Ultimate magazine theme for WordPress.

amla juice ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ಸೇವಿಸಿ

0 330

amla juice benefits in kannada ನೆಲ್ಲಿಕಾಯಿ ಕುರಿತಾದ ಆರೋಗ್ಯಕರವಾದ ಮಾಹಿತಿಯನ್ನು ನೋಡೋಣ. ನೆಲ್ಲಿಕಾಯಿ ಎಂದರೆ ಬೆಟ್ಟದ ನೆಲ್ಲಿಕಾಯಿ ಎನ್ನುತ್ತಾರಲ್ಲ ಕಾಡುನಲ್ಲಿಕಾಯಿ ಎನ್ನುತ್ತಾರಲ್ಲ ದಪ್ಪ ದಪ್ಪವಾಗಿರುತ್ತದಲ್ಲ ಅದು. ಈಗ ಸಣ್ಣ ನೆಲ್ಲಿಕಾಯಿ ಎಂದು ಬರುತ್ತದೆ ಅದರಿಂದ ಅಷ್ಟು ಲಾಭವಿಲ್ಲ, ನಾನು ತಿಳಿಸಿಕೊಡುತ್ತಿರುವುದು ಬೆಟ್ಟದ ನೆಲ್ಲಿಕಾಯಿ ಬಗ್ಗೆ.

ಇದರಲ್ಲಿ ಯಾವ ಪೋಷಕಾಂಶ ಇದೆ ಎಂದರೆ ಮೆಗ್ನೀಷಿಯಂ ಪೊಟ್ಯಾಶಿಯಂ ಇತರ ಪೋಷಕಾಂಶಗಳು ಇದ್ದಾವೆ. ಹೆಚ್ಚಾಗಿ ವಿಟಮಿನ್ ಸಿ ಅಂಶ ಇದೆ. ಇಷ್ಟೆಲ್ಲಾ ಲಾಭವನ್ನು ಹೊಂದಿರುವ ಈ ಒಂದು ನೆಲ್ಲಿಕಾಯಿ ಬಗ್ಗೆ ಆಯುರ್ವೇದ ಸಿದ್ಧಾಂತದ ಮೂಲಕ ತಿಳಿದುಕೊಳ್ಳುವುದಾದರೆ ಇದರಲ್ಲಿ ರಸಗಳನ್ನು ನೋಡುವುದಾದರೆ ಐದು ರಹಸ್ಯಗಳನ್ನು ಕಾಣಬಹುದು. amla juice

ಮಧುರ ಆಮ್ಲ ಕಟು ತಿಕ್ತಾ ಕಷಾಯ ಹೀಗೆ ಐದು ರುಚಿಗಳನ್ನು ನಾವಿದರಲ್ಲಿ ಕಾಣಬಹುದು. ಹಾಗೆ ಇದರ ವಿಪಾಕವನ್ನು ನೋಡುವುದಾದರೆ ಮಧುರ ವಿಪಾಕವಾಗಿ ಇದು ಪರಿವರ್ತನೆ ಕಾಣುತ್ತಿದೆ ಎಂದು ಕಾಣಬಹುದು. ಹಾಗೆ ಇದರ ಗುಣ ಧರ್ಮ ನೋಡುವುದಾದರೆ ಅತಿ ಶೀತ ಎಂದು ಇದನ್ನು ಕರೆಯಲಾಗಿದೆ. ಋಷ್ಯ ಎಂದು ಕರೆಯಲಾಗಿದೆ ಶಕ್ತಿಯನ್ನು ತುಂಬತಕ್ಕಂಥ ಭೂಲೋಕದ ಅಮೃತ ಎಂದು ಕರೆಯಲಾಗಿದೆ.

ಸುಶ್ರುತ ಚರಕ ವಾಗ್ಭಟ ಮಹರ್ಷಿಗಳಾಗಿರಬಹುದು ಇದನ್ನು ಸಂಜೀವಿನಿ ಎಂದು ಕರೆದಿದ್ದಾರೆ. ನಿತ್ಯ ಸೇವನೆಗೆ ಯೋಗ್ಯ ಎಂದು ಕರೆದಿದ್ದಾರೆ. ನಿಮಗೆ ವಯಸ್ಸಾದರೂ ಕೂಡ ಯಂಗಾಗಿ ಕಾಣಬೇಕೆಂದರೆ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಬೇಕು. ಅಷ್ಟೇ ಅಲ್ಲದೆ ಅತ್ಯಂತ ಶಕ್ತಿಶಾಲಿ ಆಹಾರವಾಗಿ ಇದನ್ನು ಕರೆಯುತ್ತಾರೆ. ಇದನ್ನು ರಾಸಾಯನಿ ಎಂದು ಕೂಡ ಕರೆಯುತ್ತಾರೆ.

ಇನ್ನು ಕೆಲವು ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಎಂಬುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಶರೀರವನ್ನು ಬಲಗೊಳಿಸುವಲ್ಲಿ ಶರೀರವನ್ನು ಶುದ್ಧೀಕರಿಸುವಲ್ಲಿ ಯಾವುದಾದರೂ ದಿವ್ಯ ಔಷದಿ ಇದ್ದರೆ ಭೂಲೋಕದಲ್ಲಿ ಅದು ಬೆಟ್ಟದ ನೆಲ್ಲಿಕಾಯಿ. ಇದನ್ನು ಹೇಗೆ ಸೇವನೆ ಮಾಡಬೇಕೆಂದು ತಿಳಿಯೋಣ. ಇದನ್ನು ಚವನ್ ಫ್ರೆಶ್ ಆಗಿ ಸೇವನೆ ಮಾಡಬಹುದು ಇದು ಅಂಗಡಿಯಲ್ಲೂ ದೊರೆಯುತ್ತದೆ ಮನೆಯಲ್ಲಿ ಇದನ್ನು ಹೇಗೆ ಮಾಡಬೇಕೆಂದರೆ, amla juice

ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ತುರಿದು ತುಪ್ಪದಲ್ಲಿ ಹುರಿದು ಅದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ನೀರು ಹೋಗುವವರೆಗೆ ಚೆನ್ನಾಗಿ ಹುರಿದು ಜೇನುತುಪ್ಪ ಅಥವಾ ಬೆಲ್ಲದ ಪಾಕವನ್ನು ಹಾಕಿ ಅದರ ಮೇಲೆ ಡ್ರೈ ಫ್ರೂಟ್ಸ್ ಅನ್ನು ಹಾಕಿ ಲವಂಗ ಜೀರಿಗೆ ಪುಡಿಯನ್ನು ಮಿಶ್ರಣ ಮಾಡುವುದರಿಂದ ತುಂಬಾ ಒಳ್ಳೆಯ ಚವನ್ ಫ್ರೆಶ್ ಆಗುತ್ತದೆ. ಅದ್ಭುತವಾದ ತ್ರಿದೋಷ ಶಮನ ಮಾಡುವ ಚವನ್ ಫ್ರೆಶ್ ಇದಾಗುತ್ತದೆ.

ಇದನ್ನು ಈ ರೀತಿ ಸೇವನೆ ಮಾಡುವುದರಿಂದ ಶೀತ ವೀರ್ಯ ಗುಣವನ್ನು ಹೊಂದಿದ್ದರೂ ಕೂಡ ಕಫ ನಿವಾರಿಕವಾಗಿ ಕೆಲಸ ಮಾಡುತ್ತದೆ. ಇದನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡುವುದರಿಂದ ಪಿತ್ತಜನ್ಯವಾಗಿ ವಾತ ಜನ್ಯ ವಾಗಿ ಬರತಕ್ಕಂಥ ರೋಗಗಳು ಗುಣವಾಗುತ್ತದೆ. ವಾತ ಜನ್ಯ ವಾಗಿ ಬರುವ ರೋಗಗಳಿಗೆ ಇದರಲ್ಲಿ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕುವುದರಿಂದ ಇದರ ಸೀತಸ್ವಭಾವ ಸಹಜ ಸ್ಥಿತಿಗೆ ಬರುತ್ತದೆ.

ಇದು ಪಿತ್ತಕ್ಕೆ ಮತ್ತು ವಾತಕ್ಕೆ ಒಳ್ಳೆಯ ಔಷಧಿಯಾಗಿದೆ. ವಾತ ಪಿತ್ತ ರೋಗವಿರುವವರು ಇದನ್ನು ಹೇಗೆ ಸೇವನೆ ಮಾಡಬೇಕೆಂದರೆ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಪೇಸ್ಟ್ ಮಾಡಿ ಅದನ್ನು ಬಟ್ಟೆಯಲ್ಲಿ ಹಾಕಿ ಹಿಂಡಬೇಕು ಅದರ ರಸ ಬರುತ್ತದೆ ಅದು ಎಷ್ಟು ರಸ ಬರುತ್ತದೆಯೋ ಅಷ್ಟೇ ಪ್ರಮಾಣದ ನೀರು ಹಾಕಬೇಕು. amla juice

ಮತ್ತೆ ಇದರಲ್ಲಿ ಸೈನ್ದವ ಲವಣ ಆರು ಚಿಟಿಕೆ ಕಾಲು ಮೆಣಸಿನ ಪುಡಿ ಐದರಿಂದ ಆರು ಚಿಟಿಕೆ ಅದನ್ನು ಕಾಳಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಪಿತ್ತಜನ್ಯವಾಗಿ ಬರುವ ರೋಗ ಮತ್ತು ವಾತ ಜನ್ಯವಾಗಿ ಬರತಕ್ಕಂಥ ರೋಗಗಳು ಗುಣವಾಗುತ್ತದೆ. ಯಾರಿಗೆ ತೂಕ ಇಳಿಸಿಕೊಳ್ಳಬೇಕೆಂದು ಇರುತ್ತದೆಯೋ ಅವರು ಇದನ್ನು ಸೇವನೆ ಮಾಡುವುದರಿಂದ ಅವರ ಬೊಜ್ಜು ಬೇಗನೆ ಕರಗುತ್ತದೆ.

ಹೃದಯದ ರೋಗಗಳು ಬರುವುದೇ ಇಲ್ಲ ಬಂದಿದ್ದರೆ ಅದು ನಿವಾರಣೆ ಆಗುತ್ತದೆ. ಫ್ಯಾಟ್ ಲಿವರ್ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ರಕ್ತಹೀನತೆಯ ಕೊರತೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಯಾರಿಗೆ ಸಕ್ಕರೆ ಕಾಯಿಲೆ ಬಿಪಿ ಸಮಸ್ಯೆ ಇದೆ ಇದರ ಜ್ಯೂಸ್ ಅನ್ನು ಕುಡಿಯುವುದರಿಂದ ಎರಡು ಸಮಸ್ಯೆಯನ್ನು ಗುಣಪಡಿಸಬಹುದು. amla juice

ಮೂಳೆಗಳು ತುಂಬಾ ವೀಕ್ ಆಗಿದ್ದರೆ ಅಂಥವರಿಗೆ ವಿಟಮಿನ್ ಸಿ ಹೇರಳವಾಗಿರುವ ನೆಲ್ಲಿಕಾಯಿಯನ್ನು ನೀಡಿದರೆ ಇದು ಕ್ಯಾಲ್ಸಿಯಂ ಅನ್ನು ಒದಗಿಸಿ ಕ್ಯಾಲ್ಸಿಯಂ ಕೊರತೆಯನ್ನು ನಿವಾರಣೆ ಮಾಡುತ್ತದೆ. ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಶಕ್ತಿ ಹೆಚ್ಚಾದರೆ ನಮ್ಮ ಶರೀರಕ್ಕೆ ಯಾವ ರೋಗವು ಬರುವುದಿಲ್ಲ.
ಇದನ್ನು ನಿತ್ಯ ಸೇವನೆ ಮಾಡುವುದರಾದರೆ ನಿರಂತರವಾಗಿ ಮೂರು ತಿಂಗಳು ಸೇವನೆ ಮಾಡಬಹುದು ನಿತ್ಯ ಸೇವನೆ ಮಾಡುವುದು ಹೇಗೆಂದರೆ ಉಪ್ಪಿನಕಾಯಿ ರೂಪದಲ್ಲಿ ಸೇವನೆ ಮಾಡಬಹುದು.

ಸ್ವಲ್ಪ ಪ್ರಮಾಣದಲ್ಲಿ ಔಷಧಿ ರೂಪದಲ್ಲಿ ಜ್ಯೂಸ್ ಕುಡಿಯುವುದು ಅಥವಾ ಬೆಳಗ್ಗೆ ಒಂದು ಚಮಚ ಸಂಜೆ ಒಂದು ಚಮಚ ಚವನ್ ಪ್ರಾಶ್ ಸೇವನೆ ಮಾಡಬಹುದು. ಔಷಧಿ ರೂಪದಲ್ಲಿ ಸೇವನೆ ಮಾಡುವುದಾದರೆ ಮೂರು ತಿಂಗಳವರೆಗೆ ಮಾಡಿ. ಅಲ್ಪ ಪ್ರಮಾಣದಲ್ಲಿ ಆದರೆ ನಿತ್ಯವೂ ಮಾಡಿ. ದಿನಾಲು ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನಬಹುದು ಮತ್ತೆ ಆಹಾರದಲ್ಲಿ ಬೆಟ್ಟದ ನೆಲ್ಲಿಕಾಯನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ ತಿನ್ನಬಹುದು. ಉಪ್ಪಿನಕಾಯಿ ರೂಪದಲ್ಲೂ ಸೇವನೆ ಮಾಡಬಹುದು. amla juice

ಯಾರಿಗೆ ಕಣ್ಣಿನ ಸಮಸ್ಯೆ ಇದೆಯೋ ಇವರು ಬೆಟ್ಟದ ನೆಲ್ಲಿಕಾಯಿಯನ್ನು ಪುಡಿ ಮಾಡಿಕೊಂಡು ಅದರಲ್ಲಿ ಅರ್ಧ ಚಮಚ ತುಪ್ಪ ಮತ್ತು ಜೇನುತುಪ್ಪ ಅರ್ಧ ಚಮಚ ಮಿಶ್ರಣ ಮಾಡಿ ರಾತ್ರಿ ಕಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನೇತ್ರ ರೋಗ ನಿವಾರಣೆ ಮಾಡಿಕೊಳ್ಳಬಹುದು. ಅದು ಯಾವುದೇ ರೀತಿಯಾದಾದರು ನಿವಾರಣೆ ಆಗುವುದು. ಅಜೀರ್ಣ ಮಲಬದ್ಧತೆಗೆ ಇದರ ಜ್ಯೂಸ್ ಕುಡಿದರೆ ಸಾಕು ನಿವಾರಣೆ ಆಗುತ್ತದೆ.

ಚರ್ಮದ ಯಾವುದೇ ರೋಗಗಳಿದ್ದರೂ ಕೂಡ ಬೆಟ್ಟದ ನೆಲ್ಲಿಕಾಯನ್ನು ತಿನ್ನುವುದರ ಮೂಲಕ ಗುಣಪಡಿಸಿಕೊಳ್ಳಬಹುದು. ಇದು ಕೂದಲಿಗೂ ಸಹ ಒಳ್ಳೆಯ ಶಕ್ತಿ ನೀಡುತ್ತದೆ ಎಂದು ಆಯುರ್ವೇದದಲ್ಲಿ ಚರಕ ಮಹರ್ಷಿಗಳು ಹೇಳಿದ್ದಾರೆ. ವಯಸ್ಸಾದರೂ ಕೂಡ ಕಪ್ಪಾದ ಕೂದಲು ಇರಬೇಕೆಂದರೆ ನೀವು ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಿ. amla juice

ಮತ್ತು ಇದನ್ನು ಯಾರು ಸೇವನೆ ಮಾಡಬಾರದು ಎಂದರೆ ಅತಿಯಾಗಿ ಶೀತದ ಅಲರ್ಜಿಯಿಂದ ಬಳಲುತ್ತಿದ್ದವರು ನಿಮೋನಿಯಾ ಅಸ್ತಮಾದಂತ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ವೈದ್ಯರ ಸಲಹೆ ಅನುಸಾರವಾಗಿ ಸೇವನೆ ಮಾಡಬಹುದು. ಇದರ ಜ್ಯೂಸನ್ನು ಕಿಡ್ನಿ ಸಮಸ್ಯೆ ಇರುವವರು ಕುಡಿಯಬಾರದು. ಕಿಡ್ನಿ ಸಮಸ್ಯೆ ಬರಬಾರದು ಎಂದಿದ್ದರೆ ಇದನ್ನು ಸೇವನೆ ಮಾಡಬಹುದು.

ಪೈಲ್ಸ ಸಮಸ್ಯೆ ಹೊಂದಿದ್ದವರಿಗೆ ಇದು ವರದನವಾಗಿದೆ. ಪಿಸ್ತೂಲ ಪೈಲ್ಸ್ ಇದ್ದವರು ಇದನ್ನು ಸೇವನೆ ಮಾಡಬಾರದು. ಹೊಟ್ಟೆ ಬೊಜ್ಜು ಇದ್ದವರು ಹೆರಿಗೆ ನಂತರ ಇದು ಹೆಚ್ಚಾಗಿರುತ್ತದೆ. ಅಂತವರು ಸಹ ಇದನ್ನು ಸೇವನೆ ಮಾಡಬಹುದು. ಆದರೆ ಸ್ತನ್ಯಪಾನ ಮಾಡುವವರು ಇದನ್ನು ಸೇವನೆ ಮಾಡಬಾರದು. ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ನಿರಂತರವಾಗಿ ಮೂರು ತಿಂಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರು ಗಂಟೆಗೆ ಸೇವನೆ ಮಾಡಬಹುದು ಸಣ್ಣ ಮಕ್ಕಳ ಆದರೆ ಅರ್ಧ ಗ್ಲಾಸ್ ಜ್ಯೂಸ್ ಅನ್ನು ಸೇವನೆ ಮಾಡಬಹುದು. amla juice

Leave A Reply

Your email address will not be published.