Ultimate magazine theme for WordPress.

throat pain ಗಂಟಲ ನೋವಿಗೆ ಮನೆಮದ್ದು

0 5,877

throat pain : Best home remedy For throat pain ನಾವು ಈ ಲೇಖನದಲ್ಲಿ ಗಂಟಲ ನೋವಿಗೆ ಮನೆಮದ್ದು ಯಾವುದು ಎಂಬುದನ್ನು ತಿಳಿದುಕೊಳ್ಳೋಣ .ವಾತಾವರಣದಿಂದ ಆಗುತ್ತಿರುವ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವು ಸಹ ಬದಲಾವಣೆ ಆಗುತ್ತದೆ . ಅದರಲ್ಲೂ ಶೀತ ,ಗಂಟಲು ನೋವು , ಕೆಮ್ಮು ನಮ್ಮನ್ನು ಕಾಡುತ್ತಿರುತ್ತದೆ .ಅದರಲ್ಲೂ ನಮ್ಮನ್ನು ಗಂಟಲು ನೋವು ತೀರಾ ಇಕ್ಕಟ್ಟಿಗೆ ತಳ್ಳುತ್ತದೆ . ಏಕೆಂದರೆ ಗಂಟಲು ನೋವು ಬಂದಾಗ ನಾವು ಮಾತನಾಡಲು ತುಂಬಾ ಕಷ್ಟವಾಗುತ್ತದೆ .

ಏನಾದರೂ ಆಹಾರ ಸೇವನೆ ಮಾಡಲು ಸಹ ಕಷ್ಟವಾಗುತ್ತದೆ . ಇದಕ್ಕೆ ಮುಖ್ಯ ಕಾರಣ ರೋಗಾಣು , ಅಣು ಜೀವಿ , ಮತ್ತು ಫಂಗಸ್ ಇಂದ ಬರುವ ಸೋಂಕುಗಳು . ಹಾಗಾದರೆ ಗಂಟಲು ನೋವಿಗೆ ಮನೆ ಮದ್ದು ಯಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ .ಗಂಟಲಿಗೆ ರಾಮ ಬಾಣ ಎಂದೆನಿಸಿ ಕೊಂಡಿರುವ ಉಪ್ಪು ನೀರು . ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವುದರಿಂದ ಕೂಡ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು . throat pain

ಇಷ್ಟೇ ಅಲ್ಲದೆ ನಿಮ್ಮ ನೋವಿಗೆ ತಕ್ಷಣ ಪರಿಹಾರ ನೀಡುತ್ತದೆ . ಒಂದು ವೇಳೆ ನಿಮಗೆ ಉಪ್ಪು ಅಷ್ಟೇನು ಇಷ್ಟವಾಗದಿದ್ದರೆ , ನೀರಿಗೆ ಸ್ವಲ್ಪ ಪ್ರಮಾಣದ ಜೇನುತುಪ್ಪವನ್ನು ಬೆರೆಸಿಕೊಳ್ಳಿ , ಈ ಮಿಶ್ರಣವನ್ನು ಮುಕ್ಕಳಿಸಿ ಆದರೆ ನುಂಗಬೇಡಿ . ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ . ದಿನಕ್ಕೆ ನಾಲ್ಕೈದು ಬಾರಿ ಹೀಗೆ ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆ ಆಗುತ್ತದೆ .ಮತ್ತು ಗಂಟಲು ನೋವಿಗೆ ಇನ್ನೊಂದು ಅತ್ಯುತ್ತಮ ಮನೆ ಮದ್ದು ಎಂದರೆ , ಅದು ಬೆಳ್ಳುಳ್ಳಿ . ಬೆಳ್ಳುಳ್ಳಿಯಲ್ಲಿ ಒಂದು ಆಂಟಿ ಬ್ಯಾಕ್ಟೀರಿಯ ಇರುವ ಅಂಶ .

ಇದರಲ್ಲಿರುವ ನಂಜು ನಿರೋಧಕ ಗುಣಗಳು ಮತ್ತು ಔಷಧಿಯ ಗುಣಗಳು ಗಂಟಲು ನೋವಿಗೆ ಒಳ್ಳೆಯ ಪರಿಹಾರ ನೀಡುತ್ತದೆ . ಅಲ್ಲದೇ ನೋವನ್ನು ಬೇಗ ನಿವಾರಿಸುವ ಮನೆಮದ್ದು ಸಹ ಆಗಿದೆ .ಮತ್ತು ಕಚ್ಚಾ ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ , ಗಂಟಲಿನಲ್ಲಿ ಇರುವ ಕೆಟ್ಟ ಅಣುಜೀವಿಗಳನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ . throat pain

ಮತ್ತು ಇನ್ನೊಂದು ಅತ್ಯುತ್ತಮ ಮನೆ ಮದ್ದು ಎಂದರೆ, ಲವಂಗ . ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವವರೆಗೆ ಜಗಿಯುತ್ತಾ ಇರಿ . ನಂತರ ಇದನ್ನು ನುಂಗಿ . ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ . ಮತ್ತು ಗಂಟಲು ನೋವಿಗೆ ಶುಂಠಿಯ ಟೀ ಕೂಡ ಉತ್ತಮವಾದ ಕೆಲಸ ಮಾಡುತ್ತದೆ . ಈ ರೀತಿ ನಾವು ಹೇಳಿರುವ ಮನೆಮದ್ದು ಮಾಡುವುದರಿಂದ ನಿಮಗೆ ಗಂಟಲು ನೋವಿಗೆ ಪರಿಹಾರ ದೊರೆಯುತ್ತದೆ. ಎಂದು ಹೇಳಲಾಗಿದೆ. throat pain

Leave A Reply

Your email address will not be published.