Ultimate magazine theme for WordPress.

lakshmi ಈ ವಸ್ತುಗಳು ಮನೇಲಿದ್ರೆ ಕೋಟ್ಯಧಿಪತಿ ಆಗಬಹುದು

0 3,822

lakshmi Astrology Vastu in kannadatopten ನಾವು ಈ ಲೇಖನದಲ್ಲಿ ಮನೆಯಲ್ಲಿ ಈ ಮೂರು ವಸ್ತುಗಳು ಇದ್ದರೆ , ನಾವು ಕೋಟ್ಯಾಧಿಪತಿಗಳಾಗಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಪರಮೇಶ್ವರ ನ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲೆ ಇದ್ದರೆ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತದೆ. ಮನೆಯಲ್ಲಿ ವಾಸ್ತು ದೋಷಗಳು ಇದ್ದರೆ , ಮೊದಲು ಅವುಗಳನ್ನು ನಿವಾರಿಸಿಕೊಳ್ಳಬೇಕು. ಮನೆಯ ವಾಸ್ತು ದೋಷ ಪರಿಹಾರ ಮಾಡಿಕೊಂಡು ಅದೃಷ್ಟ ಒದಗಿ ಬರಬೇಕು . ನಾವು ಅಂದುಕೊಂಡ ರೀತಿಯಲ್ಲಿ ಕೆಲಸ ಕಾರ್ಯಗಳು ಅಡ್ಡಿ ಆತಂಕಗಳು ಇಲ್ಲದೇ ನಡೆಯಬೇಕು ಅಂದರೆ

ಈ ಮೂರು ವಸ್ತುಗಳನ್ನು ತಪ್ಪದೇ ಮನೆಯಲ್ಲಿ ಇಡಬೇಕು . ಇದರಿಂದಾಗಿ ನಮ್ಮ ಜಾತಕದಲ್ಲಿರುವ ಗ್ರಹ ದೋಷಗಳು ನಿವಾರಣೆಯಾಗುತ್ತದೆ. ಮತ್ತು ಶುಭ ಫಲಿತಾಂಶಗಳು ನಿಮ್ಮದಾಗುತ್ತದೆ. ಮನೆಯ ಬಾಗಿಲಲ್ಲಿ ಗಣೇಶನ ಮೂರ್ತಿಯನ್ನು ಹಿಡಲೇ ಬೇಕು . ಮನೆಯಲ್ಲಿ ವಾಸ್ತು ದೋಷ ಇದ್ದಾಗ ಮನೆಯ ಸದಸ್ಯರ ನಡುವೆ ಕಲಹ ಉಂಟಾಗಿ ಮಾನಸಿಕ ನೆಮ್ಮದಿ ಇರುವುದಿಲ್ಲ. lakshmi

ಪದೇ ಪದೇ ಆರ್ಥಿಕ ಸಮಸ್ಯೆ ಕಾಡುತ್ತದೆ. ಆರೋಗ್ಯದ ಸಮಸ್ಯೆ ಎದುರಾಗುತ್ತದೆ. ಗಣೇಶನನ್ನು ಪೂಜಿಸುವುದರಿಂದ ಈ ದೋಷಗಳಿಂದ ಮುಕ್ತಿ ಪಡೆಯಬಹುದು . ಪ್ರಥಮ ಪೂಜಿತ ಗಣೇಶನನ್ನು ಪೂಜೆ ಮಾಡುವುದರಿಂದ ಸರ್ವ ವಿಜ್ಞಗಳು ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ಮೂರ್ತಿಯಲ್ಲಿ ಗಣೇಶನ ಜೊತೆ ಮೋದಕ ಮತ್ತು ಮೂಷಿಕ ನಿದ್ದರೆ ಇನ್ನೂ ಉತ್ತಮ. ಮನೆಯಲ್ಲಿ ಕೃಷ್ಣನ ಕೊಳಲು ಇಟ್ಟರೆ ಇನ್ನೂ ಅದೃಷ್ಟ. lakshmi

ಶ್ರೀ ಕೃಷ್ಣನಿಗೆ ಕೊಳಲು ಬಹಳ ಪ್ರಿಯ. ಕೊಳಲು ಇಲ್ಲದೆ ಕೃಷ್ಣನಿಲ್ಲ ಕೃಷ್ಣ ನಿಲ್ಲದೆ ಕೊಳಲು ಇಲ್ಲ. ಅನ್ನುವಷ್ಟು ನಂಟು ಬಾಂಧವ್ಯ . ಶ್ರೀ ಕೃಷ್ಣನ ಕೊಳಲಿನ ನಾದಕ್ಕೆ ಮನಸೋಲದ ಗೋಪಿಕೆಯರೆ ಇಲ್ಲ . ಗೋವುಗಳನ್ನ ಮೇಯಿಸುವಾಗ ಶ್ರೀ ಕೃಷ್ಣ ಸಂತೋಷಕ್ಕೆ ಕೊಳಲು ನುಡಿಸುತ್ತಿದ್ದನು .ಅಂತೆಯೇ ವಾಸ್ತು ಶಾಸ್ತ್ರದಲ್ಲೂ ಕೂಡ ಈ ಕೊಳಲಿಗೆ ಅಷ್ಟೇ ಮಹತ್ವ ಇದೆ. lakshmi

ಮನೆಯಲ್ಲಿ ಬೆಳ್ಳಿಯ ಕೊಳಲು ಇರಿಸುವುದರಿಂದ ಎಲ್ಲಾ ರೀತಿಯ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಮನೆಯಲ್ಲಿ ಬೆಳ್ಳಿ ಕೊಳಲು ಇಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ.ಲಕ್ಷ್ಮಿ ಓಡೋಡಿ ಬರುತ್ತಾಳೆ.
ಬೆಳ್ಳಿ ಕೊಳಲು ಧನಲಕ್ಷ್ಮಿಗೆ ಪ್ರಿಯ ಆಗಿರುವುದರಿಂದ ದೇವಿ ಧನಲಕ್ಷ್ಮಿ ಮನೆಯ ಕಷ್ಟಗಳನ್ನು ನಿವಾರಿಸುತ್ತಾಳೆ ಎಂದು ಹೇಳಲಾಗಿದೆ. lakshmi

ನೀವು ನಿಮ್ಮ ಮನೆಯಲ್ಲಿ ದೊಡ್ಡ ಬೆಳ್ಳಿ ಕೊಳಲು ಇಡಲಾಗದಿದ್ದರೆ ಪುಟ್ಟ ಬೆಳ್ಳಿಯ ಕೊಳಲನ್ನು ಇಡಬಹುದು. ಬೆಳ್ಳಿ ಕೊಳಲು ಮನೆಯಲ್ಲಿ ಸಕಾರಾತ್ಮಕ ಅಂಶವನ್ನು ಹೆಚ್ಚಿಸಿ ಒದಗಿ ಬರುವ ಸಂಕಷ್ಟದಿಂದ ಕುಟುಂಬಸ್ಥರನ್ನು ಪಾರು ಮಾಡುತ್ತದೆ.ಪರೀಕ್ಷೆಗಳಲ್ಲಿ ಯಶಸ್ಸನ್ನ ಪಡೆಯುವುದಕ್ಕೆ ವಿದ್ಯಾರ್ಥಿಗಳ ಕೋಣಿಯಲ್ಲಿ ಬಿಳಿ ಕೊಳಲು ಇಡೋದು ಉತ್ತಮ . ತಮಗೆ ಬೇಕಾದ ಕೆಲಸ ಸಿಗಬೇಕು ಎಂದು ಬಯಸುವವರು ತಮ್ಮ ಕೋಣೆಯ ಮುಖ್ಯದ್ವಾರದ ಬಳಿ ಹಳದಿ ಬಣ್ಣದ ಕೊಳಲನ್ನು ಇಟ್ಟುಕೊಳ್ಳಬೇಕು.

ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕು ಅಂದರೆ ಅಂಗಡಿಯಲ್ಲಿ ಬೆಳ್ಳಿ ಕೊಳಲು ಇಡುವುದು ಶುಭ ಎಂದು ಹೇಳಲಾಗಿದೆ . ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಕೊನೆಗಾಣಿಸಲು ಒಂದೇ ಬಣ್ಣದ ಎರಡು ಕೊಳಲುಗಳನ್ನು ಮನೆಯ ಹಾಲ್ ನಲ್ಲಿ ಇಡುವುದು ತುಂಬಾ ಒಳ್ಳೆಯದು . ಶಂಖದಿಂದ ಬರುವ ಓಂಕಾರದಿಂದ ದುರಾದೃಷ್ಟವೆಲ್ಲಾ , ಮಾಯವಾಗುತ್ತದೆ. ಮನೆಗೊಂದು ದೇವರ ಮನೆ ,ಅಲ್ಲೊಂದು ಶಂಖವಿದ್ದರೆ ಮನೆಯ ವರ್ಚಸ್ಸು ಹೆಚ್ಚಾಗುತ್ತದೆ .

ಶಂಖದಿಂದ ಹೊರ ಹೊಮ್ಮುವ ಓಂಕಾರ ಮನೆಗೆ ಇನ್ನು ಹೆಚ್ಚಿನ ಶುಭವನ್ನು ತರುತ್ತದೆ. ಶಂಖಗಳಲ್ಲಿ ಬಹಳ ವಿಧಗಳಿವೆ, ಅದರಲ್ಲೂ ಬಲಮುರಿ ಶಂಖ ಅಪರೂಪವಾದದ್ದು . ಇದನ್ನು ನೀವು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ದುರಾದೃಷ್ಟವನ್ನು ಅದು ಸೆಳೆದುಕೊಳ್ಳುತ್ತದೆ. ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಉಂಟು ಮಾಡುತ್ತದೆ. lakshmi

ದಿನನಿತ್ಯ ಬೆಳಿಗ್ಗೆ ಮತ್ತು ಸಂಜೆ ಶಂಖನಾದ ಮಾಡುವುದರಿಂದ ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನೆಲ್ಲಾ ಪಲಾಯನ ಮಾಡುತ್ತದೆ. ಶಂಖವನ್ನು ದೇವರ ಮನೆಯಲ್ಲಿ ಮಾತ್ರ ಇಡಬೇಕು. ಅಲಂಕಾರಿಕವಾಗಿ ಶಂಖವನ್ನು ಬಳಸಲೇಬಾರದು. ಅಲಂಕಾರಿಕ ಬರದಲ್ಲಿ ಶಂಖವನ್ನು ಬಳಸಿದಾಗ ಅಪ್ಪಿ ತಪ್ಪಿ ಶಂಖ ಹೊಡೆದು ಹೋದರೆ ,ಅದು ಕೆಟ್ಟ ಶಕುನ ವಾಗಿರುತ್ತದೆ. ಹಾಗೆಯೇ ಎರಡಕ್ಕಿಂತ ಹೆಚ್ಚು ಶಂಖವನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು. ವಿಷ್ಣುವಿನ ಸ್ವರೂಪವಾದ ಶಂಖವನ್ನು ಮನೆಯಲ್ಲಿ ಇಟ್ಟುಕೊಂಡರೆ

ಮನೆಗೆ ಮತ್ತು ಮನೆಯವರಿಗೆ ಒಳ್ಳೆಯದು ಆಗುತ್ತದೆ. ಶಾಸ್ತ್ರದ ಪ್ರಕಾರ ಮಾರುಕಟ್ಟೆಯಿಂದ ಮನೆಗೆ ಶಂಖವನ್ನು ತರುವಾಗ ಎರಡು ಶಂಖಗಳನ್ನು ತರಬೇಕು. ಶಂಖವನ್ನು ಹಳದಿ ಬಟ್ಟೆಯ ಮೇಲಿಟ್ಟು ದೇವರ ಕೋಣೆಯಲ್ಲಿ ಮಾತ್ರ ಇಡಬೇಕು. ಶಂಖವನ್ನ ಶಿವಲಿಂಗದಿಂದ ದೂರ ಇಡಬೇಕು. ಯಾವುದೇ ಕಾರಣಕ್ಕೂ ಶಂಖದಿಂದ ಲಿಂಗದ ಮೇಲೆ ನೀರು ಹಾಕಬಾರದು.ಪೂಜಿಸುವ ಶಂಖ ಮತ್ತು ಊದುವ ಶಂಖ ಬೇರೆಬೇರೆಯಾಗಿರಬೇಕು. ಪೂಜಿಸುವ ಶಂಖವನ್ನು ಊದುವ ಶಂಖಕ್ಕಿಂತ ಎತ್ತರದ ಸ್ಥಾನದಲ್ಲಿ ಇಡಬೇಕು.

ಮನೆಯ ಹಿರಿಯರು ಬೆಳಿಗ್ಗೆ ಮತ್ತು ಸಂಜೆ ಶಂಖ ನಾದವನ್ನು ಮಾಡಬೇಕು.ಶಂಖವನ್ನು ಬಳಸಿದ ನಂತರ ಅದನ್ನು ಗಂಗಾಜಲದಿಂದ ತೊಳೆದು ಅದನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಶಂಖವನ್ನು ಊದುವವರಿಗೆ ಯಾವುದೇ ರೀತಿಯ ಶ್ವಾಸಕೋಶದ ಸಮಸ್ಯೆಗಳು ಬರುವುದಿಲ್ಲ. ತೊದಲು ಮಾತನಾಡುವ ಮಕ್ಕಳಿಗೆ ಪ್ರತಿದಿನ ಶಂಖವನ್ನು ಊದುವ ಅಭ್ಯಾಸ ಮಾಡಿಸಿದರೆ ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತಾರೆ.

ಮಹಾಲಕ್ಷ್ಮಿಯ ಜೊತೆಗೆ ಕುಬೇರನ ಆರಾಧನೆ ಮಾಡುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿ ಆಗುತ್ತದೆ. ಕಲಿಯುಗದಲ್ಲಿ ಹಣವನ್ನು ಗಳಿಸಲು ಮೊದಲ ಆದ್ಯತೆ ಆಗುತ್ತದೆ.ಹಣ ಇಲ್ಲ ಅಂದರೆ ನಮ್ಮನ್ನು ಯಾರು ಕಾಳಜಿ ಮಾಡೋದಿಲ್ಲ .ಹಣವಿಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆದರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮೇಲೆ ಇದ್ದರೆ ಸಂಪತ್ತು , ಹಣ ಸಿಗುತ್ತೆ.

ಸಾಮಾನ್ಯವಾಗಿ ಲಕ್ಷ್ಮಿ ದೇವಿ ಮತ್ತು ಕುಬೇರ ದೇವರನ್ನ ಮನೆಯ ನಿಧಿಯ ರಕ್ಷಕನಾಗಿ ಮತ್ತು ಸಂತೋಷ ಸಮೃದ್ಧಿಯನ್ನು ಒದಗಿಸುವ ದೇವರಾಗಿ ಪೂಜಿಸುತ್ತಾರೆ. ಅದರಿಂದ ಮನೆಯಲ್ಲಿ ಕಡ್ಡಾಯವಾಗಿ ಲಕ್ಷ್ಮಿ ಕುಬೇರನ ವಿಗ್ರಹವನ್ನು ಇಡಬೇಕು ಅಂತ ಹೇಳಲಾಗಿದೆ. ಹಣಕಾಸಿನ ಮುಗ್ಗಟ್ಟಿನಿಂದ ಪಾರು ಆಗುವುದಕ್ಕೆ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಜೊತೆಗೆ ಸಂಪತ್ತಿನ ದೇವರಾದ ಕುಬೇರನನ್ನು ಮೆಚ್ಚಿಸುವುದು ಕೂಡ ಮುಖ್ಯವಾಗುತ್ತದೆ. ಸಂಪತ್ತಿನ ದೇವರು ಕುಬೇರನ್ನು ಪ್ರಸನ್ನನಾದರೆ ಜೀವನದಲ್ಲಿ ಹಣದ ಸಮಸ್ಯೆ ಇರುವುದಿಲ್ಲ.

ಲಕ್ಷ್ಮಿ ಪೂಜೆಯ ಜೊತೆಗೆ ಕುಬೇರನ ಆರಾಧನೆಯ ಅಪಾರವಾದ ಲಾಭವನ್ನು ನೀಡುತ್ತದೆ. ಲಕ್ಷ್ಮಿ ಕುಬೇರರ ಮೂರ್ತಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲೇ ಇಟ್ಟು ಪೂಜಿಸಬೇಕು. ಬೆಳ್ಳಿ , ತಾಮ್ರ ಅಥವಾ ಚಿನ್ನದಲ್ಲಿ ಶ್ರೀ ಯಂತ್ರವನ್ನು ಮಾಡಿ ಮನೆಯ ಈಶಾನ್ಯ ಭಾಗದಲ್ಲಿ ಅಥವಾ ನಿಮ್ಮ ಪೂಜೆಯ ಕೋಣೆಯಲ್ಲಿ ಇಟ್ಟು ಪೂಜಿಸಬಹುದು. ಮನೆಯಲ್ಲಿ ಮೀನಿನ ಟ್ಯಾಂಕ್ ಇಟ್ಟರೆ ಸಂಪತ್ತು ದುಪಟ್ಟು ಆಗುತ್ತದೆ.

ಮೀನುಗಳು ಚಂಚಲ ಸ್ವಭಾವ ಹೊಂದಿವೆ. ಅವು ಒಂದು ಕಡೆ ನಿಲ್ಲೋದಲ್ಲಾ. ಪ್ರತೀ ಕ್ಷಣವು ಚಲನೆಯಲ್ಲಿಯೇ ಇರುತ್ತದೆ. ಹಾಗಾಗಿ ಮನೆಯಲ್ಲಿ ಅಕ್ಟೋರಿಯಂ ಇಟ್ಟರೆ ಕ್ಷಣ್ ಕ್ಷಣವು ಸಂಪತ್ತನ್ನು ಹೆಚ್ಚಾಗುವಂತೆ ಮಾಡುತ್ತದೆ. ಅದರಲ್ಲೂ ಗೋಲ್ಡನ್ ಡ್ರಾಗನ್ ಮೀನು ಅದೃಷ್ಟದ ಸಂಕೇತ . ನಿಮ್ಮ ಶಕ್ತಿಗೆ ಆಧಾರವಾಗಿ ನಿನ್ನು ಮನೆಯಲ್ಲಿ ಮೀನಿನ ಟ್ಯಾಂಕ್ ಇಡಿ. ಅದನ್ನು ಆಗ್ನೇಯ ದಿಕ್ಕು ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಮೀನಿನ ಟ್ಯಾಂಕ್ ಮನೆಯ ಸದಸ್ಯರನ್ನು ಕೆಟ್ಟ ಛಟಗಳಿಂದ ಮುಕ್ತಗೊಳಿಸುತ್ತದೆ.
ಹೀಗೆ ಉತ್ತರ ದಿಕ್ಕಿನಲ್ಲಿ ಕೂಡಾ ಇಡಬಹುದು.

Leave A Reply

Your email address will not be published.