Ultimate magazine theme for WordPress.

kuja dosha ಕುಜ ದೋಷ ಇದ್ದವರು ಈ ಬಣ್ಣದ ಬಟ್ಟೆ ಧರಿಸಬಾರದು

0 10,528

kuja dosha ಕುಜ ದೋಷ ಇದ್ದವರು ಈ ಒಂದು ಉಪಾಯ ಮಾಡಿದರೇ ಸಾಕು ಕುಜ ದೋಷದಿಂದ ಮುಕ್ತಿ ಹೊಂದಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನೀವು ಯಾವುದೇ ವ್ರತ, ನಿಯಮಗಳನ್ನು ಮಾಡಬೇಕಾಗಿಲ್ಲ. ನಿಮಗೆ ಕುಜ ದೋಷವಿದ್ದರೇ ನಾವು ಹೇಳುವ ಈ ನಿಯಮಗಳನ್ನ ಪಾಲಿಸಿದರೇ ಸಾಕು ನಿಮಗೆ ಕುಜ ದೋಷದಿಂದ ಮುಕ್ತಿ ಸಿಗುತ್ತದೆ.

ಮದುವೆ ಆಗುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಿಮಗೆ ಮದುವೆಯಾಗಿದ್ದರೇ ನಿಮ್ಮಿಬ್ಬರಲ್ಲಿ ಒಬ್ಬರಿಗೆ ಕುಜ ದೋಷವಿದ್ದರೇ ಅದನ್ನು ಕೂಡ ಈ ನಿಯಮ ಪಾಲಿಸುವುದರಿಂದ ದೋಷಮುಕ್ತರಾಗಬಹುದು. ನಿಮ್ಮಿಬ್ಬರ ಜಾತಕಗಳನ್ನು ಹೊಂದಾಣಿಕೆ ಮಾಡದೇ ಮದುವೆ ಮಾಡಿದ್ದರೇ, ನಿಮ್ಮ ದಾಂಪತ್ಯದಲ್ಲಿ ಮನಸ್ಥಾಪವಿದ್ದರೇ ನಾವು ತಿಳಿಸುವ ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ದೋಷ ನಿವಾರಣೆಯಾಗುತ್ತದೆ. kuja dosha

ನಿಮ್ಮ ದಾಂಪತ್ಯ ಜೀವನ ಅತ್ಯಂತ ಸುಖಕರವಾಗಿರುತ್ತದೆ. ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ 1, 4,7, 8 ಅಥವಾ 12ನೇ ಮನೆಯಲ್ಲಿ ಮಂಗಳಗ್ರಹ ಇದ್ದರೇ ಅಂತಹವರಿಗೆ ಕುಜ ದೋಷವಿದೆ ಎಂದರ್ಥ. ಕೆಲವರಿಗೆ ಜನ್ಮ ದಿನಾಂಕ ಗೊತ್ತಿರುವುದಿಲ್ಲ. ಅಂತಹವರಿಗೂ ಕೂಡ ಕುಜ ದೋಷವಿದೆ ಎಂದು ಈ ಉಪಾಯದಿಂದ ತಿಳಿದುಕೊಳ್ಳಬಹುದು. ಕುಜ ದೋಷ ಇರುವವರು ಮಹತ್ವಾಕಾಂಕ್ಷೆಗಳಾಗಿರುತ್ತಾರೆ. kuja dosha

ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವಂತಹ ಮನಸ್ಥಿತಿವಂತಹವರು ಆಗಿರುತ್ತಾರೆ. ದೊಡ್ಡ ದೊಡ್ಡ ಕನಸುಗಳು ಅವರಿಗೆ ಇರುತ್ತದೆ. ಆದರೇ ಕೆಲವು ಬಗೆಯ ಅಲರ್ಜಿಗಳು ಅವರನ್ನು ಕಾಡುತ್ತಿರುತ್ತದೆ. ರಕ್ತಕ್ಕೆ ಸಂಬಂಧಪಟ್ಟ ಅಲರ್ಜಿ ಕೂಡ ಇರಬಹುದು. ಅವರಿಗೆ ತಮ್ಮ ಕೋಪದ ಮೇಲೆ ನಿಯಂತ್ರಣವೇ ಇರುವುದಿಲ್ಲ. ತಮ್ಮ ಮೇಲೆ ತಮಗೆ ಹಿಡಿತವಿಲ್ಲದೇ ಎಲ್ಲಿ ಕೋಪ ಮಾಡಿಕೊಳ್ಳಬೇಕು?

ಎಲ್ಲಿ ಸುಮ್ಮನಿರಬೇಕು ಎಂದು ಗೊತ್ತಾಗದೇ ಹಲವಾರು ತೊಂದರೆಗಳನ್ನು ತಾವೇ ತಂದುಕೊಳ್ಳುತ್ತಾರೆ. ಹೊಸ ಹೊಸ ಜಾಗಗಳಿಗೆ ಹೋಗುವುದು, ಹೊಸ ಹೊಸ ಜನರನ್ನು ಪರಿಚಯ ಮಾಡಿಕೊಳ್ಳುವುದು ಇವರ ಗುಣವಾಗಿರುತ್ತದೆ. ಮುಖದ ಮೇಲೆ ಗಾಯದ ಚಿಹ್ನೆಗಳು ಇರುತ್ತವೆ. ಇವರಿಗೆ ಸಹೋದರ ಸಹೋದರಿಯರು ಇದ್ದರೇ ಅವರ ಜೊತೆ ಇವರ ಸಂಬಂಧ ಸರಿ ಇರುವುದಿಲ್ಲ.

ಇವರಿಗೆ ಸಹೋದರರ ಸಹಕಾರ ಸಿಗದೇ ವಿರೋಧವೇ ಸಿಗುತ್ತದೆ. ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆ ಇರುತ್ತದೆ. ಮೂಳೆಗಳಿಗೆ ಸಂಬಂಧಿಸಿದ ಯಾವುದಾದರೂ ತೊಂದರೆ ಇದ್ದರೂ ಇರಬಹುದು. ಸಣ್ಣ ಪುಟ್ಟ ಕೆಲಸವೂ ಬೇಗನೇ ಆಗುವುದಿಲ್ಲ. ಎಲ್ಲಾ ಕೆಲಸಗಳಲ್ಲೂ ಆತಂಕಗಳೇ ಹೆಚ್ಚು. ಒಂದು ದಿನ ಆಗಬೇಕಾಗಿರುವ ಕೆಲಸ ಹತ್ತು ದಿನ ಸಮಯ ತೆಗೆದುಕೊಳ್ಳುತ್ತದೆ. kuja dosha

ಸುಳ್ಳು ಆರೋಪಗಳು ಇವರನ್ನು ಹುಡುಕಿಕೊಂಡು ಬರುತ್ತದೆ. ಕುಜ ದೋಷದಿಂದ ಹೇಗೆ ಮುಕ್ತಿ ಪಡೆಯುವುದು ಎನ್ನುವುದಾದರೇ ಮೊದಲು ನಿಮ್ಮ ಜಾತಕದಲ್ಲಿ ಕುಜದೋಷ ಇದೆಯಾ ಎಂದು ತಿಳಿದುಕೊಳ್ಳಿ. ಕುಜ ದೋಷ ಇರುವವರು ಕಪ್ಪು ಬಟ್ಟೆಯನ್ನು ಧರಿಸಲೇಬಾರದು. ಮಂಗಳ ಮತ್ತು ಶನಿಗ್ರಹವು ಬದ್ಧ ಶತೃಗಳಾಗಿದ್ದಾರೆ. ಕುಜ ದೋಷ ಇದ್ದವರು ಕಪ್ಪು ಬಟ್ಟೆಯನ್ನು ಧರಿಸಿದರೆ ಅವರ ಮಂಗಳಗ್ರಹವು

ಇನ್ನು ಕೋಪಗೊಳ್ಳುತ್ತದೆ. ಕಪ್ಪು ಬಣ್ಣದಿಂದ ದೂರವಿದ್ದಷ್ಟು ನಿಮಗೆ ಕಂಕಣ ಬಲ ಕೂಡಿಬರುತ್ತದೆ. ಒಳ್ಳೆಯ ಜಾತಕ ಕೂಡಿಬಂದು ಶೀಘ್ರ ವಿವಾಹವೂ ಆಗುತ್ತದೆ. ಮೇಷ ಮತ್ತು ವೃಷಭರಾಶಿಯವರು ಕೂಡ ಕಪ್ಪು ಬಣ್ಣದಿಂದ ದೂರವಿರಬೇಕು. ನಮ್ಮ ಭಾರತೀಯ ಪರಂಪರೆಯಲ್ಲಿ ದೃಷ್ಠಿದೋಷ ನಿವಾರಣೆ ಮಾಡಬೇಕಾದರೇ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟುತ್ತೀವಿ ಮತ್ತು ಕಪ್ಪು ಬಣ್ಣದ ಚುಕ್ಕಿಯನ್ನು ಇಡುತ್ತೀವಿ. ಆದರೇ ಯಾರಿಗೆ ಕುಜ ದೋಷವಿರುತ್ತದೆಯೋ ಯಾರು ವೃಷಭ ಮತ್ತು ಮೇಷರಾಶಿಯಲ್ಲಿ ಜನಿಸುತ್ತಾರೋ ಅವರಿಗೆ ಈ ಪ್ರಯೋಗ ಏನು ಪ್ರಯೋಜನ ಬರುವುದಿಲ್ಲ. ಇಂತಹ ಸರಳ ಉಪಾಯವನ್ನು ಮಾಡಿದರೇ ಕುಜದೋಷ ಇರುವವರಿಗೆ ಒಳಿತಾಗುತ್ತದೆ.

Leave A Reply

Your email address will not be published.