Ultimate magazine theme for WordPress.

Bad Cholesterol ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು

0 770

Bad Cholesterol Removal Tips ಸ್ನೇಹಿತರೇ ಇಂದಿನ ಲೇಖನದಲ್ಲಿ ಹಸುವಿನ ತುಪ್ಪದ ದ್ರವ್ಯ ಗುಣ, ರಸಾಯನಿಕ ತತ್ವಗಳು ಮತ್ತು ಹಸುವಿನ ತುಪ್ಪದಲ್ಲಿರುವ ಆರೋಗ್ಯಕರ ಲಾಭಗಳನ್ನು ತಿಳಿದುಕೊಳ್ಳೋಣ. ಆಯುರ್ವೇದ ಗ್ರಂಥಗಳಲ್ಲಿ ಹಸುವಿನ ತುಪ್ಪದಲ್ಲಿ ಶೀತವೀರ್ಯ ದ್ರವ್ಯ ಗುಣ ಮಧುರವಿಪಾಕ ಗುಣವನ್ನು ಹೊಂದಿದೆ ಎಂದು ಹೇಳುತ್ತಾರೆ. ಈ ಶೀತವೀರ್ಯ ಗುಣವನ್ನು ಹೊಂದಿರುವ

ಈ ಹಸುವಿನ ತುಪ್ಪವನ್ನು ಹೇಗೆ ಬಳಸಬೇಕು? ಇದನ್ನು ಬಳಸುವುದರಿಂದ ಶರೀರಕ್ಕೆ ಏನು ಪ್ರಯೋಜನವಾಗುತ್ತದೆ ಮತ್ತು ಬದಲಾವಣೆಗಳೇನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮಲ್ಲಿ ತುಪ್ಪ ಎಂದರೆ ಕೊಲೆಸ್ಟ್ರಾಲ್ ಎಂದು ತಿಳಿದುಕೊಂಡಿದ್ದೇವೆ. ಈ ತಪ್ಪು ತಿಳುವಳಿಕೆಯಿಂದ ಹೊರಬರಬೇಕು. ಒಳ್ಳೆಯ ಕೊಲೆಸ್ಟ್ರಾಲ್ ಜೀವರಕ್ಷಣೆ ಮಾಡುತ್ತದೆ. ಇದಕ್ಕೆ ಹೆಚ್ಡಿಎಲ್ ಎಂದು ಕರೆಯುತ್ತಾರೆ.

ಕೆಟ್ಟ ಕೊಲೆಸ್ಟ್ರಾಲ್ ಎಂಬುದು ನಮ್ಮ ಜೀವಕ್ಕೆ ಹಾನಿ ಉಂಟುಮಾಡುತ್ತದೆ. ಕೆಟ್ಟದ್ದಕ್ಕೆ ಎಲ್ ಡಿಎಲ್ , ವಿಎಲ್ಡಿಎಲ್ ಎಂದು ಕರೆಯುತ್ತಾರೆ. ಹಸುವಿನ ತುಪ್ಪದಲ್ಲಿ ಇರುವುದು ಹೆಚ್ ಡಿಎಲ್. ರಿಫೈನ್ಡ್ ಆಯಿಲ್ ಮಾರುವವರು ಬ್ಯುಜಿನೆಸ್ ನ ಉದ್ದೇಶದಿಂದ ಹಸುವಿನ ತುಪ್ಪದಿಂದ ಕೊಲೆಸ್ಟ್ರಾಲ್ ಆಗುತ್ತದೆಂದು ತಪ್ಪು ತಿಳುವಳಿಕೆಯನ್ನು ಹರಡಿದ್ದಾರೆ. Bad Cholesterol

ಆ ತಪ್ಪು ತಿಳುವಳಿಕೆಯಿಂದ ಹೊರಬಂದರೇ ಮಾತ್ರ 120 ಕ್ಕೂ ಅಧಿಕ ಕಾಯಿಲೆಯಿಂದ ಮುಕ್ತಿ ಹೊಂದಲು ಕಾರಣವಾಗುತ್ತದೆ. ವಾತಜನ್ಯ ಪಿತ್ತಜನ್ಯದಿಂದ ಬರುವಂತಹ ನೂರಾರು ಶರೀರದ ಎಲ್ಲಾ ಕಾಯಿಲೆಗಳಿಂದ ದೂರ ಉಳಿಯಬಹುದು. ಉದಾಹರಣೆಗೆ ಬಿ.ಪಿ. ಶುಗರ್, ಚರ್ಮದ ಸಮಸ್ಯೆಗಳು, ಮೆದುಳಿಗೆ ಸಂಬಂಧಪಟ್ಟ ಕಾಯಿಲೆಗಳು, ಕೀಲು ನೋವು, ಮೂಳೆಗಳ ಸವಕಳಿ,

ನರದೌರ್ಬಲ್ಯ, ಇಂತಹ ನೂರಾರು ಕಾಯಿಲೆಗಳಿಗೂ ಹಸುವಿನ ತುಪ್ಪ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ. ಪ್ರತಿಯೊಂದ ಜೀವಕೋಶದಲ್ಲಿರುವ ಪಿತ್ತ ಮತ್ತು ವಾತದ ವಿಕಾರಗಳನ್ನು ಈ ತುಪ್ಪವು ಹೊರಹಾಕುತ್ತದೆ. ಈ ತುಪ್ಪವು ಶುದ್ದೀಕರಣವನ್ನು ಮಾಡುತ್ತದೆ. ವೃದ್ಧಿ ಮಾಡುತ್ತದೆ ಅಂದರೆ ಮಾಂಸಖಂಡದಲ್ಲಿರುವ ಒಳ್ಳೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯನ್ನು ಕೊಡುತ್ತದೆ. Bad Cholesterol

ಅಂದರೆ ನಮ್ಮ ನರಮಂಡಲ ಮತ್ತು ಮಾಂಸಖಂಡವನ್ನು ಗಟ್ಟಿಗೊಳಿಸುತ್ತದೆ. ಆಯುರ್ವೇದದ ಪಂಚಕರ್ಮದಲ್ಲಿ ಹಸುವಿನ ತುಪ್ಪವನ್ನು ಬಳಸಲಾಗುತ್ತದೆ. ಹಸುವಿನ ತುಪ್ಪವನ್ನು ಮಕ್ಕಳು ಮತ್ತು ವೃದ್ಧರಿಗೂ ಕೊಡಬಹುದು. ಎಮ್ಮೆ ತುಪ್ಪವನ್ನು ಕೊಡಬಾರದು ಕಾರಣ ಅದು ಮಂದವಾಗಿರುವುದರಿಂದ ಸುಲಭವಾಗಿ ಜೀರ್ಣವಾಗುವುದಿಲ್ಲ. ಹಸುವಿನ ತುಪ್ಪವು ಸುಲಭವಾಗಿ ಜೀರ್ಣವಾಗುತ್ತದೆ. Bad Cholesterol

ನಾಟಿ ಹಸುವಿನ ತುಪ್ಪವನ್ನ ಮಾತ್ರ ಬಳಸಬೇಕು, ಜೆರ್ಸಿ ಹಸುಗಳ ತುಪ್ಪವನ್ನ ಬಳಸಬಾರದು. ನಮ್ಮ ದೇಶದ ಮೂಲ ತಳಿಯ ಹಸುವಿನ ತುಪ್ಪವನ್ನು ಬಳಸಬಹುದು. ನಾಟಿ ಹಸುವಿನ ತುಪ್ಪವನ್ನು ಸರ್ಜರಿ ಆಗಿರುವವರು ಬಳಸಬಹುದು. ಅವರು ಬಳಸುವುದರಿಂದ ಗಾಯವು ಬೇಗ ಒಣಗುತ್ತದೆ. ತುಪ್ಪವನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಅತೀಯಾಗಿ ಸೇವನೆ ಮಾಡಬಾರದು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಒಂದು ಸ್ಪೂನ್ ನಷ್ಟು ಮಾತ್ರ ಸೇವನೆ ಮಾಡಬೇಕು.

Leave A Reply

Your email address will not be published.