Ultimate magazine theme for WordPress.

Pigmentation ಮುಖದಲ್ಲಿ ಭಂಗು ಏಕೆ ಬರುತ್ತದೆ?

0 23,139

Pigmentation ; Home Remedies for Pigmentation ಸ್ನೇಹಿತರೇ ಮುಖದಲ್ಲಿ ಭಂಗು ಏಕೆ ಬರುತ್ತದೆ? ಅದಕ್ಕೆ ಕಾರಣಗಳೇನು? ಅದಕ್ಕೆ ಪರಿಹಾರ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲು ಬರದಂತೆ ತಡೆಯಲು ಫಾಸ್ಟ್ ಫುಡ್, ಜಂಕ್ ಫುಡ್, ಬೇಕರಿ ತಿನಿಸುಗಳು,ಕೂಲ್ ಡ್ರಿಂಕ್ಸ್ಗಳ ಸೇವನೆಯನ್ನು ನಿಲ್ಲಿಸಬೇಕು. ತಡವಾಗಿ ಆಹಾರ ಸೇವನೆ ಮಾಡಬಾರದು. ತಡವಾಗಿ ಮಲಬಾರದು. ಧೂಮಪಾನ, ಮದ್ಯಪಾನ, ಗುಡ್ಕಾ, ತಂಬಾಕು,

ಬೀಡಿ, ಸಿಗರೇಟ್ ಇವುಗಳನ್ನೆಲ್ಲಾ ಬಿಡಬೇಕು. ಹದವಾಗಿ, ಹಿತಮಿತವಾಗಿ ಆಹಾರ ಸೇವನೆ ಮಾಡಬೇಕು. ಖಾರ, ಮಸಾಲೆ ಭರತವಾದ ಆಹಾರವನ್ನು ಬಿಡಬೇಕು. ಚಹಾ, ಕಾಫಿ ಮತ್ತು ಹೆಚ್ಚು ವಾತ, ಪಿತ್ತ, ಕಫಗಳನ್ನ ಉಂಟುಮಾಡುವಂತಹ ಆಲೂಗೆಡ್ಡೆ, ಬದನೆಕಾಯಿ, ಹಸಿಮೆಣಸಿನಕಾಯಿ, ಬೇಕರಿ ಪದಾರ್ಥಗಳನ್ನೆಲ್ಲಾ ಬಿಡಬೇಕು. ಸಮಯಕ್ಕೆ ಸರಿಯಾರಿ

ಬೆಳಿಗ್ಗೆ 8, ಮಧ್ಯಾಹ್ನ 1ರಿಂದ 2, ಸಾಯಾಂಕಾಲ 6ರಿಂದ 6:30ರ ಒಳಗೆ ಊಟವನ್ನು ಮುಗಿಸಿಕೊಳ್ಳಬೇಕು. ಇಷ್ಟು ರೂಢಿಸಿಕೊಂಡರೇ ಈ ಭಂಗಿನ ಸಮಸ್ಯೆ ಬರುವುದಿಲ್ಲ, ಬಂದಿದ್ದರೆ ಮೇಲೆ ಹೇಳಿರುವ ನಿಯಮಗಳನ್ನ ಪಾಲಿಸಿ ನೋಡಿ. ಇದನ್ನು ಮಾಯಮಾಡುವಂತಹ ವಿಶೇಷ ಮನೆಮದ್ದು ಯಾವುದು ಎಂದರೆ ಕದ್ಕೆ ಮರ ಅದರ ಕಾಯಿ ಉದ್ದವಾಗಿ ಇರುತ್ತದೆ.

ಆ ಮರದ ಪೂರ್ತಿ ಹೂವು ಇರುತ್ತದೆ. ಆ ಹೂವನ್ನು ನೆರಳಿನಲ್ಲಿ ಒಣಗಿಸಿ ಪೌಡರ್ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೇ ಎಂತಹ ಭಂಗು ಇದ್ದರೂ ಕೇವಲ 7 ದಿವಸದಲ್ಲಿ ಹೋಗುತ್ತದೆ. ಕೆಲವರಿಗೆ 7 ದಿವಸದಲ್ಲಿ ಹೋಗದಿದ್ದಾಗ 21 ದಿನದವರೆಗೆ ಹಚ್ಚಿಕೊಳ್ಳಿ. ಈ ಮನೆಮದ್ದಿಗೆ ಭಂಗು ಹೋಗದೇ ಇದ್ದಾಗ ದೇಹದಲ್ಲಿ ತೊಂದರೆ ಇದೆ ಎಂದೇ ಅರ್ಥ ಅದಕ್ಕೆ ಪರಿಹಾರವಾಗಿ ಆಯುರ್ವೇದ ಚಿಕಿತ್ಸೆಯಾದ ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

Leave A Reply

Your email address will not be published.