Ultimate magazine theme for WordPress.

astrology ಗೋಮಾತೆಗೆ ಈ ನಾಲ್ಕು ಆಹಾರ ಪದಾರ್ಥಗಳನ್ನು ಕೊಟ್ಟರೆ

0 26,826

astrology : Benefits of feed gomatha in astrology ಗೋಮಾತೆಗೆ ಈ ನಾಲ್ಕು ಆಹಾರ ಪದಾರ್ಥಗಳನ್ನು ಕೊಟ್ಟರೆ ಬಡತನ ಬೆನ್ನಟ್ಟಿ ಬರುತ್ತೆ. ಇಲ್ಲಿ ನಾವು ನಿಮಗೆ ತುಂಬಾ ಮಹತ್ವವಾದ ವಿಷಯವನ್ನು ತಿಳಿಸಿಕೊಡುತ್ತೇವೆ. ಈ ಮಹತ್ವವಾದ ವಿಷಯವನ್ನು ನೀವು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಕಾಣುತ್ತೆ. ಇದನ್ನ ಪೂರ್ತಿಯಾಗಿ ಓದಿ.

ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸುತ್ತಾ ಇದ್ದಾಗ ಜ್ಯೋತಿಷ್ಯರಿಂದ ಅಥವಾ ಹಿರಿಯರಿಂದ ನಮಗೆ ಒಂದು ಸಲಹೆ ಸಿಗತ್ತೆ. ಅದು ಗೋಮಾತೆಗೆ ಆಹಾರ ತಿನ್ನಿಸುವುದು ಅಂತ. ಗೋಮಾತೆಗೆ ಆಹಾರವನ್ನು ಎಲ್ಲರೂ ತಿನ್ನಿಸುತ್ತಾರೆ. ಆದರೆ ಗೋಮಾತೆಗೆ ಇಂತಹ ಆಹಾರಗಳನ್ನ ತಿನ್ನಿಸಬಹುದು ಮತ್ತು ಇಂತವುಗಳನ್ನ ತಿನ್ನಿಸಬಾರದು ಅಂತ ಬಹಳ ಜನರಿಗೆ ಗೊತ್ತಿರೋದೇ ಇಲ್ಲ.

ಒಂದು ವೇಳೆ ಗೋಮಾತೆಗೆ ಈ ಆಹಾರ ಪದಾರ್ಥಗಳನ್ನು ತಿನ್ನಿಸಿದ್ರೆ ಗೋಮಾತೆಯ ದೇಹದ ಸಮಸ್ತ ಭಾಗಗಳಲ್ಲಿರುವ ದೇವಾನುದೇವತೆಗಳ ಅವಕೃಪೆಗೆ ನೀವು ಪಾತ್ರರಾಗಬೇಕಾಗುತ್ತದೆ. ಅಲ್ಲದೆ ಬಡತನ ನಿಮ್ಮನ್ನ ಬೆನ್ನಟ್ಟುತ್ತೆ. ಗೋಮಾತೆಗೆ ಈ ಯಾವ ಆಹಾರಗಳನ್ನು ಅಪ್ಪಿ ತಪ್ಪಿಯೂ ತಿನ್ನಿಸಲೇಬಾರದು ಅನ್ನೋ ಕುತೂಹಲಕಾರಿ ವಿಷಯವನ್ನು ಇಲ್ಲಿ ತಿಳಿಸಿಕೊಡುತ್ತೇವೆ. astrology

ನಮ್ಮ ಹಿಂದೂ ಧರ್ಮಶಾಸ್ತ್ರದಲ್ಲಿ ಗೋ ಸೇವೆಯನ್ನು ನಿಸ್ವಾರ್ಥ ಭಾವನೆಯಿಂದ ಮಾಡಿದ್ದೆ ಆದಲ್ಲಿ ಮನೆಯಲ್ಲಿ ಸದಾ ಲಕ್ಷ್ಮಿವಾಸ ಇರುತ್ತೆ ಅಂತ ಹೇಳಲಾಗಿದೆ. ಯಾಕೆಂದರೆ ಗೋಮಾತೆಯ ಸಕಲ ಭಾಗಗಳಲ್ಲಿ ದೇವಾನುದೇವತೆಗಳು ಇರ್ತಾರೆ ಅಂತ ಹೇಳಲಾಗುತ್ತೆ. ಅದಕ್ಕೆ ನಾವು ಕೆಲಸಕ್ಕೆ ಮನೆಯಿಂದ ಹೊರಗಡೆ ಹೊರಟಾಗ ಗೋಮಾತೆ ಕಂಡರೆ ಅದಕ್ಕೆ ನಮಸ್ಕಾರ ಮಾಡೋದು ಸಂಪ್ರದಾಯ.

ಅಲ್ಲದೆ ಗೋಮಾತೆಗೆ ತಿನ್ನೋದಕ್ಕೆ ಆಹಾರವನ್ನು ಕೊಟ್ಟು ನಮ್ಮ ಕಷ್ಟಗಳನ್ನ ಪರಿಹರಿಸು ಮಾತೇ ಅಂತಲೂ ಕೇಳಿಕೊಳ್ಳುತ್ತೇವೆ. ಇದು ಯುಗಯುಗಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವೂ ಹೌದು. ಗೋಮಾತೆಗೆ ಆಹಾರ ತಿನ್ನಿಸಿದ್ರೆ ಗುರು ಗ್ರಹದ ಕೃಪಾದೃಷ್ಟಿ ನಮ್ಮ ಮೇಲಾಗುತ್ತೆ ಅಂತ ಹೇಳಲಾಗಿದೆ. ಹಾಗಾಗಿ ಗುರುವಾರದ ದಿನ ನೀವು ಒಂದು ಚಪಾತಿ ಅಥವಾ ರೊಟ್ಟಿಗೆ ಚಿಟಿಕೆ ಅರಿಶಿನ ಸವರಿ ತಿನ್ನಿಸಿದ್ರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತೆ. astrology

ಸುಖ, ಸಂತೋಷ, ಸಂಪತ್ತು ದ್ವಿಗುಣಗೊಳ್ಳುತ್ತೆ ಅಂತ ಹೇಳಲಾಗುತ್ತೆ. ಮನಸ್ಸಿಗೆ ನೆಮ್ಮದಿ ಇರೋದಿಲ್ಲ, ಮನೆಯಲ್ಲಿ ಸದಾ ಜಗಳ ಕಿರಿಕಿರಿ, ಹಣಕಾಸಿನ ಕಾಸಿನ ಸಮಸ್ಯೆ, ನೌಕರಿಯಲ್ಲಿ ತೊಂದರೆ ಹೀಗೆ ಮಾನಸಿಕವಾಗಿ ಕಷ್ಟಗಳನ್ನ ಎದುರಿಸುತ್ತಾ ಇದ್ದರೆ ರೊಟ್ಟಿಯಲ್ಲಿ ಬೆಲ್ಲ ಇರಿಸಿ ತಿನ್ನಿಸುವುದರಿಂದ ಮಾನಸಿಕ ಸಂಕಷ್ಟಗಳು ಕಡಿಮೆಯಾಗಿ ನೆಮ್ಮದಿ ದೊರೆಯುತ್ತೆ. ಇನ್ನು ಮನೆಯಲ್ಲಿ ಸಾಕಷ್ಟು ದಿವಸಗಳಿಂದ ಯಾವುದೇ ಮಂಗಳ ಕಾರ್ಯ ನಡೆದಿರೋದೇ ಇಲ್ಲ. astrology

ಪ್ರಯತ್ನ ಮಾಡ್ತಾ ಇರ್ತಿರಾ ಆದ್ರೆ ಏನೇನೋ ವಿಘ್ನಗಳು ಅಡ್ಡಿ ಬರ್ತಾನೆ ಇರುತ್ತೆ. ಮಗಳಿಗೆ ಅಥವಾ ಮಗನಿಗೆ ಮದುವೆ ಪ್ರಯತ್ನ ಪಡ್ತಿರ್ತೀರ, ಮನೆ ಕಟ್ಟಿಕೊಳ್ಳುವುದಕ್ಕೆ ಅಥವಾ ಸೈಟ್ ಖರೀದಿ ಮಾಡೋದಕ್ಕೆ ತುಂಬಾ ಪ್ರಯತ್ನ ಪಡ್ತಿರ್ತೀರಾ ಆದ್ರೆ ಅದು ಯಾವುದು ಆಗೋದಿಲ್ಲ. ಅಂತಹ ಸಂದರ್ಭದಲ್ಲಿ ಗೋಮಾತೆಗೆ ರೊಟ್ಟಿ ಅಥವಾ ಚಪಾತಿ ಜೊತೆ ಬೆಲ್ಲ ತಿನ್ನಿಸಿ ಹಸುವಿನ ಹಣೆ ಮುಟ್ಟಿ ನಮಸ್ಕಾರ ಮಾಡಿ ನಿಮ್ಮ ಕಷ್ಟ ಹೇಳ್ಕೊಳ್ಳಿ. ಹಾಗೇನೆ ಗೋಮಾತೆಯ ಕಾಲು ಮುಟ್ಟಿ ನಮಸ್ಕಾರ ಮಾಡಿ ಮುಂದೆ

ನಿಮ್ಮ ಕೆಲಸ ನಿರ್ವಿಘ್ನವಾಗಿ ಕೈಗೂಡತ್ತೆ. ಮನೆಯಲ್ಲಿ ಮಂಗಳ ಕಾರ್ಯಗಳ ನಡೆಯುತ್ತೆ. ಗೋಮಾತೆ ನಮ್ಮ ಸಂಕಷ್ಟಗಳನ್ನ ಖಂಡಿತ ಪರಿಹಾರ ಮಾಡುತ್ತಾಳೆ. ಇದು ಸತ್ಯ. 84 ಲಕ್ಷ ಯೋನಿಗಳಲ್ಲಿ ಜನ್ಮ ತಾಳುವ ಆತ್ಮ ಕೊನೆಗೆ ಹಸುವಿನ ಜನ್ಮವೇ ಆತ್ಮಕ್ಕೆ ಕೊನೆಯದ್ದು ಅಂತ ಹೇಳಲಾಗುತ್ತೆ ನಂತರ ಆತ್ಮ ವಿಶ್ರಾಂತಿ ಪಡೆದು ಅಂತಿಮ ಪ್ರಯಾಣವನ್ನು ಆರಂಭ ಮಾಡುತ್ತಂತೆ. astrology

ಇನ್ನು ಯಾವ ಸ್ಥಳದಲ್ಲಿ ನೀವು ಮನೆ ಕಟ್ಟಬೇಕು ಅಂತ ಸೈಟ್ ಕೊಂಡಿರುತ್ತೇರೋ ಆ ಸ್ಥಳದಲ್ಲಿ 15 ದಿನ ಹಸುವನ್ನ ಕಟ್ಟಿ ಅದಕ್ಕೆ ಆಹಾರ ನೀಡುತ್ತಾ ಹಗಲು ರಾತ್ರಿ ಅದರ ಸೇವೆ ಮಾಡಿದ್ರೆ ಆ ಸ್ಥಳ ಶುದ್ದಿಯಾಗುತ್ತೆ ಅಂತ ಹೇಳಲಾಗುತ್ತೆ. ಈ ಸ್ಥಳದಲ್ಲಿದ್ದ ನಕಾರಾತ್ಮಕ ಅದುರಿ ಶಕ್ತಿಗಳು ಕಾಲ್ ಕೀಳುತ್ತವೆಯಂತೆ. ನೀವು ಯಾವುದಾದರು ಕೆಲಸಕ್ಕೆ ಹೊರಟಾಗ ಗೋಮಾತೆಯ ದರ್ಶನ ಆದರೆ ತುಂಬಾ ಶುಭ ಆಗುತ್ತೆ ಅಂತ ಹೇಳಲಾಗುತ್ತೆ. ಹಸು ಮತ್ತು ಕರು ದರ್ಶನ ಆದರೆ ಅತಿ ಶುಭ ಅಂತ ಹೇಳಲಾಗುತ್ತೆ ಇದು ಹಸುವಿಗೆ ಏನು ತಿನ್ನಿಸಬೇಕು ಅನ್ನೋದರ ಬಗ್ಗೆ ಆಯ್ತು. ನಾನೀಗ

ನಿಮಗೆ ಹಸುವಿಗೆ ಏನನ್ನ ತಿನ್ನಿಸಬಾರದು ಅನ್ನೋದನ್ನ ಹೇಳುತ್ತೇನೆ. ಗೋಮಾತೆಗೆ ಹಿಂದಿನ ದಿವಸ ಮಾಡಿಟ್ಟ ರೊಟ್ಟಿ ಅಥವಾ ಚಪಾತಿಯನ್ನು ಖಂಡಿತ ತಿನ್ನಿಸಬಾರದು. ತಾಜಾ ರೊಟ್ಟಿ ಅಥವಾ ಚಪಾತಿ ಅಂದ್ರೆ ಅಂದಿನ ದಿನ ಮಾಡಿದ ರೊಟ್ಟಿ ಅಥವಾ ಚಪಾತಿಗಳನ್ನ ತಿನ್ನಿಸಬೇಕು. ನೀವು ಅಂದು ಗೋಮಾತೆಗೆ ರೊಟ್ಟಿ ಅಥವಾ ಚಪಾತಿ ತಿನ್ನಿಸಬೇಕು ಅಂತ ಮಾಡಿರ್ತೀರಾ. astrology

ಆದ್ರೆ ಅಂದು ಹಸು ನಿಮಗೆ ಸಿಗುವುದಿಲ್ಲ ನೀವು ರೊಟ್ಟಿ ಅಥವಾ ಚಪಾತಿಯನ್ನು ತೆಗೆದಿಟ್ಟು ಮಾರನೇ ದಿನ ಹಸು ಸಿಕ್ಕಾಗ ತಿನ್ನಿಸುತ್ತೀರಾ. ಇದು ಖಂಡಿತ ತಪ್ಪು. ಹೀಗೆ ಮಾಡಿದ್ರೆ ದೇವಾನು ದೇವತೆಗಳ ಅವಕೃಪೆ ನಿಮ್ಮ ಮೇಲಾಗುತ್ತೆ. ಹಾಗಾಗಿ ಹಸುವಿಗೆ ಅಂದಿನ ದಿನ ಮಾಡಿದ ತಾಜಾ ರೊಟ್ಟಿ ಅಥವಾ ಚಪಾತಿಯನ್ನು ಮಾತ್ರ ತಿನ್ನಿಸಬೇಕು. ಇನ್ನು ಹಸುಗಳಿಗೆ ಎಲ್ಲರೂ ಹಸಿರು ಹುಲ್ಲನ್ನ ತಿನ್ನಿಸುತ್ತಾರೆ.

ಇದು ಸಾಮಾನ್ಯ. ಆದರೆ ಹಸಿರು ಹುಲ್ಲನ್ನು ತಿನ್ನಿಸುವಾಗ ಸುಮಾರು ಜನ ಒಂದು ತಪ್ಪನ್ನು ಮಾಡುತ್ತಾರೆ. ಅದೇನಪ್ಪ ಅಂದ್ರೆ ಅದರ ಜೊತೆಗೆ ಅರಳಿ ಮರದ ಎಲೆಗಳನ್ನು ತಿನ್ನಿಸ್ತಾರೆ. ನೀವು ನಿಮ್ಮ ಕೈಯಾರೆ ಅರಳಿ ಮರದಿಂದ ಎಲೆಗಳನ್ನ ಕಿತ್ತು ಹಸುವಿಗೆ ತಿನ್ನುಸಬಾರದು. ಹೀಗೆ ಮಾಡಿದ್ರೆ ನೀವು ದೇವತೆಗಳ ಅವಕೃಪೆಗೆ ಕಾರಣವಾಗಬೇಕಾಗುತ್ತದೆ. ಇದರಿಂದ ಮನೆಗಳ ಕಷ್ಟ ಹೆಚ್ಚಾಗುತ್ತೆ. ನಿಮಗೆ ಗೊತ್ತಾಗದಂತೆ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತೆ.

ತರಕಾರಿ ತಂದ್ ಮೇಲೆ ಸೊಪ್ಪುಗಳನ್ನು ಬಿಡಿಸಿಕೊಳ್ತೀರಾ ಉಳಿದ ಕಸ ಕಡ್ಡಿಯನ್ನು ಹಸುವಿಗೆ ತಿನ್ನೋದಕ್ಕೆ ಕೊಡ್ತೀರಾ. ಇದು ಕೂಡ ತಪ್ಪಾದ ಕ್ರಮ ಅಂತ ಹೇಳಲಾಗುತ್ತೆ. ಸೊಪ್ಪಿನ ಕಡ್ಡಿ, ಕಸ ತಿನ್ನೋದಕ್ಕೆ ಕೊಡುವಾಗ ಅದರಲ್ಲಿ ಬೆಲ್ಲ ಮತ್ತು ಅಂದಿನ ದಿನ ಮಾಡಿದ ತಾಜಾ ಆಹಾರವನ್ನು ಹಸುವಿಗೆ ತಿನ್ನೋದಕ್ಕೆ ಕೊಡಿ. ಇದು ಸರಿಯಾದ ಕ್ರಮ. astrology

ಕಸ ಕಡ್ಡಿ ಕೊಟ್ಟರೆ ದೇವಾನುದೇವತೆಗಳ ಅವಕೃಪೆಗೆ ನೀವು ಪಾತ್ರರಾಗಬೇಕಾಗುತ್ತೆ. ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಷಯ ಇದೆ. ಅದೇನಪ್ಪ ಅಂದ್ರೆ ಹಸುವಿಗೆ ಎಂದಿಗೂ ಹಾಲನ್ನ ಆಹಾರವಾಗಿ ಕೊಡಬಾರದು. ಇದರಿಂದ ಮಾತೆ ಮಹಾಲಕ್ಷ್ಮಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ನಿಮ್ಮಲ್ಲಿ ಒಂದು ವಿನಂತಿ. ಹಸುಗಳು ರಸ್ತೆ ಬದಿ ಹುಲ್ಲು,

ಆಹಾರ ಪದಾರ್ಥಗಳನ್ನ ತಿನ್ನೋದನ್ನ ನೋಡಿದ್ದೇವೆ. ದಯವಿಟ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನ ನೀವು ಪರಿಸರದಲ್ಲಿ ಎಸಿಬೇಡಿ. ಇದನ್ನ ಗೋವುಗಳು ಆಹಾರದ ಜೊತೆ ತಿಂದುಬಿಡುತ್ತದೆ. ಇದು ಹಸುವಿನ ಹೊಟ್ಟೆ ಸೇರಿ ಅಪಾಯವನ್ನ ತಂದೊಡ್ಡತ್ತೆ. ಇದು ನಮ್ಮ ಸಾಮಾಜಿಕ ಕಳಕಳಿಯ ವಿನಂತಿ. ಹಸುವಿಗೆ ಅಪ್ಪಿ ತಪ್ಪಿಯು ಈ ಆಹಾರಗಳನ್ನು ತಿನ್ನಿಸಬಾರದು. ತಿನ್ನಿಸಿದರೆ ಬಡತನ, ಕಷ್ಟಗಳು ನಿಮ್ಮನ್ನ ಬೆನ್ನಟ್ಟಿ ಬರುತ್ತೆ.

Leave A Reply

Your email address will not be published.