅಡುಗೆ ಮನೆಯಲ್ಲಿ ನಿಂತು ಅಡುಗೆ ಮಾಡುವುದರಿಂದ ಹೆಣ್ಣುಮಕ್ಕಳಲ್ಲಿ ಮಂಡಿ ನೋವಿನ ಸಮಸ್ಯೆ ಇರುವುದನ್ನು ನಾವು ನೋಡಬಹುದು. ಗಂಡು ಮಕ್ಕಳಲ್ಲಿ ಹೃದಯಾಘಾತ

ಹೆಚ್ಚು ಇರುತ್ತದೇ ಎಂಬುದನ್ನು ಹೇಳಲಾಗಿದೆ. ಈ ಲೇಖನದಲ್ಲಿ ಮಂಡಿ ನೋವಿನ ಸಮಸ್ಯೆಗೆ ಶಾಶ್ವತ ಪರಿಹಾರ ಈ ಕುರಿತಾಗಿ ಮಾಹಿತಿಯನ್ನು ನೋಡೋಣ. ಮಂಡಿ ನೋವು ಏಕೆ ಬರುತ್ತದೆ. ಹೇಗೆ ಬರುತ್ತದೆ. ಈ ಸಮಸ್ಯೆಗೆ ಪ್ರಧಾನ ಕಾರಣವೇನು , ಇದರ ಲಕ್ಷಣವೇನು , ಇದನ್ನು ಸಂಪೂರ್ಣವಾಗಿ ಪರಿಹಾರ ಮಾಡಲು ನಾವು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ. Knee Pain

ಮಂಡಿ ನೋವು ಅನ್ನೋದು ಬರುವುದಕ್ಕೆ ಪ್ರಧಾನ ಕಾರಣ. ಕೆಲವು ಜನರ ತೂಕ ಹೆಚ್ಚಾಗುತ್ತದೆ. ಇದೇ ಪ್ರಧಾನ ಕಾರಣ. ನಮ್ಮ ದೇಹದ ತೂಕ ಎಷ್ಟು ಹೆಚ್ಚಾಗುತ್ತದೆ ಅಷ್ಟು ನಮ್ಮ ಮಂಡಿಯ ಕೀಲುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಅದೇ ರೀತಿ ನಮ್ಮ ಶರೀರಕ್ಕೆ ಒಂದು ನಿರ್ಧಿಷ್ಟವಾದ ತೂಕ ಇರುತ್ತದೆ. ಆ ತೂಕ ದಾಟಿ ನಾವು ಜಾಸ್ತಿ ತೂಕ ಹೆಚ್ಚಾದರೆ ಮಂಡಿಗೆ ಅಧಿಕ ಒತ್ತಡವಾಗಿ ಅಲ್ಲಿರುವ ಮೃದು ಎಲುಬುಗಳು ಒಣಗುತ್ತದೆ. Knee Pain

ಅಲ್ಲಿ ಮಂಡಿಗೆ ತೊಂದರೆ ಉಂಟಾಗಿ ನೋವು ಕಾಣಿಸಿಕೊಳ್ಳುತ್ತದೆ. ಮತ್ತಷ್ಟು ಕಾರಣ ಅಂದರೆ ಜೀರ್ಣಾಂಗದ ವ್ಯವಸ್ಥೆಯಲ್ಲಿ ಆಗುವ ತೊಂದರೆಗಳು . ತಿಂದ ಆಹಾರ ಸರಿಯಾಗಿ ಜೀರ್ಣಾವಾಗದೆ ಆಮ ಸೃಷ್ಟಿಯಾಗಿ ವಾತಾ ವಿಕಾರ ಉಂಟಾಗಿ ಅಲ್ಲಿ ವಾತಾ ನಮ್ಮ ಕೀಲುಗಳಲ್ಲಿ ಶ್ರಾವಿಕ ದ್ರವಗಳನ್ನು ಸಂಪೂರ್ಣವಾಗಿ ಒಣಗಿಸಿ ಮೃದು ಎಲುಬುಗಳನ್ನು ಒಣಗಿಸಲು ಕಾರಣವಾಗುತ್ತದೆ. Knee Pain

ಪ್ರಾಣವಾಯು, ಅಪಾನ ವಾಯು, ವ್ಯಾನ ವಾಯು, ಸಮಾನ ವಾಯು, ಮತ್ತು ಉದಾನವಾಯು , ಪಂಚ ಪ್ರಾಣಗಳಲ್ಲಿ ಅಪಾನವಾಯು , ವ್ಯಾನ ವಾಯು ಹಾಗೂ ಉದಾನ ವಾಯುಗಳಲ್ಲಿ ತೊಂದರೆ ಉಂಟಾದಾಗ ಹೆಚ್ಚು ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಹಾಗೂ ವಾತಾ ವಿಕಾರ ಉಂಟಾದಾಗ ನಮ್ಮಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ

ನಮ್ಮ ಅಜೀರ್ಣ ಸಮಸ್ಯೆಯೇ ಪ್ರಧಾನ ಕಾರಣ. ತಿಂದಿರುವ ಆಹಾರ ಜೀರ್ಣವಾಗದೇ ಇದ್ದರೆ ಅಲ್ಲಿ ಆಮ ವಾತಾ ಸೃಷ್ಟಿಯಾಗಿ , ಆ ಆಮ ವಾತಾವೇ ನಮ್ಮ ಮಂಡಿ ಕೀಲುಗಳನ್ನು ಹಾಳು ಮಾಡುತ್ತದೆ . ಮಲಬದ್ಧತೆ ಇದ್ದರೂ ಇದೇ ಸಮಸ್ಯೆ ಉಂಟಾಗುತ್ತದೆ. ಹಾಗೂ ಹೆಚ್ಚು ಹೆಣ್ಣು ಮಕ್ಕಳು ನಿಂತು ಅಡುಗೆ ಮಾಡುವುದು ದೂರ ಆಗಬೇಕು. ಕೂತು ಅಡುಗೆ ಮಾಡುವ ವಿಧಾನವನ್ನು ಅನುಸರಿಸಿ.

ನಂತರ ಹೆಚ್ಚು ನಡೆಯುವುದರಿಂದ ಅಂದರೆ ಅವಶ್ಯಕತೆಗಿಂತ ಹೆಚ್ಚು ನಡೆಯುವುದರಿಂದ ಕೂಡ ಮಂಡಿ ನೋವು ಬರುತ್ತದೆ. ಮಾನಸಿಕ ಒತ್ತಡಗಳಿಂದಲೂ ಕೂಡ ಬರುತ್ತದೆ. ಇದನ್ನು ಸರಿಪಡಿಸುವುದು ಹೇಗೆ, ಇದರ ಲಕ್ಷಣ ಗಳೇನು ಎಂಬುದನ್ನು ನೋಡೋಣ. ಮಂಡಿಯಲ್ಲಿ ಕಟ್ ಕಟ್ ಎಂದು ಶಬ್ಧ ಬರುತ್ತದೆ. ಮತ್ತು ಮಂಡಿಯನ್ನು ಮಡಿಚಲು ಆಗುವುದಿಲ್ಲ. ಮಂಡಿಯಲ್ಲಿ ಕೆಲವರಿಗೆ ಉರಿ , Knee Pain

ಊತ ಕಾಣಿಸಿಕೊಳ್ಳುತ್ತದೆ. ಮತ್ತೇ ಮಂಡಿಯಲ್ಲಿ ನೀರು ತುಂಬಿಕೊಳ್ಳುತ್ತದೆ. ಹಾಗೆಯೇ ಇನ್ನು ಕೆಲವರಿಗೆ ಮಂಡಿಯಲ್ಲಿ ಕರೆಂಟ್ ಹೊಡೆದ ಹಾಗೆ ಆಗುತ್ತದೆ. ಹೀಗೆ ಹಲವಾರು ಲಕ್ಷಣಗಳನ್ನು ನಾವು ಕಾಣಬಹುದು . ಇನ್ನು ಹೇಗೆ ಬರುತ್ತದೆ ಅಂದರೆ ಸೈನೋವಿಲ್ ಫ್ಲುಯಟ್ ಮತ್ತು ಮೃದು ಎಲುಬುಗಳು ದಪ್ಪವಾಗಿ ಇದು ಒಣಗಿ ಬರುತ್ತದೆ. ಈ ತರಹ ಸೇವೆತ ಉಂಟಾಗಿದೆ

ಎಂದರೆ ಇದಕ್ಕೆ ಪರಿಹಾರ ಏನು ಅಂದರೆ ಸರ್ಜರಿ ಸೂಕ್ತವಲ್ಲ ಇದರಿಂದ ಪ್ರಯೋಜನ ಇಲ್ಲ. ಕಂಡಿತವಾಗಿ ಮಂಡಿ ನೋವಿಗೆ ಪರಿಹಾರ ಇದೆ. ಕೆಲವೊಂದು ಯೋಗ ಮಾಡುವುರಿಂದ ಮಂಡಿ ನೋವು ನಿವಾರಣೆ ಆಗುತ್ತದೆ. ಕಾಲುಗಳು ಎರಡನ್ನು ನೀಡಿ ಮೊಳಕಾಲುಗಳ ಮೇಲೆ ಗಮನ ಹಿಟ್ಟು ಬೀಗಿ ಮಾಡುವುರಿಂದ ಅಂದರೆ 30 ಬಾರಿ ಉಸಿರು ಬಿಡುತ್ತಾ ಬಿಗಿ ಮಾಡಬೇಕು. ನಂತರ ಕಾಲನ್ನು ಮಡಿಚಿ ಮಡಿಚಿ ಹೀಗೆ 30 ಬಾರಿ ಮಾಡುವುದರಿಂದ ಕ್ರಿಯಾಶೀಲತೆ ಉಂಟು ಆಗುತ್ತದೆ.

ಇದನ್ನು ಎರಡೂ ಕಾಲುಗಳಿಗೂ ಮಾಡುವುದು ಹೀಗೆ ಮಾಡುವುದರಿಂದ ಮಂಡಿ ನೋವು ನಿವಾರಣೆ ಆಗುತ್ತದೆ. ಹಾಗೂ ಕೆಲವೊಂದು ಮನೆ ಮದ್ದುಗಳ ಮೂಲಕ ಕೂಡ ಬಳಸುವುದರಿಂದ ನಿವಾರಣೆ ಮಾಡಬಹುದು ಅವುಗಳು ಯಾವುದೆಂದರೆ ಎಕ್ಕದ ಎಲೆ, ನುಗ್ಗೆ ಸೊಪ್ಪು , ಬೇವಿನ ಎಲೆ ಹುಣಸೆ ಎಲೆ ಇದೆಲ್ಲವನ್ನು ಸಣ್ಣಗೆ ರುಬ್ಬಿಕೊಂಡು ಅದಕ್ಕೆ ಹರಳೆಣ್ಣೆ ಸೇರಿಸಿ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಿಸಿಯಾಗಿ ಮೊಣಕಾಲಿಗೆ ಹಚ್ಚಬೇಕು. ಹಚ್ಚಿ ಒಂದು ತೆಳುವಾದ ಬಟ್ಟೆ ಕಟ್ಟಬೇಕು.

ಇದನ್ನು ಮಲಗುವಾಗ ಮಾಡಬೇಕು. ಬೆಳಗ್ಗೆ ಎದ್ದು ಕಾಲಿನ ಮೇಲೆ ಬಿಸಿ ನೀರು ಹಾಕಬೇಕು. ಹೀಗೆ ಮಾಡುವುದರಿಂದ ಮೃದು ಎಲುಬುಗಳನ್ನು ಬೆಳೆಯಲು ಸಹಾಯ ಮಾಡುತ್ತದೆ. ಒಂದು ಮೂರು ನಾಲ್ಕು ತಿಂಗಳು ಇದೇ ರೀತಿ ಕಟ್ಟುತ್ತಿದ್ದರೆ ಮಂಡಿ ಹೊಸದಾಗಿ ಆಗುತ್ತದೆ. ಇನ್ನು ಕೆಲವು ಜನರಿಗೆ ಸಂಧಿವಾತ ವ್ಯಾಪಕವಾಗಿದ್ದರೆ ಕೆಲವು ಸಂದರ್ಭದಲ್ಲಿ ಉಪಯೋಗ ಆಗುವುದಿಲ್ಲ.

ಆಯುರ್ವೇದದಲ್ಲಿ ಪಂಚ ಕರ್ಮ ಚಿಕಿತ್ಸೆ ಎಂದು ಬರುತ್ತದೆ. ಜಾನು ಬಸ್ತಿ, ಪತ್ರ ಪಿಂಡ ಶ್ವೇಧ , ಯೋಗ ಬಸ್ತಿ , ಕಾಲ ಬಸ್ತಿ ಮತ್ತು ಕರ್ಮ ಬಸ್ತಿ ಪಂಚಕರ್ಮ ವಿರೇಚನ ವಾಮನಾಥನ ಚಿಕಿತ್ಸೆ ಇದೆ ಈ ಚಿಕಿತ್ಸೆ ತೆಡೆದುಕೊಂಡರೆ ತೂಕ ಕೂಡ ಕಡಿಮೆಯಾಗುತ್ತದೆ. ಸಂಪೂರ್ಣವಾಗಿ ವಾತಾ ವಿಕಾರಗಳು ದೂರವಾಗಿ ಮಂಡಿ ನೋವಿಗೆ ಶಾಶ್ವತ ಪರಿಹಾರ ಸಿಗುತ್ತದೆ.

Leave A Reply

Your email address will not be published.