Ultimate magazine theme for WordPress.

Mesha Rashi ಮೇಷರಾಶಿಯವರಿಗೆ ಫೆಬ್ರವರಿ ತಿಂಗಳಿನ ಮಾಸಭವಿಷ್ಯ

0 16,064

Mesha Rashi Bhavishya February in kannadatop ten ಮೇಷರಾಶಿಯವರಿಗೆ ಫೆಬ್ರವರಿ ತಿಂಗಳಿನ ಮಾಸಭವಿಷ್ಯವನ್ನು ತಿಳಿದುಕೊಳ್ಳೋಣ. ಯಾವ ರೀತಿಯ ಫಲಗಳು ಸಿಗುತ್ತಿವೆ? ನಿಮಗೆ ಇರುವ ಅಡೆತಡೆಗಳು ಸರಿ ಆಗುತ್ತದೆಯಾ? ನಿಮಗೆ ಧನ ಪ್ರಾಪ್ತಿ ಯೋಗವಿದೆಯಾ? ನಿಮಗೆ ಇರುವ ಹಣಕಾಸಿನ ಸಮಸ್ಯೆಗಳು ಸರಿ ಆಗುತ್ತದೆಯಾ? ನಿಮ್ಮ ಸಮಸ್ಯೆಗೆ ಪರಿಹಾರ ಎಲ್ಲಾವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.

ಮೇಷರಾಶಿಗೆ ಜನ್ಮ ನಕ್ಷತ್ರಗಳು ಯಾವುವು ಎಂದರೆ ಅಶ್ವಿನಿ ನಕ್ಷತ್ರದ ನಾಲ್ಕು ಚರಣ, ಭರಣಿ ನಕ್ಷತ್ರದ ನಾಲ್ಕು ಚರಣ, ಕೃತಿಕಾ ನಕ್ಷತ್ರದ 1ನೇ ಚರಣ ಸೇರಿರುವುದೇ ಮೇಷರಾಶಿ. ಮೇಷರಾಶಿಯ ಲಾಂಛನ ಆಡು ಆಗಿದೆ. ಅಂದರೆ ಮೇಕೆಯ ಚಿತ್ರವಾಗಿದೆ. ರಾಶಿಯ ಅಧಿಪತಿ ಕುಜಗ್ರಹವಾಗಿದೆ. ಮೇಷ ರಾಶಿಯವರು ಧೈರ್ಯವಂತರು. ಯಾವುದೇ ಸವಾಲುಗಳನ್ನು ಸ್ವೀಕರಿಸುವಂತಹ ವ್ಯಕ್ತಿಗಳು ಎನ್ನಬಹುದು. Mesha Rashi 

ಇವರ ಮೈನಸ್ ಪಾಯಿಂಟ್ ಎಂದರೆ ಕೋಪ. ಈ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಯಶಸ್ವಿಯಾಗುತ್ತೀರಿ. ನಿಮಗೆ ಒಳ್ಳೆಯ ದಿನಾಂಕಗಳು ಯಾವುವು ಎಂದರೆ 8,9 ಮತ್ತು 27 ಬಹಳಷ್ಟು ಶುಭಕಾರಿಯಾದ ದಿನಾಂಕಗಳಾಗಿವೆ. ಫೆಬ್ರವರಿ ತಿಂಗಳಿನಲ್ಲಿ ವಿಶೇಷವಾದ ಚೈತನ್ಯವಿರುತ್ತದೆ ಗೆಲ್ಲುತ್ತೀನಿ ಎಂಬ ಆತ್ಮವಿಶ್ವಾಸವಿರುತ್ತದೆ. Mesha Rashi 

ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅಷ್ಟೇ ಮುಖ್ಯವಾಗಿರುತ್ತದೆ. ಆಗಾಗಿ ನೀವು ತೆಗೆದುಕೊಳ್ಳುವಂತಹ ತೀರ್ಮಾನ ಬಹಳ ಯಶಸ್ವಿಯಿಂದ ಕೂಡಿರುತ್ತದೆ. ನೀವು ಏನು ಮಾಡಬೇಕು ಅಂದುಕೊಳ್ಳುತ್ತೀರೋ ಅದರಲ್ಲಿ ಗೆಲುವು ಸಿಗುತ್ತದೆ. ಎಚ್ಚರಿಕೆಯ ವಿಷಯವೇನೆಂದರೆ ಆತುರದ ತೀರ್ಮಾನ, ಬೇಜಾಬ್ದಾರಿತನವನ್ನು ಮಾಡಬಾರದು. ಈ ತಿಂಗಳಿನಲ್ಲಿ ಅನಿರೀಕ್ಷಿತ ಧನಲಾಭಗಳು ಕಂಡುಬರುತ್ತದೆ. ಸರ್ಕಾರಕ್ಕೆ ಸಂಬಂಧಿಸಿದಂತಹ ಯಾವುದೇ ಯೋಜನೆಗಳಾಗಿರಬಹುದು,

ಸವಲತ್ತುಗಳಾಗಿರಬಹುದು, ಕೆಲಸಗಳಾಗಿರಬಹುದು, ಸರ್ಕಾರದ ಯಾವುದೇ ಕೆಲಸವನ್ನು ಕೂಡ ಅದು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಒಳ್ಳೆಯ ಜನರ ಸಹಕಾರ ಮತ್ತು ಸಪೋರ್ಟ್ ಸಿಗುತ್ತದೆ. ವಿಶೇಷವಾಗಿ ವಕೀಲರಿಗೆ, ರಾಜಕಾರಣಿಗಳಿಗೆ, ಪೊಲೀಸ್ ಇಲಾಖೆಯಲ್ಲಿರುವವರಿಗೆ ಯಾವುದೇ ಸರ್ಕಾರಿ ಸ್ವಾಮ್ಯದಲ್ಲಿ ಕೆಲಸ ಮಾಡುತ್ತಿರುವವರು ಸವಾಲಿನ ಕೆಲಸ ನಿಮ್ಮಗೆ ಬರುತ್ತದೆ ಅದನ್ನು ಉತ್ಸಾಹದಿಂದ ಒಪ್ಪಿಕೊಂಡು ಅದರಿಂದ ಯಶಸ್ಸು ಸಿಗುವ ಸೂಚನೆಗಳಿವೆ. Mesha Rashi 

ವಿಶೇಷವಾಗಿ ಶಿಕ್ಷಕರಿಗೆ ಒಳ್ಳೆಯ ಫಲ ಸಿಗುತ್ತದೆ. ಸ್ವಲ್ಪ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಒತ್ತಡ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೆಲವೊಂದು ಜನರಿಗೆ ಕಂಡುಬರುತ್ತಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಿ. ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಬೇಕೆಂದುಕೊಂಡಿದ್ದರೇ ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಚೆಕ್ ಮಾಡಿಕೊಂಡರೆ ಒಳ್ಳೆಯದು. ಯಾವುದೇ ತರಹದ ಆಸ್ತಿಯನ್ನು ಮಾಡಬೇಕಾದರೇ Mesha Rashi 

ಮೊದಲು ಅದರ ಬಗ್ಗೆ ಚೆನ್ನಾಗಿ ವಿಚಾರಿಸಿ ಆಸ್ತಿಯನ್ನು ಖರೀದಿಸಿ.ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಆತುರ ಪಡಬೇಡಿ, ಹೆಚ್ಚಿನ ಅಧ್ಯಯನ, ತಾಳ್ಮೆ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಯಶಸ್ಸನ್ನು ಕಾಣಬಹುದು. ಆದಾಯದ ಬಗ್ಗೆ ನೋಡುವುದಾದರೇ ದುಡ್ಡು ಬರುತ್ತಿರುತ್ತದೆ ಅದೇ ರೀತಿ ಖರ್ಚು ಕೂಡ ಹೆಚ್ಚಾಗಿರುತ್ತದೆ.

ಖರ್ಚಿಗೆ ಕಡಿವಾಣವನ್ನು ಹಾಕಿಕೊಂಡರೆ ಸ್ವಲ್ಪ ದುಡ್ಡನ್ನು ಉಳಿಸಿಕೊಳ್ಳಬಹುದು. ನೀವು ವಾಸವಿರುವ ಮನೆಯನ್ನು ಯಾವುದೋ ಕಾರಣಕ್ಕಾಗಿ ಬದಲಾಯಿಸುತ್ತೀರಿ. ನೀವು ವ್ಯಾಪಾರ ಮಾಡುವವರಾಗಿದ್ದರೇ ಕೆಲವೊಂದು ಸವಾಲುಗಳು ಮತ್ತು ಏರಿಳಿತಗಳು ಇರುತ್ತವೆ ಅದನ್ನೆಲ್ಲಾ ಶಾಂತ ರೀತಿಯಲ್ಲಿ ಸುಧಾರಿಸಿಕೊಂಡು ಹೋದರೇ ಖಂಡಿತವಾಗಿ ವ್ಯಾಪಾರ ಕ್ಷೇತ್ರದಲ್ಲಿ ಒಳ್ಳೆಯ ಫಲಗಳು ಸಿಗುತ್ತವೆ. ದ್ರವ ರೂಪದ ವಸ್ತುಗಳಾದ ಹಾಲು, ನೀರು, ಕೂಲ್ ಡ್ರಿಂಕ್ಸ್ ಗಳ ಮಾರಾಟಗಾರರಿಗೆ ಹೆಚ್ಚಿನ ಲಾಭಗಳಾಗುವ ಸಾಧ್ಯತೆ ಇದೆ. Mesha Rashi 

ಷೇರು, ಮ್ಯೂಚುವಲ್ ಫಂಡ್ಸ್, ವ್ಯಾಪಾರ, ವ್ಯವಹಾರ ಮಾಡುವವರಿಗೆ ಮಧ್ಯಮ ಫಲಗಳು ಇದ್ದರೂ ಸಹ ಹೆಚ್ಚಿನ ಪ್ರಯತ್ನ ಮಾಡುವುದರಿಂದ ಅತ್ಯದ್ಭುತವಾದ ಫಲವನ್ನು ಪಡೆದುಕೊಳ್ಳಲು ಅವಕಾಶವಿದೆ. ಎಲ್ಲಾ ವರ್ಗದ ಜನರಿಗೂ ಒಳ್ಳೆಯ ಫಲಗಳಿವೆ. ಕೆಲವು ಸಮಸ್ಯೆಗಳಿಗೆ ಪರಿಹಾರವೇನೆಂದರೆ ದುರ್ಗಾದೇವಿಯ ಆರಾಧನೆಯನ್ನು ಮಾಡಿಕೊಳ್ಳಿ, ಶ್ರೀ ಮಹಾಲಕ್ಷ್ಮಿಯ ಉಪಾಸನೆಯನ್ನು ಮಾಡಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಸಾಧು ಸಂತರಿಗೆ ದಾನ ಮಾಡಿ, ಹಿರಿಯರಿಗೆ ಮತ್ತು ಗುರುಗಳಿಗೆ ಗೌರವವನ್ನು ಕೊಡಿರಿ. ಕುಲದೇವರ ಆರಾಧನೆಯನ್ನು ಮಾಡಿಕೊಳ್ಳುವುದರಿಂದ ಬಹಳಷ್ಟು ಅನುಕೂಲಕರವಾಗಿದೆ.

Leave A Reply

Your email address will not be published.