Ultimate magazine theme for WordPress.

Tula Rashi ತುಲಾ ರಾಶಿಯ ಮಾಸ ಭವಿಷ್ಯ

0 19,049

Tula Rashi Bhavishya January 2024 ಜನವರಿ ತಿಂಗಳ ತುಲಾ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಹೊಸ ವರ್ಷದ ತಿಂಗಳಿನಲ್ಲಿ ಏನೆಲ್ಲಾ ಸವಾಲುಗಳಿವೆ? ಏನೆಲ್ಲಾ ಲಾಭಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಅದೃಷ್ಟ ದೇವತೆ ಶ್ರೀಮಹಾಲಕ್ಷ್ಮಿ ಆಗಿದ್ದಾಳೆ. ಅದೃಷ್ಟದ ರತ್ನ ವಜ್ರ ಆಗಿರುತ್ತದೆ. ಅದೃಷ್ಟದ ದಿನಾಂಕ 6,15,24 ಆದರೇ ಅದೃಷ್ಟದ ಸಂಖ್ಯೆಗಳು 4,6,7,9 ಆಗಿರುತ್ತವೆ. ಅದೃಷ್ಟದ ವಾರ ಶುಕ್ರವಾರ ಮತ್ತು ಸೋಮವಾರ ಆಗಿರುತ್ತದೆ. ಅದೃಷ್ಟದ ಬಣ್ಣ ನೀಲಿ ಮತ್ತು ಬಿಳಿ ಆಗಿರುತ್ತದೆ.

ಮಿತ್ರ ರಾಶಿ ಮಿಥುನ, ಕಟಕ, ಕುಂಭ ಆಗಿದೆ. ಶತೃ ರಾಶಿ ಸಿಂಹರಾಶಿ ಆಗಿದೆ. ಇಂತಹ ತುಲಾ ರಾಶಿಯವರಿಗೆ ಹೆಚ್ಚಿನ ನೆನಪಿನ ಶಕ್ತಿಯುಳ್ಳವ್ಯಕ್ತಿಯಾಗಿರುತ್ತಾರೆ ಮತ್ತು ಅಧ್ಯಯನಶೀಲರು. ಏನೇ ಕೆಲಸ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಜೊತೆಗೆ ಸ್ವರ ಮಾಧುರ್ಯವನ್ನು ಹೊಂದಿರುತ್ತಾರೆ. ದೃಢವಾದ ಸಂಕಲ್ಪವನ್ನು ಹೊಂದಿರುತ್ತಾರೆ. ತುಲಾರಾಶಿಯವರು ಯಾರಿಗಾದರೂ ಮಾತನ್ನು ಕೊಟ್ಟರೇ ಅದಕ್ಕೆ ತಕ್ಕಂತೆ ನಡೆಯುತ್ತಾರೆ. ತುಲಾ ರಾಶಿಯವರಿಗೆ Tula Rashi

ಈ ತಿಂಗಳಿನಲ್ಲಿ ಚುರುಕಿನಿಂದ, ದೃಢವಾದ ಸಂಕಲ್ಪದಿಂದ ಮುನ್ನುಗ್ಗಬೇಕಾಗುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಏನೇ ನಿರ್ಧಾರವನ್ನು ತೆಗೆದುಕೊಂಡರೂ ವಾಪಸ್ಸು ತೆಗೆದುಕೊಳ್ಳಬೇಡಿ ಧೈರ್ಯವಾಗಿ ಮುನ್ನುಗ್ಗಿದರೆ ಸಕ್ಸಸ್ ಸಿಗುತ್ತದೆ. ಈ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಧನಲಾಭಗಳು ಸಿಗುತ್ತದೆ. ಹಣಕಾಸಿನ ಗಳಿಕೆಗೆ ಯಾವ ಯಾವ ಮಾರ್ಗಗಳಿವೆ ಎಂಬುದನ್ನು ನೀವು ಹುಡುಕಬೇಕು. ಯಾವ ಯಾವ ರೀತಿಯ ಅವಕಾಶಗಳಿವೆ ಎಂಬುದನ್ನು ಕಂಡುಕೊಳ್ಳಿ ನಿಮ್ಮ ಇಚ್ಚೆಯನ್ನ ಈಡೇರಿಸಿಕೊಳ್ಳಿ.

ಕುಟುಂಬದಲ್ಲಿ ಪತಿ, ಪತ್ನಿಯರಲ್ಲಿ ಹೊಂದಾಣಿಕೆ, ಪ್ರೇಮಿಗಳಲ್ಲಿ ಹೊಂದಾಣಿಕೆ ಇರುತ್ತದೆ. ಕುಟುಂಬದಲ್ಲಿ ಬಹಳಷ್ಟು ಅರ್ಥಮಾಡಿಕೊಳ್ಳುವಿಕೆ ಇರುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳು ಇದ್ದರೂ ನಿಮಗೆ ಸಪೋರ್ಟ್ ಸಿಗುತ್ತದೆ. ಮನೆ ಕಟ್ಟಬೇಕು, ವಾಹನ ಕೊಳ್ಳಬೇಕು, ಸೈಟ್ ಕೊಳ್ಳಬೇಕು ಯೋಚನೆಯಲ್ಲಿದ್ದರೇ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ತೆಗೆದುಕೊಳ್ಳಿ. ಮಕ್ಕಳ ವಿಚಾರವಾಗಿ ಚಿಂತೆ ಮಾಡುತ್ತಿದ್ದರೇ ಸಂತಾನದ ಲಾಭವಿದೆ. Tula Rashi

ನಿಮ್ಮ ಮಕ್ಕಳು ಓದು ಮುಗಿಸಿದ್ದರೇ ಉದ್ಯೋಗದ ಅವಕಾಶಗಳು ಇವೆ. ಪಾಲುದಾರಿಕೆ ವ್ಯವಹಾರ ಮಾಡಬೇಕಾದರೇ ನಿಮ್ಮ ನಿಮ್ಮಲ್ಲಿಯೇ ಪತಿ ಪತ್ನಿಯರು ಮಾತನಾಡಿಕೊಂಡು ಪ್ಲಾನ್ ಮಾಡುವ ಕೆಲಸದಿಂದ ಬಹಳಷ್ಟು ಲಾಭವಾಗುತ್ತದೆ. ನಿಮಗೆ ಬಹಳ ಅವಶ್ಯಕತೆ ಇದ್ದರೇ ನೀವು ಮಾಡುವಂತಹ ಕೆಲಸಗಳನ್ನು ಬದಲಾಯಿಸಿಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳಿ, ಅವಶ್ಯಕತೆ ಇಲ್ಲದಿದ್ದರೇ ಇರುವಂತಹ ಕೆಲಸವನ್ನು ಪ್ರೀತಿಸಿ ಕೆಲಸ ಮಾಡಿ ಮುಂದೆ ಬಂದರೇ ಲಾಭ ಗಳಿಸುವ ಸಾಧ್ಯತೆ ಇರುತ್ತದೆ.

ಕೋರ್ಟ್ ನಲ್ಲಿ ವ್ಯವಹಾರಗಳಿದ್ದರೇ ಅದೆಲ್ಲಾ ಬಗೆಹರಿಯುತ್ತದೆ. ವಿಶೇಷವಾಗಿ ರಾಜಕಾರಣಿಗಳಿಗೆ, ಸಾರ್ವಜನಿಕ ಸೇವೆ ಮಾಡುತ್ತಿರುವವರಿಗೆ, ಸಂಘಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಸನ್ಮಾನಗಳು ಮತ್ತು ಒಳ್ಳೆಯ ಅವಕಾಶಗಳಿವೆ. ಪ್ರವಾಸೋದ್ಯಮ ಬ್ಯುಜಿನೆಸ್ ಮಾಡುತ್ತಿದ್ದರೇ ಲಾಭ ಗಳಿಸುವ ಸಾಧ್ಯತೆಗಳು ಇರುತ್ತವೆ. ಆರೋಗ್ಯ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ನೋಡಿಕೊಳ್ಳಬೇಕು. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬಂದರೂ ವೈದ್ಯರ ಬಳಿ ಹೋಗಿ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು. Tula Rashi

ಕೆಮ್ಮು, ನೆಗಡಿ, ಕಫದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸ್ವಲ್ಪ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ತುಲಾರಾಶಿಯವರು ಯಾರನ್ನಾದರೂ ಪ್ರೀತಿ ಮಾಡಬೇಕಾದರೇ ತಮ್ಮ ಕುಟುಂಬ ಮತ್ತು ತಮ್ಮ ಪರಿಸ್ಥಿತಿಯನ್ನು ನೋಡಿ ಪ್ರೀತಿಸಿದರೇ ಮಾತ್ರ ಮನೆಯಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ನೀವು ಅಂದುಕೊಂಡಿರುವಂತಹ Tula Rashi

ಕೆಲಸ ಕಾರ್ಯಗಳು ನೆರವೇರುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಎಚ್ಚರಿಕೆಗಳನ್ನುಗಮನ ಅರಿಸಬೇಕಾಗುತ್ತದೆ. ಉಳಿತಾಯದ ಕಡೆ ಗಮನ ಕೊಡಬೇಕಾಗುತ್ತದೆ ಮುಂದಿನ ದಿನಗಳಲ್ಲಿ ಅದರ ಪ್ರಯೋಜನವಾಗುತ್ತದೆ. ತುಲಾರಾಶಿಯವರು ವಿಶೇಷವಾಗಿ ಸೂರ್ಯ ನಮಸ್ಕಾರ ಮಾಡಬೇಕು. ನಾಗ ಕ್ಷೇತ್ರಗಳ ದರ್ಶನದಿಂದ ಬಹಳಷ್ಟು ಅನುಕೂಲಗಳು ಆಗುತ್ತವೆ. ಮನೆದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಿ ಅದ್ಭುತವಾದ ಫಲಗಳು ಸಿಗುತ್ತವೆ.

Leave A Reply

Your email address will not be published.