Ultimate magazine theme for WordPress.

elders blessings ಈ 3 ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳಬಾರದು

0 39,067

elders blessings ಈ ಮೂರು ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳಬಾರದು.ಇಂತಹ ವ್ಯಕ್ತಿಗಳ ಕಾಲಿಗೆ ಯಾವತ್ತೂ ಬೀಳಬಾರದು. ಒಂದು ವೇಳೆ ಬಿದ್ದರೆ ನೀವಾಗಿಯೇ ನೀವು ದುರದೃಷ್ಟವನ್ನು ನಿಮ್ಮ ಮೇಲೆ ಎಳೆದುಕೊಂಡಂತೆ ಆಗುತ್ತೆ ಅನ್ನೋ ರಹಸ್ಯ ಮಾಹಿತಿಯನ್ನು ಇಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಭಾರತೀಯ ಸಂಸ್ಕೃತಿಗೆ ಮಾರು ಹೋಗದವರೇ ಇಲ್ಲ. ನಮ್ಮಲ್ಲಿ ಜಾತಿ ಧರ್ಮಗಳು ಹಲವಾರು ಆದರೂ ಇಲ್ಲಿನ ಸಂಸ್ಕೃತಿ ಮಾತ್ರ ವಿಶೇಷ.

ಭಾರತೀಯ ಸಂಸ್ಕೃತಿಯಲ್ಲಿ ಗುರುಹಿರಿಯರನ್ನ ಗೌರವಿಸುವ ಪರಿಪಾಠವಿದೆ. ಹಿರಿಯರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯಲಾಗುತ್ತದೆ. ಹಿಂದಿನಿಂದಲೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರ್ತಾ ಇದ್ದಾರೆ. ಈ ಆಧುನಿಕ ಯುಗದಲ್ಲೂ ಈ ಪರಿಪಾಠ ಮುಂದುವರೆದಿದೆ.

ಸಾಮಾನ್ಯವಾಗಿ ಎಲ್ಲಾ ಹಿಂದೂಗಳು ಹಿರಿಯರ ಕಾಲಿಗೆ ಬಿದ್ದು ನಮಿಸುವಂತಹ ಸಂಪ್ರದಾಯವನ್ನು ಪಾಲಿಸುವುದು ನಮ್ಮ ಸಂಸ್ಕೃತಿಯ ವಿಶೇಷ. ಯೋಗ್ಯರ ಪಾದ ಸ್ಪರ್ಶಿಸಿ ನಮಸ್ಕರಿಸಿದರೆ ಆಗ ಎಲ್ಲಾ ರೀತಿಯ ಅಹಂ ದೂರವಾಗುತ್ತೆ ಮತ್ತು ಎದುರಿನ ವ್ಯಕ್ತಿಯ ವಯಸ್ಸು, ಅನುಭವ, ಸಾಧನೆ ಮತ್ತು ಜ್ಞಾನವನ್ನು ನಾವು ಗೌರವಿಸಿದಂತೆ ಅನ್ನೋದು ಇದರ ಅರ್ಥ. elders blessings

ಇದಕ್ಕೆ ಪ್ರತಿಯಾಗಿ ಹಿರಿಯರು ಕೂಡ ನಮಗೆ ಆಶೀರ್ವಾದ ನೀಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಇರುವಂತಹ ಈ ಸಂಪ್ರದಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ. ಹಿಂದಿನ ಕಾಲದವರಂತೂ ಹಿರಿಯರನ್ನ ಕಂಡ ತಕ್ಷಣ ಮೊದ್ಲು ಕಾಲಿಗೆ ನಮಸ್ಕರಿಸಿದ ನಂತರನೇ ಯೋಗ ಕ್ಷೇಮ ಸಮಾಚಾರವನ್ನ ವಿಚಾರಿಸುವ ಪದ್ದತಿಯನ್ನು ರೂಢಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ ಯಾವುದಾದರೂ ಶುಭಕಾರ್ಯಗಳಿಗೆ ಹೋದಾಗ ಅಥವಾ ಸಮಾರಂಭಗಳಲ್ಲಿ, ಮನೇಲಿ ಹಬ್ಬ ಇರುವಾಗ, ದೇವರ ಪೂಜೆ ನಂತರ ಹಿರಿಯರ ಪಾದ ಸ್ಪರ್ಶ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಆದ್ರೆ ಇವತ್ತಿನ ಕಾಲದಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಕೂಡ ಹಾಯ್ ಬಾಯ್ ಎನ್ನುವುದರಲ್ಲೇ ಮಾತುಕತೆ ಮುಗಿಸ್ಬಿಡ್ತಾರೆ. ಹಿರಿಯರ ಆಶೀರ್ವಾದವನ್ನು ತಗೊಳ್ಳೋಕೆ ಹಿಂದೆ ಮುಂದೆ ನೋಡುತ್ತಾರೆ. ಈ ರೀತಿ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಳ್ಳುವುದರಿಂದ ಆಗುವ ಲಾಭಗಳೇನು ಮತ್ತು ಶಾಸ್ತ್ರಗಳಲ್ಲಿ elders blessings

ಹಾಗೂ ವಿಜ್ಞಾನದ ಪ್ರಕಾರ ಇದರ ಹಿಂದೆ ಯಾವ ಕಾರಣಗಳಿವೆ ಅನ್ನೋದನ್ನ ತಿಳಿದುಕೊಳ್ಳೋಣ. ಆಚಾರ್ಯ ಚಾಣಕ್ಯರ ಪ್ರಕಾರ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿದರೆ ಆ ವ್ಯಕ್ತಿಗೆ ಶಕ್ತಿ, ಜ್ಞಾನ, ವಿದ್ಯೆ ಮತ್ತು ಪ್ರಸಿದ್ಧಿ ಪ್ರಾಪ್ತಿಯಾಗುತ್ತೆ. ಇದರರ್ಥ ಹಿರಿಯರು ಈ ಜಗತ್ತಿನಲ್ಲಿ ನಮಗಿಂತಲೂ ಅನುಭವಸ್ಥರಾಗಿರುತ್ತಾರೆ. ಹಾಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿರುತ್ತಾರೆ.

ಹಾಗೆ ಅವರು ಕ್ರಮಿಸಿರುವಂತಹ ದೂರವು ದೀರ್ಘವಾಗಿದೆ. ಹಿರಿಯರ ಕಾಲಿನಲ್ಲಿರೋ ಧೂಳಿನಿಂದಲೂ ಹೆಚ್ಚಿನ ಲಾಭವನ್ನು ಪಡೆಯಬಹುದು ಅಂತ ಹೇಳಲಾಗುತ್ತೆ. ಹಿರಿಯರು ಅಥವಾ ಗೌರವಾನ್ವಿತ ವ್ಯಕ್ತಿಯ ಪಾದಮಟ್ಟಿ ನಮಸ್ಕರಿಸೋಕೆ ನಿಮ್ಮ ದೇಹದ ಮೇಲಿನ ಭಾಗವನ್ನು ಭಾಗಿಸಬೇಕು ಮತ್ತು ಮೊಣಕಾಲನ್ನು ಬಗ್ಗಿಸದೆ ನೇರವಾಗಿ ಪಾದಗಳನ್ನು ಕೈಗಳಿಂದ ಮುಟ್ಟಬೇಕು. ಕೈಗಳು ನೇರವಾಗಿ ಇರಬೇಕು. ಹಾಗೆ ನಮಸ್ಕಾರ ಮಾಡುವಾಗ ಮುಖ್ಯವಾಗಿ ನೆನಪಿಡಬೇಕಾದದ್ದು ಇಷ್ಟೇ. elders blessings

ಪಾದಕ್ಕೆ ನಮಸ್ಕರಿಸುವಾಗ ಬಲಗೈಯಲ್ಲಿ ಬಲಪಾದವನ್ನು ಹಾಗೆ ಎಡಗೈಯಲ್ಲಿ ಎಡಪಾದವನ್ನೇ ಮುಟ್ಟಿ ನಮಸ್ಕಾರ ಮಾಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಕಿರಿಯರು ತಮ್ಮ ಹಿರಿಯ ಸಹೋದರ, ಪೋಷಕರು, ಅಜ್ಜ, ಅಜ್ಜಿ, ಶಿಕ್ಷಕರು, ಆಧ್ಯಾತ್ಮಿಕ ಗುರು ಮತ್ತು ಹಿರಿಯ ವ್ಯಕ್ತಿಗಳ ಪಾದ ಸ್ಪರ್ಶಿಸಿ ನಮಸ್ಕರಿಸುತ್ತಾರೆ. ನೆನಪಿಡಿ, ಹಿರಿಯ ಮತ್ತು ಗೌರವಾನ್ವಿತ ವ್ಯಕ್ತಿಗಳ ಪಾದ ಸ್ಪರ್ಶ ಮಾತ್ರ ಮಾಡಬೇಕು. ಯಾಕೆಂದರೆ ಇವರು ಜೀವನಪೂರ್ತಿ ಹೆಚ್ಚು ಜ್ಞಾನ, ಅನುಭವ ಮತ್ತು ಸದ್ಗುಣಗಳನ್ನ ಪಡೆದಿರುತ್ತಾರೆ.

ಇವರ ಆಶೀರ್ವಾದ ತುಂಬಾ ಶಕ್ತಿಶಾಲಿ ಆಗಿರುತ್ತೆ. ಜೊತೆಗೆ ಅವರನ್ನು ಗೌರವಿಸಿದರೆ ಹಾಗೆ ಆಶೀರ್ವಾದ ಪಡೆದುಕೊಂಡರೆ ಅದರಿಂದ ನಮಗೆ ಹೆಚ್ಚಿನ ಜ್ಞಾನ, ಸುಖ, ಸಂತೋಷ ದೊರಕುತ್ತೆ. ಇನ್ನು ವಿಜ್ಞಾನದ ಪ್ರಕಾರ ಈ ರೀತಿ ಬಾಗಿ ಪಾದಗಳಿಗೆ ನಮಸ್ಕರಿಸಿದಾಗ ದೇಹದಲ್ಲಿ ರಕ್ತದ ಸಂಚಲನೆ ಸರಾಗವಾಗಿ ನಡೆಯುತ್ತೆ. ಇದೇ ಕಾರಣದಿಂದ ಹೃದ್ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. elders blessings

ಆದರೆ ಈ ರೀತಿ ನಮಸ್ಕಾರ ಮಾಡಿದ್ರಷ್ಟೇ ಸೂಕ್ತ ಫಲ ಸಿಗುತ್ತೆ ಅಂತ ಪುರಾಣಗಳು ಹೇಳುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲವೇ? ದಿನೇ ದಿನೇ ಮಾನಸಿಕ ಚಿಂತೆ ನಿಮ್ಮನ್ನು ಕಾಡ್ತಾ ಇದ್ಯಾ? ನಕಾರಾತ್ಮಕ ಶಕ್ತಿಗಳ ದಾಳಿ ನಿಮ್ಮ ಮೇಲಾಗುತ್ತಿದೆ ಅಂತ ಅನಿಸ್ತಿದೆಯಾ? ಚಿಂತೆ ಬೇಡ. ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಸಮಯದಲ್ಲಿ ಈ ಒಂದು ಉಪಾಯವನ್ನು ಮಾಡಿ ನೋಡಿ. ಇದನ್ನು ಸರಿಯಾಗಿ ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತೆ.

ಹಾಗಾದ್ರೆ ಆ ಪರಿಹಾರ ಮಾಡಿಕೊಳ್ಳೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಬಿಳಿ ಅಕ್ಕಿ, ಸ್ವಲ್ಪ ತುಪ್ಪ ಅಥವಾ ನೀರು ಹಾಗೂ ಅರಿಶಿಣ ಸೇರಿಸಿ ಅಕ್ಷತೆ ಮಾಡಿಕೊಳ್ಳಿ. ಇದನ್ನು ಎಷ್ಟರ ಮಟ್ಟಿಗೆ ಸೂಕ್ತ ರೀತಿಯಲ್ಲಿ ನಮ್ಮ ಮನೆಯಲ್ಲಿ ಇಡುತ್ತೇವೋ ಅಷ್ಟು ಅಷ್ಟೈಶ್ವರ್ಯ, ಭಾಗ್ಯ, ನೆಮ್ಮದಿ ನಿಮ್ಮ ಮನೆಯನ್ನರಸಿ ಬರುತ್ತೆ. ನೀವು ಮನೆಯಿಂದ ಹೊರಗಡೆ ಹೋಗೋ ಮೊದಲು ಸ್ವಲ್ಪ ಅಕ್ಷತೆಯನ್ನು ನಿಮ್ಮ ಮನೆಯಲ್ಲಿ ಯಾರಾದ್ರೂ ಹಿರಿಯರಿದ್ರೆ ಅಂದ್ರೆ ಅಜ್ಜ, elders blessings

ಅಜ್ಜಿ ಅಥವಾ ತಾಯಿ ಅಥವಾ ತಂದೆ ಯಾರಾದರೂ ಹಿರಿಯರ ಕೈಗೆ ಅಕ್ಷತೆ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿ ಆ ಅಕ್ಷತೆಯನ್ನು ನಿಮ್ಮ ತಲೆಯ ಮೇಲೆ ಹಾಕಿಸಿಕೊಳ್ಳಬೇಕು. ಅಂದ್ರೆ ಅಕ್ಷತೆ ಹಾಕಿಸಿಕೊಂಡು ಆಶೀರ್ವಾದ ಪಡೆಯಬೇಕು. ಅಕ್ಷತೆಯನ್ನು ಆಶೀರ್ವಾದದ ಸ್ವರೂಪದಲ್ಲಿ ನಿಮ್ಮ ತಲೆಯ ಮೇಲೆ ಅವರು ಹಾಕಿದರೆ ನೀವು ಅಂದುಕೊಂಡ ಕಾರ್ಯ ನಿರ್ವಿಘ್ನವಾಗಿ ನೆರವೇರತ್ತೆ.

ಹಾಗೆ ನೀವು ಹೊರಗೆ ಹೋಗುವ ಮೊದಲು ನಿಮ್ಮ ಜೇಬಲ್ಲಿ ಸ್ವಲ್ಪ ಅಕ್ಷತೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಂಡು ಹೋದರೆ ಬಹಳ ಆಶ್ಚರ್ಯಕರವಾದ ರೀತಿಯಲ್ಲಿ ಧನಾಕರ್ಷಣೆ ಆಗುತ್ತೆ. ಅಂದ್ರೆ ನೀವು ಯಾವ ಕೆಲಸಕ್ಕೆ ಹೋಗುತ್ತಿದ್ದೀರೋ, ಆ ಕೆಲಸದಲ್ಲಿ ನಿಮಗೆ ಉನ್ನತ ಮಟ್ಟದ ಯಶಸ್ಸು ದೊರಕಿ ಲಕ್ಷ್ಮಿಯ ಆಗಮನವಾಗುತ್ತೆ. ಹಣದ ಲಾಭವಾಗತ್ತೆ. elders blessings

ಹಳದಿ ಅಕ್ಷತೆ ಮಹಾಲಕ್ಷ್ಮಿಯ ಸಂಕೇತವಾಗಿದೆ. ಇದನ್ನು ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟು ಪ್ರತಿನಿತ್ಯ ಪೂಜಿಸಿದರೆ ಸಕಲ ಭೋಗ ಭಾಗ್ಯಗಳು ನಿಮಗೆ ಸಿಗುವುದರಲ್ಲಿ ಸಂಶಯನೇ ಇಲ್ಲ. ಹಾಗಾಗಿ ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡ್ಕೊಳೋ ಪದ್ಧತಿಯ ಹಿಂದೆ ಇಷ್ಟೆಲ್ಲ ಮಹತ್ವವಿದೆ. ಆದರೆ ಚಾಣಕ್ಯನ ಪ್ರಕಾರ ಸುಖಾ ಸುಮ್ಮನೆ ಯಾರ್ಯಾರದೋ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದರಲ್ಲಿ ಯಾವುದೇ ಅರ್ಥ ಇಲ್ಲ. ಯೋಗ್ಯ ವ್ಯಕ್ತಿಗೆ, ಉನ್ನತ ಮಟ್ಟದ ತಿಳುವಳಿಕೆ ಹೊಂದಿದವರಿಗೆ,

ಸಮಾಜದ ಒಳಿತಿಗಾಗಿ ಶ್ರಮವಹಿಸ್ತಾ ಇರೋರಿಗೆ ನಮಿಸೋದ್ರಲ್ಲಿ ಅರ್ಥವಿದೆ. ತಿಳುವಳಿಕೆ ಇಲ್ದೆ ಮೂರ್ಖತನದಿಂದ ವರ್ತಿಸುವ ವ್ಯಕ್ತಿಗಳು, ಸಮಾಜಘಾತಕರು, ಕೇವಲ ಹಣದಿಂದಲೇ ಶ್ರೀಮಂತರಾಗಿದ್ದು ಕೆಟ್ಟ ಗುಣ ಹೊಂದಿರುವ ವ್ಯಕ್ತಿಗಳು, ಬೇರೆಯವರಿಗೆ ಕೆಡುಕು ಬಯಸುವ ವ್ಯಕ್ತಿಗಳಿಗೆ ಯಾವುದೇ ಮಹತ್ವ ಕೊಡೋ ಅಗತ್ಯವಿಲ್ಲ ಅಂತಾರೆ ಆಚಾರ್ಯ ಚಾಣಕ್ಯರು. ನೋಡಿದ್ರಲ್ಲ, ಇಂತಹ ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳಬಾರದು. ಒಂದು ವೇಳೆ ಬಿದ್ದರೆ ನೀವಾಗಿ ನೀವು ದುರಾದೃಷ್ಟವನ್ನು ನಿಮ್ಮ ಮೈ ಮೇಲೆ ಎಳೆದುಕೊಂಡ ಹಾಗೆ ಆಗುತ್ತೆ ಅನ್ನೋ ರಹಸ್ಯ ಮಾಹಿತಿಯನ್ನು ಇಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ. elders blessings

Leave A Reply

Your email address will not be published.