Ultimate magazine theme for WordPress.

clock directions ಈ ದಿಕ್ಕುಗಳಲ್ಲಿ ಗಡಿಯಾರವನ್ನು ಹಾಕಬಾರದು

0 10,542

clock should not be placed in these directions ಮನೆಯಲ್ಲಿ ಅಪ್ಪಿತಪ್ಪಿಯೂ ಈ ದಿಕ್ಕುಗಳಲ್ಲಿ ಗಡಿಯಾರವನ್ನು ಹಾಕಬಾರದು ಎಂಬ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವಾಸ್ತುಪ್ರಕಾರ ಗಡಿಯಾರವನ್ನು ಮನೆಯ ದಕ್ಷಿಣ ಗೋಡೆಯ ಮೇಲೆ ಇಡಬಾರದು. ಇದನ್ನು ಬಹಳ ಅಶುಭ ಎಂದು ಪರಿಗಣಿಸಲಾಗುತ್ತದೆ. ಗಡಿಯಾರವನ್ನು ಬಾಗಿಲ ಮೇಲೆಯೂ ಇಡಬಾರದು.

ಗಡಿಯಾರವೂ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತುಹಾಕುವುದು ಶುಭವಾಗಿರುತ್ತದೆ. ಇದು ಸಂಪತ್ತು ಮತ್ತು ಸಂಮೃದ್ಧಿಗೆ ಮುನ್ನುಡಿಯನ್ನು ಬರೆಯುತ್ತದೆ. ಉತ್ತರ ದಿಕ್ಕನ್ನು ಕುಬೇರ ಮೂಲೆ ಮತ್ತು ಗಣೇಶ ಮೂಲೆ ಎಂದು ಕರೆಯಲಾಗುತ್ತದೆ. clock directions

ಈ ಮೂಲೆಯಲ್ಲಿ ಗಡಿಯಾರವನ್ನು ಇಡುವುದರಿಂದ ವೃತ್ತಿ ಜೀವನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ. ವಾಸ್ತುಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ನೇತುಹಾಕುವುದು ಶುಭ ಎಂದು ಹೇಳಲಾಗಿದೆ. ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡಲು ಸುಲಭವಾಗುತ್ತದೆ clock directions

ಮತ್ತು ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ನೇತುಹಾಕುವುದರಿಂದ ಕೆಲಸ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪೂರ್ವದಿಕ್ಕು ನಾವು ಮಾಡುವ ಕಾರ್ಯವನ್ನು ಉತ್ತಮಗೊಳಿಸುವುದರಿಂದ ಗಡಿಯಾರವನ್ನು ಇಡಲು ಪೂರ್ವ ದಿಕ್ಕು ಸೂಕ್ತವಾಗಿದೆ. ನಿಮ್ಮ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಡಬೇಕೆನಿಸಿದರೇ

ಗೋಡೆಯ ಗಡಿಯಾರವನ್ನು ಇಡಲು ಸೂಕ್ತ ದಿಕ್ಕು ಪೂರ್ವದಿಕ್ಕಾಗಿದೆ. ಪೂರ್ವ ದಿಕ್ಕಿನಲ್ಲಿ ಇಡಲು ಆಗದೇ ಇದ್ದರೇ ಉತ್ತರ ಮೂಲೆಯಲ್ಲಿಡಬಹುದು. ದಕ್ಷಿಣಕ್ಕೆ ಮುಖ ಮಾಡಿ ಮಲಗುವ ಅಭ್ಯಾಸವಿದ್ದರೇ ನೀವು ನಿಮ್ಮ ಗಡಿಯಾರವನ್ನು ಉತ್ತರದಿಕ್ಕಿನಲ್ಲಿರಿಸಬೇಕು. ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇರಿಸುವುದಾದರೇ ನಿಮ್ಮ ಗಡಿಯಾರವು ನಿಮ್ಮ ಹಾಸಿಗೆಯ ಕನ್ನಡಿಯಲ್ಲಿ ಪ್ರತಿಬಿಂಬಿಸುವಂತೆ ಇರಬಾರದು. ಗಡಿಯಾರವೂ ಮಲಗುವ ಕೋಣೆಯ ಬಾಗಿಲಿಗೆ ವಿರುದ್ಧ ದಿಕ್ಕಿಗೆ ಇರಬಾರದು. clock directions

ಲೋಲಕವಿರುವ ಗಡಿಯಾರವನ್ನು ಮನೆಗೆ ಶುಭ ಎಂದು ಪರಿಗಣಿಸಲಾಗುತ್ತದೆ. ಇದು ಧನಾತ್ಮಕತೆ ಮತ್ತು ಧ್ವನಿಯ ಕಂಪನಗಳನ್ನು ಸೃಷ್ಠಿಸುತ್ತದೆ. ಇಂತಹ ಗಡಿಯಾರವನ್ನು ಇಡಲು ಇಚ್ಚಿಸಿದರೇ ಪೂರ್ವ ದಿಕ್ಕು ಅತ್ಯಂತ ಸೂಕ್ತವಾಗಿದೆ. ಗಡಿಯಾರವನ್ನು ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಇರಿಸಬಹುದು. ಅದರೇ ಮೇಲೆ ತಿಳಿಸಿದ ದಿಕ್ಕುಗಳು ಮೊದಲೇ ಆಯ್ಕೆಯಾಗಿದ್ದು ಪಶ್ಚಿಮ ದಿಕ್ಕನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಿ.

ಗೋಡೆ ಗಡಿಯಾರ ಮತ್ತು ಕ್ಯಾಲೆಂಡರ್ ನಂತಹ ವಸ್ತುಗಳನ್ನು ಮನೆಯ ಒಳಗಡೆಯೇ ಇರಿಸಬೇಕು ಮತ್ತು ಎಲ್ಲಾ ಗಡಿಯಾರಗಳು ಕಾರ್ಯನಿರ್ವಹಿಸುತ್ತಿರಬೇಕು. ಕೆಟ್ಟು ಹೋದ ಗೋಡೆ ಗಡಿಯಾರಗಳನ್ನು ಎಂದಿಗೂ ಬಳಸಬೇಡಿ. ಗೋಡೆಯ ಗಡಿಯಾರವು ನೈಜ ಸಮಯಕ್ಕಿಂತ ಹಿಂದೆ ಇರಬಾರದು. ವಾಸ್ತವವಾಗಿ ಎರಡು ಅಥವಾ ಮೂರು ನಿಮಿಷ ಮುಂದು ಇದ್ದರೇ ಒಳ್ಳೆಯದು.

ಗಾಜಿನ ಗಡಿಯಾರವೂ ಒಳ್ಳೆಯದು. ಆದರೇ ಗಾಜು ಒಡೆದಿರುವ ಗಡಿಯಾರವನ್ನು ಇಟ್ಟುಕೊಳ್ಳಬಾರದು. ವಾಸ್ತುಶಾಸ್ತ್ರದಲ್ಲಿ ಯಾವುದೇ ರೀತಿಯ ಮುರಿದ ಗಡಿಯಾರವನ್ನು ಇಡಬಾರದು. ಇದು ಮನೆಗೆ ಒಳ್ಳೆಯ ಲಕ್ಷಣವಲ್ಲ. ಗಡಿಯಾರಗಳನ್ನ ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಅದರ ಮೇಲೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಇಟ್ಟಿದ್ದರೇ ತಕ್ಷಣ ಬದಲಾಯಿಸಿ. ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಇಟ್ಟರೇ ಮನೆಗೆ ಪ್ರಗತಿ ಎನ್ನುವುದೇ ಇರುವುದಿಲ್ಲ. clock directions

ಕಾರಣವೇನೆಂದರೆ ದಕ್ಷಿಣ ದಿಕ್ಕಿನಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಇರುತ್ತದೆ. ದಕ್ಷಿಣ ದಿಕ್ಕು ಯಮನ ದಿಕ್ಕು ಸಮಯವನ್ನು ನೋಡಲು ಆ ದಿಕ್ಕನ್ನೇ ಹೆಚ್ಚು ನೋಡುತ್ತಿದ್ದರೇ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಅಡುಗೆ ಮನೆ ಮತ್ತು ಮಲಗುವ ಕೋಣೆಯ ಬಾಗಿಲುಗಳಿಗೆ ಹಾಕಬಾರದು. ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಟ್ಟುಕೊಳ್ಳಬಾರದು ಇದರಿಂದ ಗಂಡ ಹೆಂಡತಿಯರ ನಡುವ ಕಲಹಗಳು ಹೆಚ್ಚಾಗುತ್ತದೆ.

ಇನ್ನು ಬಾಗಿಲ ಮೇಲೆ ಗಡಿಯಾರವನ್ನು ಹಾಕುವುದನ್ನ ನಿಷೇಧಿಸಲಾಗಿದೆ. ಹಿಂದಿನ ಕಾಲದಲ್ಲಿ ಇದ್ದ ಸಮಯಕ್ಕೆ ಸರಿಯಾಗಿ ಶಬ್ಧ ಮಾಡುವಂತಹ ಗಡಿಯಾರಗಳು ಬಹಳ ಒಳ್ಳೆಯದು, ಇದರಿಂದ ಸಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗುತ್ತದೆ. ವೃತ್ತಾಕಾರದ ಗಡಿಯಾರ ಮತ್ತು ಚತುರ್ಭುಜಾಕಾರದ ಗಡಿಯಾರ ಮನೆಯಲ್ಲಿದ್ದರೇ ಬಹಳ ಒಳ್ಳೆಯದು.

ನಿಮ್ಮ ಯೋಜನೆಗಳೆಲ್ಲವೂ ಕೈಗೂಡುತ್ತದೆ. ಇನ್ನೊಂದು ವಿಚಾರವೇನೆಂದರೆ ಗಡಿಯಾರವನ್ನು ಇನ್ನೊಬ್ಬರಿಗೆ ದಾನ ಅಥವಾ ಉಡುಗೊರೆಯಾಗಿ ನೀಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಒಳ್ಳೆಯ ಸಮಯಗಳು ಅವರಿಗೆ ಹೊರಟು ಹೋಗುತ್ತದೆ. ಅವರ ಕೆಟ್ಟ ಸಮಯ ನಿಮಗೆ ಬರುವ ಸಾಧ್ಯತೆ ಇರುತ್ತದೆ. ಗಡಿಯಾರದ ವಿಚಾರದಲ್ಲಿ ಈ ರೀತಿಯ ತಪ್ಪುಗಳನ್ನು ಮಾಡದೇ ಕೆಲವು ನಿಯಮಗಳನ್ನು ಅನುಸರಿಸಿದರೇ ಬಹಳ ಉತ್ತಮ.

ವಾಸ್ತುಪ್ರಕಾರ ಮನೆಯಲ್ಲಿ ಗಡಿಯಾರವನ್ನು ಇಟ್ಟರೇ ಆರ್ಥಿಕ ಪ್ರಗತಿ ಉಂಟಾಗುತ್ತದೆ. ಮನೆಯಲ್ಲಿ ಅಷ್ಟಭುಜದ ಗಡಿಯಾರ ಮನೆಯ ಸದಸ್ಯರ ನಡುವೆ ಸಾಮರಸ್ಯವನ್ನು ಹೆಚ್ಚು ಮಾಡುತ್ತದೆಯಂತೆ ಮತ್ತು ಜಗಳಗಳಿಂದ ಮುಕ್ತಗೊಳಿಸುತ್ತದೆಯಂತೆ, ಇದರಿಂದ ಮನೆಯಲ್ಲಿ ಸದಾ ಶಾಂತಿ ನೆಲೆಸಿರುತ್ತದೆಯಂತೆ. ವೃತ್ತಾಕಾರದ ಗಡಿಯಾರ ಮನೆಗೆ ಶುಭವನ್ನು ತರುತ್ತದೆಯಂತೆ ಇದು ಮನೆಯ ಸಂಪತ್ತನ್ನು ಹೆಚ್ಚಿಸುವುದಲ್ಲದೇ ಜೀವನದಲ್ಲಿ ಏಳಿಗೆ ಕಾಣಬಹುದು. clock directions

ಅಂಡಾಕಾರದ ಗಡಿಯಾರ ಮನೆಗೆ ಶುಭವಂತೆ. ಇದು ಸ್ನೇಹಿತರು ಮತ್ತು ಸಂಬಂಧಿಕರ ನಡುವೆ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಹೃದಯಾಕಾರದ ಗಡಿಯಾರ ದಂಪತಿಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ. ತ್ರಿಕೋನಾಕಾರದ ಗಡಿಯಾರವನ್ನು ಮನೆಯಲ್ಲಿಡಬಾರದು ಇದು ಅಶುಭದ ಸಂಕೇತವಾಗಿದೆ. ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಮನೆಯಲ್ಲಿ ಗಾಢ ಬಣ್ಣದ ಗಡಿಯಾರವನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಯು ನೆಲೆಸುತ್ತದೆ. ಮನೆಯಲ್ಲಿ ಕಪ್ಪು, ನೀಲಿ, ಕೆಂಪು ಬಣ್ಣದ ಗಡಿಯಾರವನ್ನು ಇಡಬಾರದು. ಕಂದು, ಬಿಳಿ, ಹಳದಿಯಂತಹ ತಿಳಿಬಣ್ಣದ ಗಡಿಯಾರಗಳನ್ನು ಇಡುವುದು ಸೂಕ್ತವಾಗಿದೆ.

Leave A Reply

Your email address will not be published.