Ultimate magazine theme for WordPress.

benefits of honey ಕೇವಲ ಒಂದೇ ಒಂದು ವಾರ ಜೇನುತುಪ್ಪದಲ್ಲಿ

0 409

benefits of eating dates and honey ಜೇನುತುಪ್ಪ ನಮ್ಮ ದೇಹಕ್ಕೆ ಬೇಕಾದ ಎಷ್ಟೋ ಪೌಷ್ಠಿಕಾಂಶಗಳನ್ನ ಕೊಡುತ್ತದೆ. ಅನೇಕ ಔಷಧಿ ಗುಣಗಳು ಇದರಲ್ಲಿದೆ. ಜೇನು ನಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ. ಅದೇ ರೀತಿ ಒಣ ಖರ್ಜೂರವನ್ನು ಬಹಳ ಜನರು ಇಷ್ಟಪಟ್ಟು ತಿನ್ನುತ್ತಾರೆ. ಅದರಿಂದ ಅನೇಕ ಲಾಭಗಳು ಇವೆ. ಜೇನಿನಲ್ಲಿ ಒಂದು ವಾರಗಳವರೆಗೆ ನೆನೆಸಿದ ಖರ್ಜೂರವನ್ನು ತಿಂದರೇ ಎಷ್ಟೇಲ್ಲಾ ಲಾಭಗಳು ಇವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮೊದಲು ಒಂದು ಜಾರ್ ಅನ್ನು ತೆಗೆದುಕೊಳ್ಳೀ, ಅ ಜಾರಿಗೆ ನಾಲ್ಕೈದು ಸ್ಪೂನ್ ನಷ್ಟು ಜೇನುತುಪ್ಪವನ್ನು ಹಾಕಿ, ನಂತರ ಬೀಜ ತೆಗೆದ ಖರ್ಜೂರವನ್ನು ಹಾಕಿ ಮುಚ್ಚುಳ ಹಾಕಿ ಜಾರ್ ಅನ್ನು ಚೆನ್ನಾಗಿ ಕುಲುಕಬೇಕು. ಆ ನಂತರ ಆ ಜಾರ್ ಅನ್ನು ಒಂದು ವಾರ ಕಾಲ ಹಾಗೇ ಇಡಬೇಕು ಮತ್ತು ಮಧ್ಯ ಮಧ್ಯ ಆ ಜಾರ್ ಅನ್ನು ಶೇಕ್ ಮಾಡಬಹುದು. ವಾರದ ಬಳಿಕ ದಿನಕ್ಕೆ ಒಂದೆರೆಡು ಖರ್ಜೂರವನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಯಾರಿಗೆ ರೋಗ ನಿರೋಧಕ ಶಕ್ತಿಯು ಕಡಿಮೆ ಇರುತ್ತದೆಯೋ ಅಂತಹವರಿಗೆ ಹೆಚ್ಚಾಗಿ ರೋಗಗಳು ಬರುತ್ತವೆ. benefits

ಈ ಮಿಶ್ರಣದ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿಯು ದುಪ್ಪಟ್ಟಾಗುತ್ತದೆ. ಇದರಿಂದ ಸೋಂಕು ಮತ್ತು ರೋಗಗಳು ಬರುವುದಿಲ್ಲ. ಯಾರೂ ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೋ ಅವರು ಈ ವಿಧಾನದಿಂದ ಮಾಡಿದ ಖರ್ಜೂರವನ್ನು ಸೇವನೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಒತ್ತಡ ಆತಂಕ ಕಡಿಮೆಯಾಗುತ್ತದೆ. ಯಾರಿಗೆ ಜ್ಞಾಪಕ ಶಕ್ತಿ ಕಡಿಮೆ ಇರುತ್ತದೆಯೋ ಅಂತಹವರು ಈ ಮಿಶ್ರಣವನ್ನು ಸೇವಿಸಬೇಕು. ಈ ಮಿಶ್ರಣದ ಸೇವನೆಯಿಂದ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. benefits

ಚಿಕ್ಕ ಮಕ್ಕಳು ಈ ಮಿಶ್ರಣವನ್ನು ತಿನ್ನುವುದರಿಂದ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ದೊಡ್ಡವರು ಈ ಮಿಶ್ರಣವನ್ನು ತಿನ್ನುವುದರಿಂದ ಮರೆಗುಳಿತನ ದೂರವಾಗುತ್ತದೆ ಮತ್ತು ಗಾಯಗಳು ಶೀಘ್ರವಾಗಿ ಗುಣಮುಖವಾಗುತ್ತದೆ. ಆಂಟಿಬಯೋಟಿಕ್ ಗುಣಗಳು ಇರುವ ಕಾರಣ ಯಾವುದಾದರೂ ಗಾಯವಾಗಿದ್ದರೇ ಈ ಮಿಶ್ರಣ ಸೇವನೆಯಿಂದ ಗಾಯಗಳು ಶೀಘ್ರವಾಗಿ ಗುಣಮುಖವಾಗುತ್ತದೆ. ಮಹಿಳೆಯರಿಗೆ ಬೇಕಾದ ಕಬ್ಬಿಣದ ಅಂಶ, ಕ್ಯಾಲ್ಸಿಯಂ ಹೇರಳವಾಗಿ ಲಭ್ಯವಾಗುತ್ತದೆ ಮತ್ತು ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. benefits

ಮೂಳೆಗಳನ್ನು ಗಟ್ಟಿಮಾಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ. ಮಲಬದ್ಧತೆ, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳು ಬರುವುದಿಲ್ಲ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತದೆ, ಕೆಟ್ಟ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಹೊಟ್ಟೆಯಲ್ಲಿ ಜಂತುಹುಳು ಸಾಯುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ರಕ್ತ ಸಂಚಲನ ಉತ್ತಮವಾಗುತ್ತದೆ. ರಕ್ತದ ಪ್ರಮಾಣ ಹೆಚ್ಚಾಗುವುದಲ್ಲದೇ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. benefits

Leave A Reply

Your email address will not be published.