Ultimate magazine theme for WordPress.

astrology lakshmi ಸ್ತ್ರೀಯ ಶರೀರದ ಈ ಅಂಗದ ಮೇಲೆ ಮಚ್ಚೆ ಇದ್ರೆ

0 327

astrology lakshmi ಸ್ತ್ರೀಯರ ಈ ನಾಲ್ಕು ಅಂಗಗಳ ಮೇಲೆ ಈ ಆಕಾರದ ಮಚ್ಚೆಗಳಿದ್ದರೇ ಕೋಟ್ಯಾಧಿಪತಿಗಳಾಗುತ್ತಾರೆಂಬ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮಹಿಳೆಯಲ್ಲಿರುವ ಒಂದು ಮಚ್ಚೆಯೂ ಏನೆಲ್ಲಾ ಹೇಳುತ್ತದೆ ಎಂದು ತುಂಬಾ ಜನರಿಗೆ ಗೊತ್ತೇ ಇರುವುದಿಲ್ಲ. ಮಚ್ಚೆಯಲ್ಲಿ ಅದೃಷ್ಟವು ಅಡಗಿದೆ, ದುರಾದೃಷ್ಟವು ಅಡಗಿದೆ. ದೇಹದ ತಪ್ಪಾದ ಭಾಗದಲ್ಲಿರುವ ಒಂದು ಮಚ್ಚೆ ಕಪ್ಪು ಚುಕ್ಕಿಯಾಗಿ ಕಾಣಬಹುದು. ಅಂಗಶಾಸ್ತ್ರದ ಪ್ರಕಾರ ವ್ಯಕ್ತಿಯ ಶರೀರದ ಮೇಲೆ ಇರುವ ಮಚ್ಚೆಯನ್ನು ನೋಡಿ ಭವಿಷ್ಯವನ್ನು ಹೇಳಬಹುದೆಂದು ಉಲ್ಲೇಖಿಸಲಾಗಿದೆ.

ಶರೀರದ ಯಾವ ಭಾಗದಲ್ಲಿರುವ ಮಚ್ಚೆ ಯಾವ ರೀತಿಯ ಪ್ರಭಾವ ಬೀರುತ್ತದೆಂದು ತಿಳಿದುಕೊಳ್ಳಬಹುದು. ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಅಂತಹವರು ತುಂಬಾ ಅದೃಷ್ಟವಂತರೆಂದು ಅಂಗಶಾಸ್ತ್ರ ಹೇಳುತ್ತದೆ. ಇವರು ಮಾಡುವ ಎಲ್ಲಾ ಕೆಲಸಗಳಲ್ಲೂ ಅದೃಷ್ಟ ಎನ್ನುವುದು ಅವರ ಜೊತೆ ಇರುತ್ತದೆ. ಪ್ರತೀ ಕ್ಷೇತ್ರದಲ್ಲಿಯೂ ಯಶಸ್ಸನ್ನು ಕಾಣುತ್ತಾರೆ. ಅದೃಷ್ಟ ದೇವತೆ ಮತ್ತು ಲಕ್ಷ್ಮಿದೇವಿಯ ಆಶೀರ್ವಾದ ಇವರ ಮೇಲೆ ಇರುತ್ತದೆ. ಹಣೆಯ ಎಡ ಮತ್ತು ಬಲ ಭಾಗದಲ್ಲಿರುವ ಮಚ್ಚೆ ಧನಸಮೃದ್ಧಿಯ ಸಂಕೇತವಾಗಿದೆ.

ಇವರು ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಐಷರಾಮಿ ಜೀವನವನ್ನು ಬಯಸುತ್ತಾರೆ. ಹೆಚ್ಚು ಹಣ ಖರ್ಚು ಮಾಡುವ ಕಾರಣ ಇವರ ಹತ್ತಿರ ದುಡ್ಡು ನಿಲ್ಲುವುದಿಲ್ಲ. ಉಬ್ಬುಗಳ ಮೇಲಿರುವ ಮಚ್ಚೆಯು ನಾಯಕತ್ವದ ಗುಣವನ್ನು ಹೇಳುತ್ತದೆ. ಇಂತಹವರು ಖ್ಯಾತಿಯನ್ನು ಪಡೆಯುವುದಲ್ಲದೇ ಆರ್ಥಿಕ ಸಮೃದ್ಧಿಯನ್ನು ಹೊಂದುತ್ತಾರೆ. ಉಬ್ಬಿನ ಎಡ ಭಾಗದಲ್ಲಿ ಮಚ್ಚೆ ಇದ್ದವರು ಸ್ವಲ್ಪ ಎದರಿಕೆಯ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ವ್ಯವಹಾರದಲ್ಲಿ ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಉಬ್ಬಿನ ಬಲ ಭಾಗದಲ್ಲಿರುವ ಮಚ್ಚೆಯು ಸಂತೋಷ, ಸುಖ ವೈವಾಹಿಕ ಜೀವನ ಮತ್ತು ಆರೋಗ್ಯವಂತ ಮಕ್ಕಳನ್ನು ಸೂಚಿಸುತ್ತದೆ. ಬಲಕಣ್ಣಿನಲ್ಲಿರುವ ಮಚ್ಚೆಯನ್ನು ಹೊಂದಿರುವವರು ಪ್ರಾಮಾಣಿಕರಾಗಿರುತ್ತಾರೆ. ಹೆಚ್ಚು ಪರಿಶ್ರಮವನ್ನು ಪಡುತ್ತಾರೆ ಮತ್ತು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಎಡಗಣ್ಣಿನಲ್ಲಿ ಮಚ್ಚೆ ಇದ್ದರೇ ನಿರಾಶಾವಾದಿಗಳಾಗಿರುತ್ತಾರೆ. ಕಿವಿಯ ಯಾವುದೇ ಭಾಗದಲ್ಲಿರುವ ಮಚ್ಚೆಯು ಐಷರಾಮಿ ಜೀವನವನ್ನು ಸೂಚಿಸುತ್ತದೆ. ಮಹಿಳೆ ಅಥವಾ ಪುರುಷರ ತುಟಿಯ ಮೇಲಿನ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹವರ ದಾಂಪತ್ಯ ಜೀವನ ಸುಖವಾಗಿರುತ್ತದೆ.

ಇಂತಹವರು ವೈವಾಹಿಕ ಜೀವನದಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಸುಖದಿಂದ ಸಂಸಾರ ಮಾಡುವುದನ್ನು ಸೂಚಿಸುತ್ತದೆ. ಕೆಳಗಿನ ತುಟಿಯಲ್ಲಿ ಮಚ್ಚೆ ಇದ್ದವರು ಆಹಾರದ ಬಗ್ಗೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಪುರುಷ ಅಥವಾ ಮಹಿಳೆಯ ತುಟಿಯ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅಶುಭ ಎಂದು ಹೇಳಲಾಗುತ್ತದೆ. ಇಂಥಹವರು ವೈವಾಹಿಕ ಜೀವನದಲ್ಲಿ ಕೆಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಾಲಿಗೆಯ ಮೇಲಿರುವ ಮಚ್ಚೆಯು ಶಿಕ್ಷಣದ ಮೇಲಿನ ತೊಂದರೆ ಮತ್ತು ವಾಕ್ ಸಂಬಂಧಿತ ಸಮಸ್ಯೆಯ ಸಂಕೇತವಾಗಿದೆ.

ನಾಲಿಗೆ ತುದಿಯಲ್ಲಿರುವ ಮಚ್ಚೆಯು ರಾಜತಾಂತ್ರಿಕತೆ ಮತ್ತು ಕೌಶಲ್ಯವನ್ನು ಉಳ್ಳವರಾಗಿರುತ್ತಾರೆ. ಗಲ್ಲದ ಮೇಲೆ ಮಚ್ಚೆ ಇದ್ದವರು ಪ್ರಯಾಣವನ್ನು ಇಷ್ಟಪಡುತ್ತಾರೆ. ಹೆಚ್ಚು ಹೆಚ್ಚು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಮಚ್ಚೆಯು ಗಲ್ಲದ ಬಲಭಾಗದಲ್ಲಿ ಇದ್ದರೇ ತಾರ್ಕಿಕವಾಗಿ ಉತ್ತರಿಸುವ ಗುಣವನ್ನು ಹೊಂದಿರುತ್ತಾರೆ. ಎಡಭಾಗದಲ್ಲಿದ್ದರೆ ಪ್ರಾಮಾಣಿಕರಾಗಿರುತ್ತಾರೆ. ಕುತ್ತಿಗೆಯ ಮುಂಭಾಗದಲ್ಲಿ ಮಚ್ಚೆ ಇದ್ದರೆ ಅಂತಹವರು ಅದೃಷ್ಟವಂತರಾಗಿರುತ್ತಾರೆ. ಉತ್ತಮ ಧ್ವನಿ ಮತ್ತು ಕಲಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ.

ಹಿಂಭಾಗದಲ್ಲಿ ಇದ್ದರೇ ಆಕ್ರಮಣಕಾರಿಯ ಮನೋಭಾವವನ್ನು ಹೊಂದಿರುತ್ತಾರೆ. ಎದೆಯ ಎಡ ಭಾಗದಲ್ಲಿ ಮಚ್ಚೆ ಇದ್ದವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಇಂತಹವರ ವಿವಾಹ ವಿಳಂಬವಾಗುತ್ತದೆ. ಇವರು ಕಾಮಾಸಕ್ತರಾಗಿರುತ್ತಾರೆ. ಎದೆಯ ಬಲಭಾಗದಲ್ಲಿದ್ದರೆ ಅವರು ಶ್ರೀಮಂತರಾಗಿರುತ್ತಾರೆ. ಮಹಿಳೆಯ ಒಕ್ಕಳಿನ ಸುತ್ತ ಇರುವ ಮಚ್ಚೆಯು ವೈವಾಹಿಕ ಜೀವನದ ಸುಖ ಮತ್ತು ಉತ್ತಮ ಸಂತಾನವನ್ನು ಸೂಚಿಸುತ್ತದೆ. ಪುರುಷರ ಒಕ್ಕಳಿನ ಎಡ ಭಾಗದಲ್ಲಿ ಮಚ್ಚೆ ಇದ್ದರೇ ಅಂತಹವರು ಸುಖ,

ಸಮೃದ್ಧಿ, ಕೀರ್ತಿಯನ್ನು ಪಡೆಯುತ್ತಾರೆ. ಮೊಳಕಾಲಿನ ಹಾಗೂ ಪಾದದ ಎಡ ಭಾಗದಲ್ಲಿರುವ ಮಚ್ಚೆಯು ಧೈರ್ಯ ಸಾಹಸ ಮತ್ತು ಐಷರಾಮಿಯ ಜೀವನವನ್ನು ಸೂಚಿಸುತ್ತದೆ. ಬಲ ಭಾಗದಲ್ಲಿದ್ದರೆ ಪ್ರಾಮಾಣಿಕ ಮತ್ತು ಸ್ನೇಹ ಜೀವಿಯಾಗಿರುತ್ತಾರೆ. ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಬಲ ಭಾಗದಲ್ಲಿ ಮಚ್ಚೆ ಇದ್ದವರು ಉತ್ತಮ ಸಂಗಾತಿಯನ್ನು ಪಡೆಯುತ್ತಾರೆ ಮತ್ತು ತೃಪ್ತಿದಾಯಕ ಜೀವನವನ್ನು ನಡೆಸುತ್ತಾರೆ. ಕಾಲಿನ ಮೇಲೆ ಮಚ್ಚೆ ಇರುವವರು ಯಾವುದೇ ಕೆಲಸವನ್ನು ಯೋಚಿಸದೇ ಮಾಡುವವರಾಗಿರುತ್ತಾರೆ.

ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ನಕಾರಾತ್ಮಕ ಮನೋಭಾವನೆಯುಳ್ಳವರಾಗಿರುತ್ತಾರೆ. ಕೈ ಬೆರಳುಗಳಲ್ಲಿ ಮಚ್ಚೆಯನ್ನು ಹೊಂದಿರುವವರು ಅದೃಷ್ಟ ಹೀನರು ಎಂದು ಕರೆಯಲಾಗುತ್ತದೆ. ಆದರೇ ಅಂಗುಷ್ಟದ ಕೆಳಭಾಗದಲ್ಲಿ ಶುಕ್ರಪರ್ವತದಲ್ಲಿ ಮಚ್ಚೆ ಇದ್ದರೇ ಅಂತಹವರು ಜೀವನದಲ್ಲಿ ಹೆಚ್ಚು ಹಣವನ್ನು ಸಂಪಾದನೆ ಮಾಡುವುದರ ಜೊತೆಗೆ ಯಶಸ್ಸನ್ನು ಪಡೆಯುತ್ತಾರೆ. ಕಾಲು ಬೆರಳಿನಲ್ಲಿರುವ ಮಚ್ಚೆಯು ಅತೃಪ್ತ ವೈವಾಹಿಕ ಜೀವನವನ್ನು ಸೂಚಿಸುತ್ತದೆ. ಹೊಟ್ಟೆಯ ಬಲಭಾಗದಲ್ಲಿರುವ ಮಚ್ಚೆಯು ಧನ ಸಂಪತ್ತನ್ನು ಸೂಚಿಸುತ್ತದೆ.

ಆದರೇ ಈ ರೀತಿಯ ಮಚ್ಚೆಯನ್ನು ಹೊಂದಿರುವವರು ದೌರ್ಬಲ್ಯವನ್ನು ಹೊಂದಿರುತ್ತಾರೆ. ಬೆನ್ನು ಉರಿಯಲ್ಲಿರುವ ಮಚ್ಚೆಯು ಯಶಸ್ಸು, ನಾಯಕತ್ವ ಮತ್ತು ಪ್ರಖ್ಯಾತಿಯನ್ನು ಸೂಚಿಸಿದರೆ, ಬೆನ್ನಿನ ಬಲಭಾಗದಲ್ಲಿರುವ ಮಚ್ಚೆಯು ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ. ಎಡ ಭಾಗದಲ್ಲಿದ್ದರೆ ಅಂತಹವರು ರಾಜತಾಂತ್ರಿಕ ಮನೋಭಾವವನ್ನು ಹೊಂದಿರುತ್ತಾರೆ. ಅಂಗೈನ ಮಧ್ಯದಲ್ಲಿರುವ ಪುರುಷರ ಅದೃಷ್ಟದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಹಣ, ವಾಹನ ಮತ್ತು ಸಂಪತ್ತು ಇವರಿಗೆ ಹೇರಳವಾಗಿ ಸಿಗುತ್ತದೆ.

ಜೀವನದಲ್ಲಿ ಗೌರವ ಮತ್ತು ಪ್ರತಿಷ್ಠೆಯು ಸಿಗುತ್ತದೆ. ಇದಲ್ಲದೇ ಇವರಿಗೆ ಯಾವುದೇ ರೀತಿಯ ಹಣದ ಕೊರತೆ ಕಾಣುವುದಿಲ್ಲ. ಅದೇ ರೀತಿ ಅಗಲವಾದ ಹಣೆ ಮತ್ತು ಉದ್ದವಾದ ಮೂಗು ಹೊಂದಿರುವ ಪುರುಷರು ಚಿಕ್ಕ ವಯಸ್ಸಿನಲ್ಲಿಯೇ ಪ್ರಗತಿಯನ್ನು ಕಾಣುತ್ತಾರೆಂದು ಶಾಸ್ತ್ರ ಮತ್ತು ಗ್ರಂಥಗಳಲ್ಲಿ ಹೇಳಲಾಗಿದೆ. ಮುಖ, ದೇಹದ ಆಕಾರಗಳಲ್ಲಿ ಮಹಿಳೆಯ ಅದೃಷ್ಟ ಅಡಗಿರುತ್ತದೆ. ಸಾಮೂದ್ರಿಕಾ ಶಾಸ್ತ್ರದ ಪ್ರಕಾರ ಯಾರ ಹಣೆಯು ಮೂರು ಬೆರಳುಗಳಿಗಿಂತ ಹಗಲವಾಗಿರುತ್ತದೆಯೋ ಮತ್ತು ಹಣೆಯು ಅರ್ಧ ಚಂದ್ರನಂತೆ ಕಾಣಿಸುತ್ತದೆಯೋ

ಅಂತಹ ಮಹಿಳೆಯರು ಅದೃಷ್ಟವಂತರಾಗಿರುತ್ತಾರೆ. ಇಂತಹ ಮಹಿಳೆಯರು ಅತ್ತೆಗೆ ಅದೃಷ್ಟವಂತರಾಗಿರುತ್ತಾರೆ. ಹಣೆಯ ಮೇಲೆ ತ್ರಿಶೂಲದ ಗುರುತನ್ನು ಹೊಂದಿರುವ ಮಹಿಳೆಯರನ್ನು ಬಹಳ ಅದೃಷ್ಟವಂತರೆಂದು ಪರಿಗಣಿಸಲಾಗಿದೆ. ಜೊತೆಗೆ ಕೆಂಪಾಗಿರುವ ಕಣ್ಣು ಮತ್ತು ಕಡುಕಪ್ಪಾಗಿರುವ ರೆಪ್ಪೆಗಳನ್ನು ಹೊಂದಿರುವ ಮಹಿಳೆಯರನ್ನು ಅದೃಷ್ಟವಂತರೆಂದು ಹೇಳಲಾಗಿದೆ. ಯಾರ ನಡಿಗೆ ರಾಜಹಂಸದಂತೆ ಇರುತ್ತದೆಯೋ ಅಂತಹ ಮಹಿಳೆಯರು ಎಲ್ಲಾ ರೀತಿಯ ಸಂತೋಷವನ್ನು ಗಳಿಸಿಕೊಳ್ಳುತ್ತಾರೆ.

ಅದೇ ರೀತಿ ಮೂಗಿನ ಮೇಲೆ ಮಚ್ಚೆ ಇರುವ ಮಹಿಳೆಯರು ಬಹಳ ಅದೃಷ್ಟವಂತರು. ಇವರ ಜೀವನದಲ್ಲಿ ಸುಖ, ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಕಾಲು ಬೆರಳುಗಳು ದುಂಡಗಿರುವ ಕೆಂಪಗಿನ ಮಹಿಳೆಯರು ಬಹಳ ಅದೃಷ್ಟವಂತರು. ಅಂತಹ ಮಹಿಳೆಯರನ್ನು ಗಂಡನಿಗೆ ಅದೃಷ್ಟವೆಂದು ಪರಿಗಣಿಸಲಾಗಿದೆ. ಆಗೆಯೇ ದೇಹದ ಎಡಭಾಗದಲ್ಲಿರುವ ಮಚ್ಚೆಯನ್ನು ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಮಹಿಳೆಯರು ತಮ್ಮ ಕೆಲವು ವಿಶೇಷ ಗುಣಗಳಿಂದ ಅದೃಷ್ಟವನ್ನು ಪಡೆಯುತ್ತಾರೆ.

Leave A Reply

Your email address will not be published.