Ultimate magazine theme for WordPress.

Vrischika Rashi ವೃಶ್ಚಿಕ ರಾಶಿಯ ಮಾಸ ಭವಿಷ್ಯ

0 20,934

Vrischika Rashi Bhavishya January 2024 ಜನವರಿ ತಿಂಗಳ ವೃಶ್ಚಿಕ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಹೊಸ ವರ್ಷದ ತಿಂಗಳಿನಲ್ಲಿ ಏನೆಲ್ಲಾ ಸವಾಲುಗಳಿವೆ? ಏನೆಲ್ಲಾ ಲಾಭಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವೃಶ್ಚಿಕ ರಾಶಿಯ ರಾಶಿಯ ಅಧಿಪತಿ ಕುಜಗ್ರಹ. ಅದೃಷ್ಟದ ವಾರ ಮಂಗಳವಾರ ಮತ್ತು ಗುರುವಾರ. ಅದೃಷ್ಟದ ದೇವತೆ ಶಿವ ಮತ್ತು ಆಂಜನೇಯಸ್ವಾಮಿ ಆಗಿದ್ದರೇ ಅದೃಷ್ಟದ ಸಂಖ್ಯೆ 3,7,9, ಆಗಿದೆ. ಅದೃಷ್ಟದ ದಿನಾಂಕಗಳು 9,8,27 ಆಗಿದೆ. ಮಿತ್ರ ರಾಶಿ ಕಟಕ ಮತ್ತು ಮೀನ ರಾಶಿಯಾದರೇ, ಶತೃ ರಾಶಿ ಮೇಷ,

ಸಿಂಹ,ಧನುಸ್ಸು ರಾಶಿಗಳಾಗಿವೆ. ವೃಶ್ಚಕ ರಾಶಿಯವರು ನ್ಯಾಯವಂತರು, ಸತ್ಯವಂತರು, ವಿಮರ್ಶಾಪ್ರಿಯರಾಗಿರುತ್ತಾರೆ. ವೃಶ್ಚಿಕ ರಾಶಿಯವರು ನಿರ್ಭಯಿಗಳು, ರಸಿಕರಾಗಿರುತ್ತಾರೆ. ಜನವರಿ ತಿಂಗಳಿನಲ್ಲಿ ಯಾವೆಲ್ಲಾ ಫಲಗಳು ಸಿಗುತ್ತಿವೆ ಎಂದರೆ ಜೀವನದಲ್ಲಿ ಈ ತಿಂಗಳ ಪ್ರಾರಂಭದಲ್ಲಿ ಅನೇಕ ಏರಿಳಿತಗಳು, ಸವಾಲುಗಳು ಇರುತ್ತವೆ. ಜೀವನದಲ್ಲಿರುವ ಅಡೆತಡೆಗಳನ್ನ ಯಾವ ರೀತಿ ನಿಭಾಯಿಸಲಿ ಎಂಬ ಯೋಚನೆಯಲ್ಲಿರುತ್ತೀರಿ. Vrischika Rashi

ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸಬೇಕೆಂಬುದನ್ನ ಸರಿಯಾಗಿ ಪ್ಲಾನ್ ಮಾಡಿಕೊಂಡರೇ ಆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಾಲವನ್ನು ಮಾಡಬಾರದು ಮತ್ತು ಇತರರಿಗೆ ಸಾಲವನ್ನು ಕೊಡಬೇಡಿ. ಅನಾವಶ್ಯಕ ಖರ್ಚನ್ನು ಆದಷ್ಟು ಕಡಿಮೆ ಮಾಡಿರಿ. ಮಧ್ಯಸ್ಥಿಕೆಯನ್ನು ವಹಿಸುವುದು ಆದಷ್ಟು ಕಡಿಮೆ ಮಾಡಿ. ಕಾನೂನಿಗೆ ಸಂಬಂಧಪಟ್ಟಂತ ವಿಚಾರದಲ್ಲಿ ಸೂಕ್ಷ್ಮವಾಗಿ ಸರಿಮಾಡಿಕೊಳ್ಳಿ. ಚಿಕ್ಕ ಪುಟ್ಟ ಕೆಲಸ ಅಥವಾ ಬೃಹತ್ ಕೆಲಸ ಮಾಡುತ್ತಿದ್ದರೂ ನೀವು ಮಾಡುವ ಕೆಲಸದಲ್ಲಿ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನೀವು ಸ್ತ್ರೀಯಾಗಿದ್ದರೇ

ಪುರುಷರ ವಿಚಾರದಲ್ಲಿ ಮತ್ತು ಪುರುಷರಾಗಿದ್ದರೇ ಸ್ತ್ರೀಯರ ವಿಚಾರದಲ್ಲಿ ಸ್ವಲ್ಪ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಖರ್ಚು ಹೆಚ್ಚಾಗುವುದು ಇಲ್ಲವೇ ನಷ್ಟ ಸಂಭವವಿರುತ್ತದೆ ಆದ್ದರಿಂದ ಮಕ್ಕಳಿಗೆ ಶಾಂತ ರೀತಿಯಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಮಾಡಿರಿ. ಜನರಿಗೆ ನೀವು ಒಳ್ಳೆಯದು ಮಾಡಿರುತ್ತೀರಿ ಆದರೇ ಅದು ಕೆಟ್ಟದಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ನೀವು ಒಳ್ಳೆಯದು ಹೇಳಿದರೂ ಅರ್ಥಮಾಡಿಕೊಳ್ಳುವುದಿಲ್ಲ ಹಾಗಾಗಿ ಜನರಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. Vrischika Rashi

ವಾದ ವಿವಾದಕ್ಕೆ ಹೋಗಬೇಡಿ. ನೀವು ಯಾರ ಸಹವಾಸಕ್ಕೂ ಹೋಗದೇ ಇದ್ದರೆ ಉತ್ತಮ. ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರಿಗೆ ಮತ್ತು ರಾಜಕಾರಣಿಗಳು ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕು. ಗಾಳಿಯಿಂದ ಮತ್ತು ನೀರಿನಿಂದ ಶೀತ, ಕೆಮ್ಮು, ಗಂಟಲು ನೋವು ಈ ರೀತಿಯ ಸಮಸ್ಯೆಗಳು ಬಾದಿಸುತ್ತವೆ ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಗಮನ ಅರಿಸಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಇರುತ್ತದೆ. Vrischika Rashi

ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದರೇ ಒಳ್ಳೆಯದು. ವ್ಯಾಪಾರದಲ್ಲಿ ಸಾಲಬಾಧೆ ಸಂಭವಿಸುತ್ತದೆ ಆದ್ದರಿಂದ ವ್ಯಾಪಾರದಲ್ಲಿ ಸಾಲವನ್ನು ಮಾಡಿಕೊಳ್ಳಬೇಡಿ. ಯಾವುದೇ ವ್ಯಾಪಾರದಲ್ಲೂ ಸವಾಲುಗಳು ಇರುತ್ತವೆ ಆ ವ್ಯಾಪಾರದಲ್ಲಿ ಲಾಭವನ್ನು ಪಡೆಯಲು ಚಿಂತನೆಯನ್ನು ಮಾಡಿಕೊಂಡರೇ ಖಂಡಿತವಾಗಿ ಲಾಭ ಸಿಗುತ್ತದೆ. ಈ ತಿಂಗಳಿನಲ್ಲಿ ಒಳ್ಳೆಯ ಫಲಗಳೇ ಇವೆ ಆದರೇ ಒಳ್ಳೆಯ ಫಲಗಳು ಸಿಗಲು ಚಿಂತಿಸಿ. ಜನವರಿ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರಗಳೇನೆಂದರೇ ಮಹಾಮೃತ್ಯುಂಜಯ ಮಂತ್ರವನ್ನು ಪಠಣ ಮಾಡಿರಿ. ಕೇಸರಿ ಬಟ್ಟೆ ಮತ್ತು ಕಡಲೆಬೇಳೆ ದಾನವನ್ನ ಮಾಡಿರಿ. ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತದ್ದು, ಗುರುವಿನ ಆರಾಧನೆ ಮತ್ತು ತಂದೆ ತಾಯಿಗಳ ಸೇವೆ ಮಾಡುವಂತದ್ದು ಮಾಡಿರಿ ಖಂಡಿತವಾಗಿ ನಿಮಗೆ ಅದ್ಭುತವಾದ ಫಲಗಳು ಸಿಗುತ್ತದೆ.

Leave A Reply

Your email address will not be published.