Ultimate magazine theme for WordPress.

Numbness Kannada ಮರಗಟ್ಟುವಿಕೆ 5 ಅಂಶಗಳು ಫಾಲೋ ಮಾಡಿ

0 312

Numbness Kannada ಕೈ ಕಾಲು ಜೋಮು ಹಿಡಿಯುವಂತಹ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ. ಈ ಸಮಸ್ಯೆಗೆ ಕಾರಣ ಮತ್ತು ಲಕ್ಷಣ ಮತ್ತು ಇದಕ್ಕೆ ಪರಿಹಾರವನ್ನ ತಿಳಿಸಿಕೊಡುತ್ತೇವೆ. ಇದಕ್ಕೆ ಕಾರಣವನ್ನು ನೋಡುವುದಾದರೇ ಅಜೀರ್ಣದ ಸಮಸ್ಯೆ, ಮಲಬದ್ಧತೆಯ ಸಮಸ್ಯೆ, ಪೋಷಕಾಂಶಗಳ ಕೊರತೆ ಹಾಗೂ ವ್ಯಾಯಾಮ ರಹಿತವಾಗಿರುವ ಜೀವನ, ಶಾರೀರಿಕ ಶ್ರಮವಿಲ್ಲದ ಜೀವನ ಜೊತೆಗೆ ಪ್ರಕೃತಿಯಿಂದ ದೂರಬರುವ ನೈಸರ್ಗಿಕತೆಯಿಂದ ಹೊರಬರುವ ಕೃತಕ ಜೀವನದಲ್ಲಿ ಬದುಕುವ ಒಂದು ವಿಪರ್ಯಾಸ ಈ ಸಮಸ್ಯೆಗೆ ಮೂಲ ಕಾರಣ.

ವಿಟಮಿನ್ ಡಿ ಮತ್ತು ವಿಟಮಿನ್ ಬಿ12 ಸಿಗುವುದು ನಮ್ಮ ಮೈಗೆ ಬಿಸಿಲು ತಾಕಿದರೇ ಮತ್ತು ನಮ್ಮ ಕಾಲಿಗೆ ಮಣ್ಣು ತಾಕಿದರೇ ಮಾತ್ರ ಸೂರ್ಯನ ಕಿರಣ ನಮ್ಮ ಮೈಗೆ ಬಿದ್ದರೇ ಮಾತ್ರ ಡಿ ಜೀವಸತ್ವ ಸಿಗುತ್ತದೆ. ನರಗಳ ದರ್ಬಲತೆಗೆ ಪೋಷಕ ತತ್ವಗಳ ಕೊರತೆ ಎಂದು ಹೇಳಬಹುದು. ವಿಟಮಿನ್ ಬಿ ಗ್ರೂಪ್ ನಲ್ಲಿ ಬರುವ ಬಿ1, ಬಿ2, ವಿಟಮಿನ್ ಬಿ6 ಆಗಿರಬಹುದು, ವಿಟಮಿನ್ ಬಿ 12 ಆಗಿರಬಹುದು, ವಿಟಮಿನ್ ಡಿ ಮತ್ತು ವಿಟಮಿನ್ ಸಿ, ವಿಟಮಿನ್ ಕೆ ಈ ಎಲ್ಲಾ ಅಂಶಗಳ ಕೊರತೆಯಿಂದ Numbness Kannada

ನರಗಳ ದೌರ್ಬಲ್ಯತೆ ಹೆಚ್ಚಾಗಿ ಕೈಕಾಲುಗಳ ಜೋಮು ಹಿಡಿಯಲು ಕಾರಣವಾಗುತ್ತದೆ. ಇವೆಲ್ಲವನ್ನು ಶರೀರಕ್ಕೆ ಒದಗಿಸಬೇಕೆಂದರೆ ಮಣ್ಣಿನಲ್ಲಿ ನಡೆಯುವುದು, ಸ್ವಚ್ಛಂದವಾಗಿ ಸಿಗುವ ನೈಸರ್ಗಿಕವಾಗಿ ಗಾಳಿಯಲ್ಲಿ ಸಮಯವನ್ನು ಕಳೆಯುವುದು, ನರ ದೌರ್ಬಲ್ಯಕ್ಕೆ ಪ್ರಮುಖ ಕಾರಣ ಎಸಿಯನ್ನು ಹೆಚ್ಚಾಗಿ ಬಳಸುವುದೇ ಕಾರಣವಾಗಿದೆ. ದೇವರು ಕೊಟ್ಟಿರುವ ಶುದ್ಧವಾಗಿರುವ ಗಾಳಿಯನ್ನು ಸೇವನೆ ಮಾಡುವುದರಿಂದ ನರಗಳು ಕ್ರಿಯಾಶೀಲವಾಗುತ್ತವೆ. ಮನುಷ್ಯನ ಎಲ್ಲಾ ಆರೋಗ್ಯದ ಸಮಸ್ಯೆಯನ್ನ ಹೋಗಲಾಡಿಸುವಂತಹ ಶಕ್ತಿ ನಿಸರ್ಗಕ್ಕಿದೆ.

ಮಾನಸಿಕ ಒತ್ತಡದಿಂದಲೂ ನರದೌರ್ಬಲ್ಯತೆ ಬರುತ್ತದೆ. ವಿಟಮಿನ್ ಗಳ ಸೇವನೆಯು ನರಗಳ ದೌರ್ಬಲ್ಯವನ್ನು ಕಡಿಮೆ ಮಾಡಿ ಕೈ ಕಾಲು ಜೋಮು ಹಿಡಿಯುವ ಸಮಸ್ಯೆಯನ್ನು ನಿವಾರಿಸುತ್ತದೆ. ಅಂತಹ ಪೋಷಕಾಂಶಗಳು ನಿಮಗೆ ಸಿಗಬೇಕಾದರೇ ಹೆಚ್ಚಾಗಿ ಸೊಪ್ಪು, ತರಕಾರಿ, ಮೊಳಕೆ ಕಾಳುಗಳನ್ನು ಸೇವನೆ ಮಾಡಬೇಕು. ಕೈ ಕಾಲುಗಳ ಜೋಮು ಹಿಡಿಯುವುದನ್ನ ಆಯುರ್ವೇದದಲ್ಲಿ ವಾತವಿಕಾರ ಎಂದು ಕರೆಯುತ್ತೀವಿ ಅದನ್ನು ಶಮನ ಮಾಡಲು ಎಳ್ಳೆಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಸೂರ್ಯನ ಬಿಸಿಲಿಗೆ ನಿಂತುಕೊಳ್ಳಬೇಕು

ಕೈಕಾಲು ಜೋಮು ದೂರವಾಗುತ್ತದೆ. ಎಳ್ಳೆಣ್ಣೆಯು ವಾತವಿಕಾರಗಳನ್ನು ಹೋಗಲಾಡಿಸುವ ದಿವ್ಯೌಷಧಿ ಎಂದು ಕರೆಯಲಾಗುತ್ತದೆ. ಹಾಗೆಯೇ ಎಳ್ಳಿನ ಉಂಡೆಯನ್ನು ಸೇವನೆ ಮಾಡಬಹುದು. ಕೊಬ್ಬರಿ ಉಂಡೆ ಮತ್ತು ಡ್ರೈಫ್ರೂಟ್ಸ್ ಗಳ ಸೇವನೆಯು ಒಳ್ಳೆಯದು. ನರಗಳಿಗೆ ಉತ್ತೇಜನ ಮತ್ತು ಕ್ರಿಯಾಶಕ್ತಿ ನೀಡುವಂತಹ ಅಂಶಗಳು ಡ್ರೈಫ್ರೂಟ್ ಗಳಲ್ಲಿ ಇರುತ್ತದೆ. ಕಡ್ಲೆಕಾಯಿಯ ಜೊತೆ ಬೆಲ್ಲ ಮತ್ತು ತುಪ್ಪವನ್ನು ಸೇರಿಸಿ ಉಂಡೆ ಮಾಡಿಕೊಂಡು ಇಟ್ಟುಕೊಂಡು ಸೇವಿಸುತ್ತಾ ಬಂದರೆ ಕೈ ಕಾಲುಗಳ ಜೋಮು ಕಡಿಮೆಯಾಗುತ್ತ ಹೋಗುತ್ತದೆ. Numbness Kannada

ಶುಗರ್ ಇರುವವರು ಬಾದಾಮಿಯನ್ನು ಎರಡರಿಂದ ಮೂರು ನೆನೆಸಿ ತಿನ್ನುವುದರಿಂದ ಕೈ ಕಾಲು ಜೋಮು ಹಿಡಿಯುವುದು ಕಡಿಮೆಯಾಗುತ್ತದೆ. ಅಶ್ವಗಂಧ, ಶತಾವರಿ, ಜ್ಯೇಷ್ಠ ಮಧು ಈ ಮೂರನ್ನು ಸಮಪ್ರಮಾಣದಲ್ಲಿ ಪುಡಿ ಮಾಡಿ ಇಟ್ಟುಕೊಂಡು ಸೇವನೆ ಮಾಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಷಾಯದ ರೂಪದಲ್ಲಿ ಸೇವನೆ ಮಾಡಬೇಕು. ಒಂದು ಗ್ಲಾಸ್ನಷ್ಟು ನೀರನ್ನು ತೆಗೆದುಕೊಂಡು ಒಂದು ಚಮಚದಷ್ಟು ಈ ಪುಡಿಯನ್ನು ಹಾಕಿ ಕುದಿಸಿ ಒಂದು ಲೋಟದ Numbness Kannada

ನೀರು ಅರ್ಧಲೋಟ ನೀರು ಆಗುವವರೆಗೂ ಕುದಿಸಬೇಕು ನಂತರ ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಾಡಿಗಳಲ್ಲಿ ಇರುವ ಟಾಕ್ಸಿನ್ ಹೊರ ಹೋಗಿ ನರಗಳಿಗೆ ಬೇಕಾದ ಉತ್ತೇಜನ ಶಕ್ತಿ ದೊರಕಿ ಕೈಕಾಲು ಜೋಮು ಗುಣವಾಗುತ್ತದೆ. ಗರ್ಭಿಣಿಯರು, ಕಿಡ್ನಿ ಸಮಸ್ಯೆ ಇರುವವರು, ಹೃದಯ ಸಂಬಂಧಿತ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಂಡು ಬಳಸಿದರೇ ಉತ್ತಮ. ಉಳಿದಂತೆ ಎಲ್ಲರೂ ಈ ಮನೆ ಮದ್ದನ್ನು ಬಳಸಬಹುದು.

Leave A Reply

Your email address will not be published.