Ultimate magazine theme for WordPress.

Sugarcane Juice ಕುಡಿಯುವ ಮುನ್ನ ಯಾವ ರೀತಿಯ ಮುನ್ನೆಚ್ಚರಿಕೆ

0 500

Sugarcane Juice Health Benefits of Sugarcane Juice in Kannada ಸ್ನೇಹಿತರೇ ಈ ಲೇಖನದಲ್ಲಿ ಕಬ್ಬಿನ ಹಾಲನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭಗಳು ಇವೆ ಮತ್ತು ಕಬ್ಬಿನ ಹಾಲನ್ನು ಕುಡಿಯುವ ಮುನ್ನ ಯಾವ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಬೇಸಿಗೆ ಕಾಲದಲ್ಲಿ ತಂಪುಪಾನೀಯದ ಮೊರೆ ಹೋಗುತ್ತೇವೆ. ಆದರೇ ದೇಹಕ್ಕೆ ಬೇಕಾದ ನೈಸರ್ಗಿಕ ಪಾನೀಯಗಳಾದ ಎಳನೀರು, ಶರಬತ್ತು,

ಕಬ್ಬಿನ ಹಾಲು ಇವೆಲ್ಲಾ ದಣಿದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಕಬ್ಬಿನ ಹಾಲನ್ನು ಉಷ್ಣ ಸ್ವಭಾವದವರು ಬೇಸಿಗೆ ಕಾಲದಲ್ಲಿ ಮತ್ತು ಉಳಿದ ಕಾಲದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೆಟ್ ಗಳು, ಪ್ರೋಟೀನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣದ ಸತ್ತ್ವಗಳು, ಪೊಟಾಷಿಯಂ ನಂತಹ ಖನಿಜಗಳು ಹೀಗೆ ಹಲವಾರು ಪೌಷ್ಠಿಕಾಂಶಗಳು ಇದರಲ್ಲಿ ಅಡಗಿವೆ. Sugarcane Juice

ದೇಹ ಬೇಸಿಗೆಯಲ್ಲಿ ಕಳೆದುಕೊಂಡ ಶಕ್ತಿಯನ್ನು ಮರಳಿ ಪಡೆಯಲು ಅತ್ಯುತ್ತಮ ಆಯ್ಕೆಯಾದ ಪಾನೀಯವಾಗಿದೆ. ಕಬ್ಬಿನ ಹಾಲನ್ನು ಕುಡಿದ ಸ್ವಲ್ಪ ಹೊತ್ತಿನಲ್ಲೇ ಇದರಲ್ಲಿರುವ ಪೌಷ್ಠಿಕಾಂಶವು ರಕ್ತಕ್ಕೆ ಸೇರುವುದರಿಂದ ತಕ್ಷಣವೇ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಉರಿಮೂತ್ರ ಸಮಸ್ಯೆ ಇದ್ದರೇ ಕಬ್ಬಿನ ಹಾಲಿನಲ್ಲಿ ನೆಲ್ಲಿಕಾಯಿ ರಸ, ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಉರಿಮೂತ್ರದ ಸಮಸ್ಯೆ ನಿವಾರಣೆಯಾಗುತ್ತದೆಂದು ಹೇಳುತ್ತಾರೆ. ಕಬ್ಬಿನ ಹಾಲಿಗೆ ಶುಂಠಿ, Sugarcane Juice

ನಿಂಬೆ ಬೆರೆಸಿ ಸೇವಿಸುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸಿ ಹೊಟ್ಟೆ ಉಬ್ಬರವನ್ನು ಹೋಗಲಾಡಿಸುತ್ತದೆ. ಕಬ್ಬಿನ ಹಾಲು ದೇಹದಲ್ಲಿರುವ ನೀರಿನ ಪ್ರಮಾಣ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುತ್ತದೆ. ಕಬ್ಬಿನ ಹಾಲನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಿಡ್ನಿಯ ಕಲ್ಲನ್ನು ಕರಗಿಸಲು ಸಹಾಯಕವಾಗಿದೆಯಂತೆ. ಕಬ್ಬನ್ನು ತಿನ್ನುವುದರಿಂದ ಹಲ್ಲು ಮತ್ತು ವಸಡು ಗಟ್ಟಿಯಾಗುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲನ್ನು ಸದೃಢಗೊಳಿಸುತ್ತದೆ.

ಕಬ್ಬಿನ ಹಾಲನ್ನು ಕುಡಿಯುವುದರ ಮುಂಚೆ ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೆಂದರೇ ಸಾಮಾನ್ಯವಾಗಿ ಬಾಯಾರಿಕೆಯಾದಾಗ ರಸ್ತೆ ಬದಿಯಲ್ಲಿರುವ ಕಬ್ಬಿನ ಜ್ಯೂಸ್ ಅಂಗಡಿಗೆ ಹೋಗುತ್ತೇವೆ. ಆದರೇ ಕಬ್ಬಿನ ಹಾಲನ್ನು ಕುಡಿಯುವುದರ ಮುಂಚೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಬ್ಬಿನ ಜ್ಯೂಸ್ ಮಾಡುವವರು ಒಬ್ಬ ವ್ಯಕ್ತಿ ಇದ್ದು ಆ ವ್ಯಕ್ತಿಯು ಜ್ಯೂಸ್ ತಯಾರಿಸುವಾಗ ತಮ್ಮ ಕೈಯಿಂದ ಕಬ್ಬಿನ ಮಿಷನ್ ಮುಟ್ಟಿ ಪದೇ ಪದೇ ಕೆಮಿಕಲ್ ಮಾಡಿಕೊಳ್ಳುತ್ತಾರೆ ಮತ್ತು ಅದೇ ಕೈಯಿಂದ ಜ್ಯೂಸ್ ಅನ್ನು ಮಾಡಿಕೊಡುತ್ತಾರೆ. Sugarcane Juice

ಕಬ್ಬಿನ ಹಾಲನ್ನು ತಯಾರು ಮಾಡುವ ಯಂತ್ರವನ್ನು ಹಾಗಾಗ್ಗೆ ಸ್ವಚ್ಛಗೊಳಿಸಬೇಕಾಗುತ್ತದೆ. ಏಕೆಂದರೆ ಕಬ್ಬಿನಲ್ಲಿ ಮಣ್ಣಿನ ಅಂಶವಿರುತ್ತದೆ. ಬಹಳಷ್ಟು ಮಂದಿ ಇದನ್ನ ಸ್ವಚ್ಛ ಮಾಡುವುದಿಲ್ಲ. ಈ ಜ್ಯೂಸ್ ಗೆ ನಿಂಬೆಹಣ್ಣು, ಪುದೀನಾ, ಶುಂಠಿಯನ್ನು ಸ್ವಚ್ಛಗೊಳಿಸದೇ ಬೆರೆಸುತ್ತಾರೆ ಅದರಲ್ಲೂ ಕೆಂಪಾದ ಕಬ್ಬಿನಿಂದ ಮಾಡಿದ ರಸವನ್ನು ಸೇವನೆ ಮಾಡಬಾರದಂತೆ ಏಕೆಂದರೆ ಆ ಕಬ್ಬು ಕೊಳೆತಿರುತ್ತದೆ ಮತ್ತು ಅದರ ರಸ ನಿಮ್ಮ ಆರೋಗ್ಯವನ್ನು ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗ್ಗಿ ಕಬ್ಬಿನ ಹಾಲನ್ನು ಕುಡಿಯುವಾಗ ಕೆಲವೊಂದು ಮುನ್ನೆಚ್ಚರಿಕೆಯನ್ನು ವಹಿಸಿದರೇ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. Sugarcane Juice

Leave A Reply

Your email address will not be published.