Ultimate magazine theme for WordPress.

Kannada Astrology ಚಿಟ್ಟೆ ಮನೆಯೊಳಗೇ ಬಂದರೆ 3

0 22,881

Kannada Astrology tips ಸ್ನೇಹಿತರೇ ನಿಮ್ಮ ಮನೆಗೆ ಹಾಗಾಗ್ಗ ಚಿಟ್ಟೆ ಬರುತ್ತಿದೆಯಾ ಹಾಗಾದರೇ ನಿಮ್ಮ ಮನೆಗೆ ಮೂರು ತಿಂಗಳಿನಲ್ಲಿ ಈ ಘಟನೆ ನಡೆಯುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಚಿಟ್ಟೆಗಳು ನಮ್ಮ ಮನೆಗೆ ಪದೇ ಪದೇ ಬಂದು ಹೋಗುತ್ತಿವೆ ಎಂದರೆ ಅದು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯ ಸಂಕೇತವಾಗಿದೆ. ನೀವು ಯಾವುದೋ ವಿಚಾರದಲ್ಲಿ ಮಗ್ನರಾಗಿರುತ್ತೀರಾ,

ಗಾಢವಾಗಿ ಏನೇನೋ ಯೋಚಿಸುತ್ತಿರುತ್ತೀರ, ಏನೋ ಒಂದು ನಿರ್ಧಾರವನ್ನು ಮಾಡಬೇಕು ಅಂದುಕೊಳ್ಳುತ್ತಿರುತ್ತೀರಿ ಆದರೇ ಸರಿಯಾದ ನಿರ್ಧಾರವನ್ನು ತಂದುಕೊಳ್ಳಲು ಆಗುತ್ತಿರುವುದಿಲ್ಲ. ಆಕಸ್ಮಿಕವಾಗಿ ನಿಮಗೆ ಒಂದು ಚಿಟ್ಟೆ ಕಾಣಿಸಿಕೊಂಡರೇ, ಅದು ಯಾವ ಬಣ್ಣದ್ದೇ ಆಗಿರಲಿ, ಯಾವ ಜಾಗದಲ್ಲಾದರೂ ಕಾಣಿಸಿಕೊಳ್ಳಲಿ ನಿಮ್ಮ ಮನಸ್ಸು ಗೊಂದಲದಲ್ಲಿ ಇದ್ದಾಗ ನೀವು ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅದು ಸರಿಯಾದ ಸೂಚನೆ ಎಂಬುದಾಗಿರುತ್ತದೆ. Kannada Astrology

ನಿಮ್ಮ ಈ ನಿರ್ಧಾರದಲ್ಲಿ ದೇವತೆಗಳು ನಿಮ್ಮ ಜೊತೆಯಲ್ಲಿದ್ದಾರೆಂದು ತಿಳಿಯಿರಿ. ಅಷ್ಟೇ ಅಲ್ಲ ನಿಮ್ಮ ಪಿತೃಗಳು ಚಿಟ್ಟೆಗಳ ರೂಪದಲ್ಲಿ ಬರುತ್ತಾರೆ. ನೀವು ಯಾರನ್ನಾದರೂ ತುಂಬಾ ಅಚ್ಚುಕೊಂಡಿರುತ್ತೀರಿ ಮತ್ತು ಪ್ರತಿಯೊಂದಕ್ಕೂ ಅವರ ಸಲಹೆಗಳನ್ನು ಪಡೆಯುತ್ತಿರುತ್ತೀರಿ ಅವರು ಈ ಸಮಯದಲ್ಲಿ ನಿಮ್ಮ ಜೊತೆ ಇಲ್ಲವೆಂದಾಗ ಅವರು ಚಿಟ್ಟೆಗಳ ರೂಪದಲ್ಲಿ ಬಂದು ನಿಮ್ಮ ನಿರ್ಧಾರಕ್ಕೆ ಹಸಿರು ನಿಶಾನೆಯನ್ನು ತೋರಿಸುತ್ತಾರೆ. ಅವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆಂದು ತಿಳಿದುಕೊಳ್ಳಿ.

ಚಿಟ್ಟೆಗಳು ಕಂಡತಕ್ಷಣ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಅವುಗಳಿಗೆ ಪ್ರಾರ್ಥನೆಯನ್ನು ಮಾಡಿಕೊಳ್ಳಿ. ಚಿಟ್ಟೆಗಳಿಗೆ ಸ್ವತಂತ್ರವಾಗಿರುವುದು ತುಂಬಾ ಪ್ರಿಯವಾದದ್ದು, ಹಾಗೆಯೇ ಬದಲಾವಣೆಯೂ ಕೂಡ ಚಿಟ್ಟೆಯ ಒಂದು ಪ್ರವೃತ್ತಿ. ನಿಮಗೆ ಯಾವುದೇ ಕಾರಣವಿಲ್ಲದಿದ್ದರೂ ಚಿಟ್ಟೆ ಕಂಡಿದ್ದೇ ಆದರೇ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆಯಾಗುತ್ತದೆ. ನೀಲಿ ಬಣ್ಣದ ಚಿಟ್ಟೆ ಕಂಡರೆ ನಿಮ್ಮ ಜೀವನದಲ್ಲಿ ಮುಂದೆ ನಿಮಗೆ ಏನೋ ಒಂದು ಅವಕಾಶ ಕಾಯುತ್ತಿದೆ. Kannada Astrology

ನಿಮ್ಮ ಜೀವನವೇ ಬದಲಾಗಲಿದೆ ಮತ್ತು ಎಲ್ಲಿಂದಲ್ಲೋ ಧನಲಾಭವಾಗುತ್ತದೆ. ನಿಮ್ಮ ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ ಎಂಬ ಸಂಕೇತವನ್ನು ಇದು ನೀಡುತ್ತದೆ. ಕೆಂಪು ಬಣ್ಣದ ಅಥವಾ ಗುಲಾಬಿ ಬಣ್ಣದ ಚಿಟ್ಟೆಗಳು ಕಂಡರೆ ಆ ಬಣ್ಣ ಪ್ರೀತಿಯ ಸಂಕೇತವಾಗಿರುತ್ತದೆ. ನಿಮ್ಮ ಪ್ರೀತಿಯ ವಿಷಯದಲ್ಲಿ ಏನೇ ತೊಂದರೆಗಳು ಇದ್ದರೂ ಅದು ಬಗೆಹರಿಯುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಶ್ರಮ ಕೂಡ ಮುಖ್ಯವಾಗಿರುತ್ತದೆ. ಆದರೇ ಇವೆಲ್ಲವೂ ನಿಮ್ಮ ಭಾವನೆಗಳ ಮೇಲೆ ನಿಂತಿರುತ್ತದೆ.

ನಿಮ್ಮ ಸುಗಮವಾಗಿ ನಡೆಯುತ್ತಿದ್ದು ನಿಮ್ಮ ಜೀವನವೂ ಸುಂದರವಾಗಿದ್ದು ಚಿಟ್ಟೆಗಳು ನಿಮ್ಮ ಕಣ್ಣಿಗೆ ಪದೇ ಪದೇ ಕಾಣಿಸಿಕೊಂಡರೇ ಅದು ಒಳ್ಳೆಯ ಸಂಕೇತಗಳಲ್ಲ. ಆ ಚಿಟ್ಟೆಗಳು ನಿಮಗೆ ಎಚ್ಚರಿಕೆಯನ್ನು ನೀಡುತ್ತಿವೆ. ನೀವು ಆದಷ್ಟು ಹುಷರಾಗಿರಬೇಕು. ಎಷ್ಟೋ ಜನರು ತಮ್ಮ ಜೀವನ ನಡೆಯುವ ಸಂದರ್ಭದಲ್ಲಿ ಅಹಂಕಾರವನ್ನು ತೋರಿಸುತ್ತಾರೆ. ಜೊತೆಯಲ್ಲಿರುವವರಿಗೆ ಮರ್ಯಾದೆಯನ್ನ ಕೊಡುವುದಿಲ್ಲ ಇಂತಹ ವರ್ತನೆ ಇರುವವರು ಬದಲಾವಣೆ ಮಾಡಿಕೊಳ್ಳಬೇಕು. Kannada Astrology

ಬದಲಾವಣೆಯನ್ನ ಮಾಡಿಕೊಳ್ಳದಿದ್ದರೇ ನಿಮ್ಮ ಕೆಟ್ಟ ಸಮಯ ಅಲ್ಲಿಂದ ಪ್ರಾರಂಭವಾಗುತ್ತದೆ ಎಂಬ ಸೂಚನೆಯನ್ನ ಚಿಟ್ಟೆಗಳು ನೀಡುತ್ತವೆ. ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ನಡೆಯುತ್ತಿರುತ್ತದೆ. ಜೀವನದಲ್ಲಿ ಖುಷಿ ಎಂಬುವುದೇ ಇರುವುದಿಲ್ಲ ಇಂತಹ ಸಮಯದಲ್ಲಿ ಆಕಸ್ಮಿಕವಾಗಿ ಚಿಟ್ಟೆ ಕಂಡುಬಂದರೇ ಇದನ್ನ ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ. ಅಂದರೆ ನಿಮ್ಮ ಕೆಟ್ಟ ಸಮಯ ಮುಗಿಯುತ್ತದೆ. ನೀವು ಸ್ವಲ್ಪ ತಾಳ್ಮೆಯನ್ನ ಹೊಂದಬೇಕಾಗುತ್ತದೆ. ನಿಮ್ಮ ಯೋಚನೆಯಲ್ಲಿ ಸಕಾರಾತ್ಮಕತೆಯನ್ನ ಇಟ್ಟುಕೊಳ್ಳಬೇಕೆಂಬುದನ್ನ ಚಿಟ್ಟೆಗಳು ನೀಡುತ್ತವೆ.Kannada Astrology

ಕೆಲವು ಬಾರಿ ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಪೂರ್ತಿಯಾಗಿ ಕಾನ್ಫಿಡೆಂಟ್ ಇರುವುದಿಲ್ಲ ಸರಿ ತಪ್ಪುಗಳ ಬಗ್ಗೆ ಗೊಂದಲವಿರುತ್ತದೆ ನಿಮಗೆ ಚಿಟ್ಟೆ ನಿಮ್ಮ ಕಣ್ಣ ಮುಂದೆ ಬರುತ್ತದೆ ಅದು ನಿಮಗೆ ಮುಂದೆ ಒಳ್ಳೆಯ ದಿನಗಳು ಬರುತ್ತಿವೆ ಎಂಬ ಸಂಕೇತವನ್ನು ತಿಳಿಸುತ್ತದೆ. ಚಿಟ್ಟೆ ಕಂಡ ತಕ್ಷಣ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ.
ನೀವು ಹೆಚ್ಚು ಸಮಯವನ್ನು ಯಾವ ರೂಮ್ ನಲ್ಲಿ ಕಳಿಯುತ್ತಿರುತ್ತೀರೋ ಆ ರೂಮಿನ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಸಂಧಿಯನ್ನ ಸ್ವಚ್ಛವಾಗಿಟ್ಟುಕೊಳ್ಳಿ. ಹಸಿರು ಮತ್ತು ಕೆಂಪುಬಣ್ಣದ ವಸ್ತುಗಳು ಅಥವಾ ಡಾರ್ಕ್ ಬಣ್ಣದ ವಸ್ತುಗಳು ಇಲ್ಲದ ರೀತಿಯಲ್ಲಿ ನೋಡಿಕೊಳ್ಳಿ. ಪೇಪರ್ ನಲ್ಲಿ ಚಿಟ್ಟೆಯನ್ನ ಬಿಡಿಸಿ ಆ ಪೇಪರ್ ಅನ್ನು ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಯ ಮೇಲೆ ಅಂಟಿಸಬೇಕು.

Leave A Reply

Your email address will not be published.