Ultimate magazine theme for WordPress.

Simha Rashi 2024 ವರ್ಷ ಭವಿಷ್ಯ ಸಿಂಹ ರಾಶಿಯ ಭವಿಷ್ಯ

0 533

Simha Rashi Bhavishya New Year 2024 ಸ್ನೇಹಿತರೇ 2024ನೇ ಇಸವಿಯ ಸಿಂಹರಾಶಿಯ ವರ್ಷಭವಿಷ್ಯವನ್ನು ತಿಳಿದುಕೊಳ್ಳೋಣ. ಸಿಂಹರಾಶಿಯ ಜನ್ಮ ನಕ್ಷತ್ರಗಳು ಮಖಾ ನಕ್ಷತ್ರದ ನಾಲ್ಕು ಚರಣಗಳು ಉಫಾ ನಕ್ಷತ್ರದ ನಾಲ್ಕು ಪಾದಗಳು, ಉತ್ತರ ನಕ್ಷತ್ರದ ಮೊದಲ ಚರಣ ಸೇರಿರುವುದೇ ಸಿಂಹರಾಶಿಯಾಗಿದೆ. ಈ ರಾಶಿಯ ಹೆಸರೇ ಹೇಳುವಂತೆ ಸಿಂಹದ ಲಾಂಛನವೇ ಇದರ ಚಿಹ್ನೆಯಾಗಿದೆ. ಇವರ ಸ್ವಭಾವ ಕ್ರೂರವಾಗಿರುವಂತಹ ಸ್ವಭಾವ,

ಕ್ಷತ್ರಿಯ ವರ್ಣದ ರಾಶಿಯಾಗಿದೆ. ಪುರುಷ ಲಿಂಗದ ರಾಶಿ, ಪೂರ್ವದಿಕ್ಕಿನ ರಾಶಿ, ರಾಶಿಯ ತತ್ವ ಸ್ಥಿರ ಹಾಗೂ ಅಗ್ನಿ ತತ್ವದ ರಾಶಿಯಾಗಿದೆ. ರಾಶ್ಯಾಧಿಪತಿ ಸೂರ್ಯನಾಗಿದ್ದಾನೆ. ಸೂರ್ಯ ರಾಶಿಯವರಿಗೆ ಅದೃಷ್ಟದ ದಿನ ಯಾವುದು ಎಂದರೆ ರವಿವಾರ ಮತ್ತು ಬುಧವಾರ, ಅದೃಷ್ಟದ ಬಣ್ಣ ಗುಲಾಬಿ ಮತ್ತು ಕೆಂಪು, ಅದೃಷ್ಟದ ರತ್ನ ಮಾಣಿಕ್ಯ ಆಗಿದೆ. ಅದೃಷ್ಟದ ದಿನಾಂಕಗಳು ಯಾವುವು ಎಂದರೆ 1, 10,19 ಮತ್ತು 28ನೇ ತಾರೀಖು ಅದೃಷ್ಟದ ದಿನಾಂಕಗಳಾಗಿವೆ. ಅದೃಷ್ಟದ ಸಂಖ್ಯೆಗಳು Simha Rashi

1, 5,9ಗಳಾಗಿವೆ ಅದೃಷ್ಟದ ದೇವತೆ ಸೂರ್ಯನಾರಾಯಣಸ್ವಾಮಿಯಾಗಿದೆ. ಮಿತ್ರರಾಶಿಗಳು ಮೇಷ, ಮಿಥುನ, ಕನ್ಯಾ, ಶತೃರಾಶಿ ವೃಷಭ, ತುಲಾ, ಕುಂಭರಾಶಿಗಳಾಗಿವೆ. ಸಿಂಹರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ. ಜೀವನದಲ್ಲಿ ಮಹತ್ತ್ವಕಾಂಕ್ಷೆಗಳನ್ನು ಹೊಂದಿರುತ್ತಾರೆ. ದೊಡ್ಡ ಮಟ್ಟದಾಗಿ ಯೋಚನೆ ಮಾಡುತ್ತಾರೆ, ಯಾರಿಗೂ ಮೋಸ ಮಾಡುವ ಗುಣ ಇವರದಲ್ಲ. ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಖರ್ಚು ಮಾಡುವವರು. ಇವರಿಗೆ ಕೋಪ ಹೆಚ್ಚಾಗಿರುತ್ತದೆ. ಸಿಂಹರಾಶಿಯವರಿಗೆ ಗುರು,

ಶನಿ, ರಾಹು, ಕೇತುವಿನ ಗೋಚಾರ ಫಲ ಹೇಗಿದೆ ಎಂದರೆ ಗುರು ಮೇಷರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ನಿಮಗೆ ಗುರುವಿನ ಪ್ರಭಾವ ನಿಮಗೆ ಪೂರ್ಣವಾಗಿರುತ್ತದೆ. ಯಾವ ಕೆಲಸ ಮಾಡಿದರೂ ಅಭಿವೃದ್ಧಿಯಾಗುತ್ತದೆ. ಹೆಚ್ಚು ಆದಾಯ ಗಳಿಸಬಹುದು. ಕುಟುಂಬದಲ್ಲಿ ಬಹಳ ಸಂತಸವಿರುತ್ತದೆ. ಕುಟುಂಬದಲ್ಲಿ ಮದುವೆಯ ಯೋಗವು ಈ ವರ್ಷವಿದೆ. ಭಾಗ್ಯದಲ್ಲಿ ಅನಿರೀಕ್ಷಿತವಾದ ಬೆಳವಣಿಗೆಗಳು ಮತ್ತು ಇಷ್ಟಾರ್ಥವಾದ ವಸ್ತುಗಳನ್ನು ಖರೀದಿ ಮಾಡುವಂತದ್ದು ಮತ್ತು ಉದ್ಯೋಗದಲ್ಲಿ ಹೆಚ್ಚಿನ ಲಾಭವಾಗುತ್ತದೆ. Simha Rashi

ಆರ್ಥಿಕವಾಗಿ ಬಹಳ ಚೇತರಿಕೆಯಾಗುತ್ತದೆ. ಈ ಸಮಯದಲ್ಲಿ ನೀವು ಮನೆ ಕಟ್ಟಿಸುವುದು, ಸೈಟ್ ಖರೀದಿ, ಕಾರು ಕೊಂಡುಕೊಳ್ಳುವುದೋ ಯಾವುದೇ ಆಸೆಯೂ ನೆರವೇರುತ್ತದೆ. ವೃಷಭರಾಶಿಯಲ್ಲಿ ಗುರು ಸಂಚಾರ ಮಾಡುವ ಸಮಯದಲ್ಲಿ ಅಂದರೆ ಮೆ 1 ರ ನಂತರ ನಿಮ್ಮ ರಾಶಿಗೆ ಗುರು 10ನೇಯವನಾಗಿರುವುದರಿಂದ ನಿಮಗೆ ಬಹಳ ದೂರದಲ್ಲಿರುವುದರಿಂದ ಕೆಲವೊಂದು ಎಚ್ಚರಿಕೆಗಳನ್ನ ಪಾಲಿಸಿಕೊಳ್ಳಬೇಕಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಬೇಕು ಒಳ್ಳೆಯ ಆಹಾರ,

ಶುದ್ಧವಾದ ನೀರು ಮತ್ತು ಶುದ್ಧತೆಗೆ ಕಡೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ದುಷ್ಟ ಜನರ ಸಹವಾಸ ಮತ್ತು ದುಷ್ಟ ಚಟಗಳ ಸಹವಾಸವನ್ನು ಬಿಟ್ಟು ಒಳ್ಳೆಯ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಕೆಲವರಿಗೆ ಕೆಲಸಕ್ಕೋಸ್ಕರ ಬೇರೆ ಊರಿಗೆ ಹೋಗುವುದು ಇರುತ್ತದೆ. ನೀವು ಖಾಸಗಿ ಅಥವಾ ಸರ್ಕಾರಿ ನೌಕರಿ ಮಾಡುತ್ತಿರಿ ಆದರೇ ಜನರಿಗೆ ಸಂಬಂಧಪಟ್ಟಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನೀವು ತಾಳ್ಮೆ ಮತ್ತು ಸಹನೆಯನ್ನು ತಂದುಕೊಳ್ಳಬೇಕು. ಈ ಸಮಯದಲ್ಲಿ ಸಾಧ್ಯವಾದರೇ ಗುರುಶಾಂತಿಯನ್ನು ಮಾಡಿಸಿಕೊಳ್ಳಿ. Simha Rashi

ಶನಿ, ರಾಹು, ಕೇತುಗಳ ಗೋಚಾರ ಫಲ ಹೇಗಿದೆ ಎಂದರೆ ಶನಿಗ್ರಹವು ಕುಂಭರಾಶಿಯಲ್ಲಿ ಸಂಚರಿಸುವ ಸಂದರ್ಭ ನಿಮಗೆ ಏಳನೇ ಸ್ಥಾನದಲ್ಲಿರುತ್ತದೆ. ಈ ಸಮಯದಲ್ಲಿ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಂಸಾರ ಅಥವಾ ಮನೆತನದ ವಿಚಾರದಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ತಾಳ್ಮೆ ಮತ್ತು ಬುದ್ದಿವಂತಿಕೆಯಿಂದ ನಿಭಾಯಿಸಿಕೊಳ್ಳುವುದು ಮತ್ತು ಅನಾವಶ್ಯಕವಾದ ಸಂಚಾರ ಅಥವಾ ಪ್ರಯಾಣವನ್ನು ಮಾಡಬಾರದು. ವಿವಾದ, ಕಲಹಗಳಿಂದ ದೂರವಿರಬೇಕು.

ವ್ಯಾಪಾರ, ವ್ಯವಹಾರದಲ್ಲಿ ಸ್ಪರ್ಧೆ ಇರುತ್ತದೆ ಎಚ್ಚರಿಕೆ ವಹಿಸಿ, ಬುದ್ದಿವಂತಿಕೆಯಿಂದ ನಡೆಸಿಕೊಂಡು ಹೋದರೇ ನಿಮಗೆ ಜಯ ಸಿಗುತ್ತದೆ. ಸಮಯವು ನಿಮಗೆ ವ್ಯರ್ಥವಾಗುತ್ತಿರುತ್ತದೆ ಆದ್ದರಿಂದ ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕಾಗುತ್ತದೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡಬೇಡಿ. ಮಾನಸಿಕವಾಗಿ ಚಿಂತೆ ಇರುತ್ತದೆ. ಆ ಚಿಂತೆಯನ್ನು ಕಡಿಮೆಯಾಗಲು ಶನಿಶಾಂತಿ ಮಾಡಿಸಿಕೊಳ್ಳಿ. ರಾಹು ಮತ್ತು ಕೇತುಗಳು ಕ್ರಮವಾಗಿ 8 ಮತ್ತು 2ನೇ ಸ್ಥಾನದಲ್ಲಿರುತ್ತಾರೆ. Simha Rashi

ಕೌಟುಂಬಿಕ ಕಲಹಗಳು ಬರುವ ಸಾಧ್ಯತೆಗಳು ಇರುತ್ತವೆ. ಭಿನ್ನಾಭಿಪ್ರಾಯ, ವೈಮನಸ್ಸುಗಳು ಕಂಡುಬರುತ್ತವೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗೃತೆಯನ್ನು ವಹಿಸಬೇಕಾಗುತ್ತದೆ. ಕೆಲಸದಲ್ಲಿ ಏನೋ ತೊಂದರೆ ಬರುತ್ತಿದ್ದರೇ ಆದಷ್ಟು ಬೇಗ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ ಸಾಧ್ಯವಾದರೇ ನವಗ್ರಹ ಶಾಂತಿಯನ್ನು ಮಾಡಿಸಿದರೆ ಒಳ್ಳೆಯ ಫಲಗಳು ನಿಮಗೆ ಸಿಗುತ್ತದೆ.

2024ನೇ ಇಸವಿಯಲ್ಲಿ ನಿಮಗೆ ಒಳ್ಳೆಯ ಫಲಗಳು ಇವೆ ಅದರ ಜೊತೆಗೆ ಕೆಲವೊಂದು ಸವಾಲುಗಳು ಇವೆ. ಸವಾಲುಗಳನ್ನ ಸಮರ್ಥವಾಗಿ ನಿಭಾಯಿಸುವ ಶಕ್ತಿಯು ನಿಮಗೆ ಇದೆ. ಆಂಜನೇಯಸ್ವಾಮಿಗೆ ಎಳ್ಳೆಣ್ಣೆಯ ಅಭಿಷೇಕವನ್ನು ಮಾಡಿಸಿ ನಿಮಗೆ ಒಳ್ಳೆಯ ಫಲಗಳು ಸಿಗುತ್ತದೆ. ದಕ್ಷಿಣ ಮೂರ್ತಿಗೆ ಅಭಿಷೇಕವನ್ನು ಮಾಡಿಸಿ. ಗುರುವಿನ ಅನುಗ್ರಹ ಆಗಬೇಕೆಂದರೆ ಗುರುಗಳಿಗೆ, ತಂದೆತಾಯಿಯರಿಗೆ, ಹಿರಿಯರಿಗೆ ಗೌರವವನ್ನು ಕೊಡಿ ಮತ್ತು ಅವರಿಗೆ ಸೇವೆಯನ್ನು ಮಾಡಿದರೇ ಗುರುವಿನ ಅನುಗ್ರಹ ನಿಮಗೆ ಸಿಗುತ್ತದೆ. ರಾಘವೇಂದ್ರ ಸ್ವಾಮಿ ಮತ್ತು ಗುರು ದತ್ತಾತ್ರೇಯರ ದರ್ಶನ ಮತ್ತು ಸೇವೆಯನ್ನು ಮಾಡಿದರೇ ಒಳ್ಳೆಯ ಫಲಗಳು ಸಿಗುತ್ತದೆ.

Leave A Reply

Your email address will not be published.