Ultimate magazine theme for WordPress.

Pumpkin Seeds ಕುಂಬಳಕಾಯಿ ಬೀಜಗಳ ಲಾಭಗಳು

0 427

Pumpkin Seeds Benefits in Kannada ಕುಂಬಳಕಾಯಿ ಬೀಜದ ಕುರಿತಾದ ಆರೋಗ್ಯದ ಲಾಭಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಈ ಕುಂಬಳಕಾಯಿಯಲ್ಲಿ ಬಹಳ ವೆರೈಟಿಗಳು ಇದಾವೆ. ಸಿಹಿ ಕುಂಬಳಕಾಯಿ ಮತ್ತು ಬೂದುಗುಂಬಳಕಾಯಿ ಅಂತ ಇದಾವೆ. ಅದರ ಪ್ರಜಾತಿಗಳು ಹತ್ತು ಹಲವಾರು ಇವೆ. ಎಲ್ಲಾ ಕುಂಬಳಕಾಯಿಗಳಲ್ಲಿ ಇರುವ ಬೀಜಗಳು ಅಷ್ಟೇ ಮಹತ್ವಯುತವಾಗಿರುವಂತಹ ಪೋಷಕಾಂಶಗಳನ್ನು ಹೊಂದಿದಾವೆ.

ಈ ಕುಂಬಳಕಾಯಿ ಬೀಜಗಳಲ್ಲಿ ಪ್ರೊಟೀನ್ ಅಂಶ ಹಾಗೇನೆ ಝಿಂಕ್, ರೈಮೋಪ್ಲೋಬಿನ್, ಥೈಮಿನ್ ಆಮೇಲೆ ಆಂಟಿ ಆಕ್ಸಿಡೆಂಟ್, ನೈಟ್ರಿಕ್ ಆಕ್ಸೈಡ್ ಜೊತೆಗೆ ಕ್ಯಾಲ್ಸಿಯಂ ಮತ್ತೆ ಇನ್ನೂ ವಿಶೇಷವಾಗಿರತಕ್ಕಂತ ಹಲವಾರು ಮಿನರಲ್ಸ್ ಗಳು ಇದರಲ್ಲಿ ಇದಾವೆ. ಹಾಗೇನೆ ಫೈಬರ್ನ ಅಂಶ ಇದೆ. ಇಷ್ಟೆಲ್ಲಾ ಪೋಷಕ ತತ್ವಗಳನ್ನು ಹೊಂದಿರತಕ್ಕಂತಹ ಈ ಕುಂಬಳಕಾಯಿ ಸೇವನೆ ಮಾಡೋದ್ರಿಂದ ಏನೆಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತವೆ ಅನ್ನೋದನ್ನ ನೋಡೋಣ. ಇದರಲ್ಲಿ ಇರತಕ್ಕಂತಹ ಝಿಂಕ್ ಆಗಿರಬಹುದು ಹಾಗೂ

ಇದರಲ್ಲಿ ಇರತಕ್ಕಂತಹ ಪ್ರೋಟೀನ್ ಹೃದಯವನ್ನು ಬಲಿಷ್ಠಗೊಳಿಸುತ್ತೆ. ಹೃದಯ ರೋಗಗಳಿಂದ ಮುಕ್ತಿಗೊಳಿಸುವ ಶಕ್ತಿಯನ್ನು ಇದು ನಮ್ಮ ಶರೀರದಲ್ಲಿ ತುಂಬುತ್ತೆ. ಹೃದಯ ರೋಗವನ್ನು ಬರದಂತೆ ತಡೆಯುವ ಒಂದು ಅದ್ಭುತ ಪ್ರಿಕಾಶನರಿ ಆಗಿ ಕೆಲಸ ಮಾಡುತ್ತೆ. ಇನ್ನು ಇದಾದ ಮೇಲೆ ಇದರಲ್ಲಿ ಯಥೇಚ್ಛವಾಗಿ ಪ್ರೋಟೀನ್ ಅಂಶ ಇರೋದ್ರಿಂದ ಮಾಂಸ ಖಂಡಗಳ ಶಕ್ತಿಯನ್ನು ಇದು ವೃದ್ಧಿ ಮಾಡುವ ದಿವ್ಯ ಶಕ್ತಿಯಾಗಿ ಕೆಲಸ ಮಾಡುತ್ತದೆ. ಇದನ್ನು ಸೇವನೆ ಮಾಡೋದ್ರಿಂದ ಮಾಂಸ ಖಂಡಗಳು ಬಲಿಷ್ಠ ಆಗುತ್ತವೆ

ಅಂದ್ರೆ ಮಾಂಸ ಖಂಡಗಳು ಬಹಳ ಗಟ್ಟಿಯಾಗುತ್ತವೆ. ಹಾಗೇನೆ ಇದರ ಒಂದು ಸೇವನೆಯಿಂದಾಗಿ ನರಮಂಡಲ ತುಂಬಾನೇ ಸ್ಟ್ರಾಂಗ್ ಆಗುತ್ತೆ. ಏಕೆಂದರೆ ಇದರಲ್ಲಿ ಇರತಕ್ಕಂತಹ ಪ್ರೋಟೀನ್ ಅಂಶ ಆಗಿರಬಹುದು, ಝಿಂಕ್ ಆಗಿರಬಹುದು, ಹಾಗೇನೇ ರೈಮೋಪ್ಲೋಬಿನ್, ಥೈಮಿನ್, ಐರನ್ ಅಂಶ, ಕ್ಯಾಲ್ಸಿಯಂ ಅಂಶ ನರನಾಡಿಗಳ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿರುವ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.

ಅದಕ್ಕಾಗಿ ಸುಸ್ತು, ನಿಶಕ್ತಿ, ನರ ದೌರ್ಬಲ್ಯ ಸಮಸ್ಯೆ ಇರುವಂತವರು ಈ ಕುಂಬಳಕಾಯಿ ಬೀಜದಿಂದ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಇನ್ನು ಇದು ಕಿಡ್ನಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಕಿಡ್ನಿ ರೋಗಗಳು ಬರದಂತೆ ತಡೆಯುತ್ತದೆ. ಬಂದ ಮೇಲೆ ಸೇವನೆ ಮಾಡುವುದಕ್ಕಿಂತ ಬರದಂತೆ ತಡೆಯಲು ಇದನ್ನು ಸೇವನೆ ಮಾಡುವುದು ಒಳ್ಳೆಯದು.

ಹಾಗೇನೆ ಇದು ಐಕ್ಯೂ, ಈಕ್ಯೂ, ಎಸ್ ಕ್ಯೂ ಲೆವೆಲ್ ಅನ್ನು ಕ್ರಿಯಾಶೀಲಗೊಳಿಸಿ ಜ್ಞಾಪಕ ಶಕ್ತಿ, ಏಕಾಗ್ರತೆ ಶಕ್ತಿಯನ್ನು ಶರೀರದಲ್ಲಿ ಕ್ರಿಯಾಶೀಲಗೊಳಿಸುತ್ತದೆ. ಮೆನ್ಸಸ್ ಟೈಮ್ ನಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಕೊರತೆ ಕಾಣಿಸುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆಯಿಂದ ಬರತಕ್ಕಂತಹ ಸಂಧಿವಾತ, ಆಮವಾತ ಸಮಸ್ಯೆಗಳನ್ನು ನಾವು ತಡೆಗಟ್ಟಬಹುದು. ಹಾಗೇನೆ ಇದು ಉತ್ತಮವಾಗಿರತಕ್ಕಂತ ಫೈಬರ್ ಅಂಶವನ್ನು ಹೊಂದಿರುವುದರಿಂದ ನಿಯಮಿತವಾಗಿ

ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆ ಗುಣ ಆಗುತ್ತದೆ. ಹಾಗೇನೆ ಕಣ್ಣಿನ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು. ಇದರ ಎಲ್ಲಾ ಪೋಷಕಾಂಶಗಳು ಕಣ್ಣಿಗೆ ಬಹಳ ಉಪಯುಕ್ತವಾಗಿರುವಂತಹ ಒಂದು ಶಕ್ತಿಯನ್ನು ತುಂಬುತ್ತದೆ. ಹಾಗೆ ಕಣ್ಣಿಗೆ ಯಾವುದೇ ಸಮಸ್ಯೆಗಳು ಬರದಂತೆ ತಡೆಯುವುದಕ್ಕೆ, ನಮ್ಮ ಕಣ್ಣನ್ನ ಗಟ್ಟಿಯಾಗಿ ಇಟ್ಟುಕೊಳ್ಳುವುದಕ್ಕೆ, ಬಹಳ ಆರೋಗ್ಯವಾಗಿ ಇಟ್ಟುಕೊಳ್ಳುವುದಕ್ಕೆ ಕುಂಬಳಕಾಯಿ ಸೇವನೆ ಮಾಡುವುದು ಬಹಳ ಒಳ್ಳೆಯದು.

ಹಾಗೇನೆ ಇದು ಕೊಲೆಸ್ಟ್ರಾಲನ್ನು ಕೂಡ ಕರಗಿಸುತ್ತೆ. ಯಾಕಂದರೆ ಇದು ಆಂಟಿ ಆಕ್ಸಿಡೆಂಟ್, ನೈಟ್ರಿಕ್ ಆಕ್ಸಿಡನ ಅಂಶವನ್ನು ಹೊಂದಿರುವುದರಿಂದ ಇದು ನಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೇನೆ ಥೈರಾಯಿಡ್ ಫಂಕ್ಷನ್ ಗಳಾದ T3, T4,TSH ಅನ್ನುವಂತಹ ಹಾರ್ಮೋನ್ ಗಳನ್ನ ಬ್ಯಾಲೆನ್ಸ್ ಮಾಡಿ ಥೈರಾಯಿಡ್ ಫಂಕ್ಷನ್ ಗಳನ್ನು ಕ್ರಿಯಾಶೀಲಗೊಳಿಸಿ ಥೈರಾಯ್ಡ್ ಕಾಯಿಲೆ ಬರದಂತೆ ತಡೆಯುತ್ತದೆ. ಬಂದವರು ಕೂಡ ಇದನ್ನು ಸೇವನೆ ಮಾಡುತ್ತಾ ನಿಯಮಿತವಾಗಿ ಇದರ ಔಷಧಿಗಳನ್ನ ತೆಗೆದುಕೊಳ್ಳುತ್ತಾ

ಹೋದರೆ ಥೈರಾಯಿಡ್ ಅನ್ನು ಗುಣಪಡಿಸಿಕೊಳ್ಳಬಹುದು. ಥೈರಾಯಿಡ್ ಜೀವನಪರ್ಯಂತ ಕಾಡುವ ಸಮಸ್ಯೆ ಅಲ್ಲ. ಮನಸ್ಸು ಮಾಡಿದರೆ ಬಿಪಿ, ಶುಗರ್, ಥೈರಾಯ್ಡ್, ಕೊಲೆಸ್ಟ್ರಾಲ್, ಸಂಧಿವಾತ ಇವುಗಳನ್ನ ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬಹುದು. ಆದರೆ ಅದಕ್ಕೆ ಆಹಾರ ಕ್ರಮ ಏನು? ಯಾವ ಚಿಕಿತ್ಸೆ? ಹೇಗೆ? ಏನು? ಅದನ್ನ ತಿಳ್ಕೋಬೇಕಾಗುತ್ತೆ. ಇನ್ನು ಇದೇ ಕುಂಬಳಕಾಯಿ ಬೀಜದ ಸೇವನೆಯಿಂದಾಗಿ, ಇದರಲ್ಲಿ ಕ್ಯಾಲ್ಸಿಯಂ ಇರೋದ್ರಿಂದ ಏನು ಸಂದೇಹ ಇಲ್ದೆ,

ಈ ಕ್ಯಾಲ್ಸಿಯಂ ಮೂಳೆಗಳನ್ನ ಗಟ್ಟಿ ಮಾಡುವ ಶಕ್ತಿಯನ್ನು ಶರೀರದಲ್ಲಿ ಸೃಷ್ಟಿ ಮಾಡುತ್ತೆ. ಮೂಳೆಗಳು ಸ್ಟ್ರಾಂಗ್ ಆಗ್ತವೆ. ಇದು ಹಲವಾರು ಸಮಸ್ಯೆಗಳಿಂದ ನಮ್ಮ ಶರೀರವನ್ನು ರಕ್ಷಿಸುತ್ತದೆ. ಇನ್ನು ಇದು ಚರ್ಮಕ್ಕೂ ಕೂಡ ಬಹಳ ಒಳ್ಳೆಯದು. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಯಾಕಂದ್ರೆ ಇದರಲ್ಲಿ ಝಿಂಕ್ ಇರೋದ್ರಿಂದ ಹಾಗೇನೆ ನಮ್ಮ ಚರ್ಮದ ಒಳಗಿರುವ ಟಾಕ್ಸಿನ್ ಅನ್ನ ಬೆವರಿನ ಮೂಲಕ ಹಾಗೆ ಮಲಮೂತ್ರಗಳ ಮೂಲಕ ಶರೀರದಿಂದ ಹೊರ ಹಾಕುವ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ.

ಹೀಗೆ ಇದು ಚರ್ಮದ ಆರೋಗ್ಯಕ್ಕೂ ಕೂಡ ಒಳ್ಳೆಯ ಒಂದು ಪರಿಹಾರ ಅಂತ ಹೇಳಬಹುದು. ಚರ್ಮರೋಗಗಳು ಬರದಂತೆ ತಡೆಯುವ ಶಕ್ತಿ ಇದರಲ್ಲಿ ಇದೆ ಅಂತ ಹೇಳಬಹುದು. ಹೀಗೆ ಜಾಯಿಂಟ್ ಪೇನ್ ಆಗಿರಬಹುದು ಮತ್ತೆ ಗ್ಯಾಸ್ಟ್ರಿಕ್ ಆಸಿಡಿಟಿಯನ್ನು ಇದನ್ನು ನಿಯಮಿತ ಪ್ರಮಾಣದಲ್ಲಿ ತಿನ್ನುವುದರಿಂದ ನಿವಾರಿಸಿಕೊಳ್ಳಬಹುದು. ಯಾಕಂದ್ರೆ ಇದು ಡೈಜೆಸ್ಟಿವ್ ಸಿಸ್ಟಮ್ ಅನ್ನ ಕ್ರಿಯಾಶೀಲಗೊಳಿಸುತ್ತದೆ. ಆದ್ರೆ ಅತಿಯಾಗಿ ತಿಂದರೆ ಗ್ಯಾಸ್ಟ್ರಿಕ್ ಆಗುತ್ತದೆ. ಈ ಬೀಜ ಡಯಾಬಿಟೀಸ್ ನಿವಾರಣೆಯನ್ನು ಕೂಡ ಮಾಡುತ್ತದೆ.

ಹಾಗೂ ನಮ್ಮ ಶರೀರದಲ್ಲಿ ಮೂತ್ರದ ಉರಿ, ಕೈ ಕಾಲು ಉರಿ ಮತ್ತು ಶರೀರದಲ್ಲಿ ಪಿತ್ತವ್ಯಾಧಿಯಿಂದ ಬರುವಂತಹ ಉರಿಗಳನ್ನು ಕಮ್ಮಿ ಮಾಡುವ ಶಕ್ತಿ ಈ ಬೀಜದಲ್ಲಿದೆ. ಇದನ್ನು ಸಮರ್ಪಕವಾಗಿ ಬಳಸಬೇಕು. ಹಾಗೆಯೆ ಈ ಕುಂಬಳಕಾಯಿ ಬೀಜವನ್ನು ಒಂದು ಗ್ಲಾಸ್ ಬೆಟ್ಟದ ನೆಲ್ಲಿ ಜ್ಯೂಸ್ ನಲ್ಲಿ ಹಾಕಿ ಸೇವನೆಯನ್ನು ಮಾಡಿದರೆ ಋತುಸ್ರಾವ, ಅತಿಯಾಗಿ ಮೆನ್ಸಸ್ ಆಗ್ತಾ ಇದ್ರೆ ಅದನ್ನ ಇದು ಸ್ಟಾಪ್ ಮಾಡುತ್ತದೆ. ಆಮೇಲೆ ಇದರ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಅಂತ ಏನು ಹೇಳ್ತಾರಲ್ಲ ಇಮ್ಯೂನಿಟಿ ಪವರ್ ತುಂಬಾ ಚೆನ್ನಾಗಿ ಆಗುತ್ತದೆ.

ಯಾರಿಗೆ ರೋಗ ಪ್ರತಿರೋಧಕ ಶಕ್ತಿ ಚೆನ್ನಾಗಿರುತ್ತೆ ಅವರ ಜೀವನದಲ್ಲಿ ಕಾಯಿಲೆಗಳಿಂದ ಅವರಿಗೆ ಯಾವುದೇ ಅವಘಡಗಳು, ಅನಾಹುತಗಳು ಸಂಭವಿಸುವುದಿಲ್ಲ. ಇಲ್ಲಾಂದ್ರೆ ಸಣ್ಣ ಕಾಯಿಲೆಗಳಿಂದ ಮನುಷ್ಯರು ತಮ್ಮ ಜೀವವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಯಾವುದೇ ಕಾಯಿಲೆಯನ್ನ ಬರದಂತೆ ತಡೆಯುವುದು, ಬಂದ ಮೇಲೆ ಅದನ್ನು ಸಹಜವಾಗಿ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿರುವ, ನಮ್ಮ ಇಮ್ಯೂನಿಟಿ ಪವರ್ ನ ಕ್ರಿಯಾಶೀಲಗೊಳಿಸುವ ಶಕ್ತಿ ಇರುವಂತಹ

ಅದ್ಭುತವಾದ ಬೀಜ ಈ ಕುಂಬಳಕಾಯಿ ಬೀಜ. ಇದನ್ನು ಸೇವನೆ ಮಾಡುತ್ತಾ ನಿಮ್ಮ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಿ. ಯಾರು ಈ ಕುಂಬಳಕಾಯಿ ಬೀಜಗಳನ್ನು ಸೇವನೆ ಮಾಡುವಂತಿಲ್ಲ ಅಂದರೆ, ಕಿಡ್ನಿ ಸಮಸ್ಯೆಗಳು ಇರುವಂತವರು. ಇದರಲ್ಲಿ ಪ್ರೋಟೀನ್ ಜಾಸ್ತಿ ಇರೋದ್ರಿಂದ ಇದರ ಸೇವನೆಯನ್ನು ಮಾಡುವಂತಿಲ್ಲ. ಗರ್ಭಿಣಿ ಸ್ತ್ರೀಯರು ಹಾಗೆ ಸ್ತನಪಾನ ಮಾಡಿಸುವಂತಹ

ಹೆಣ್ಣು ಮಕ್ಕಳು ವೈದ್ಯರ ಸಲಹೆಯನ್ನು ಪಡೆದುಕೊಂಡು, ಆಯುರ್ವೇದ ವೈದ್ಯರ ಸಲಹೆಗೆ ಅನುಗುಣವಾಗಿ ಅವರು ಹೇಳಿದ ಕಂಡೀಶನ್ ಗಳನ್ನು ಪಾಲಿಸಿ ಇದನ್ನು ಸೇವನೆ ಮಾಡಬಹುದು. ಉಳಿದಂತೆ ಇದನ್ನು ಎಷ್ಟು ಸೇವನೆ ಮಾಡಬೇಕು ಅಂತ ಹೇಳೋದಾದ್ರೆ, ಒಂದು ದಿನಕ್ಕೆ ಒಂದು ಚಮಚದಷ್ಟು ಸೇವನೆ ಮಾಡಬಹುದು. 10 ರಿಂದ 15 ಗ್ರಾಂ ನವರೆಗೂ ಕುಂಬಳಕಾಯಿ ಬೀಜವನ್ನು ಸೇವನೆ ಮಾಡಬಹುದು. ಇಷ್ಟು ಅದ್ಭುತವಾಗಿರತಕ್ಕಂತ ಲಾಭವನ್ನು ಹೊಂದಿರತಕ್ಕಂತಹ ಕುಂಬಳಕಾಯಿ ಬೀಜವನ್ನು ತಾವು ಬಳಸಿ ಅದ್ಭುತವಾದ ಲಾಭಗಳನ್ನು ಪಡೆದುಕೊಳ್ಳಿ.

Leave A Reply

Your email address will not be published.