Ultimate magazine theme for WordPress.

Vastu Tips ತುಳಸಿಗಿಡಕ್ಕೆ ಇದನ್ನು ಹಾಕಿದರೆ ವನದಂತೆ ಬೆಳಯುತ್ತೆ

0 364

Vastu Tips for money in Kannada ತುಳಸಿ ಗಿಡಕ್ಕೆ ಈ ಒಂದು ವಸ್ತು ಹಾಕಿದರೇ ವನದಂತೆ ಬೆಳೆಯುತ್ತದೆ. ಯಾವಾಗಲೂ ಹಸಿರಾಗಿಯೇ ಇರುತ್ತದೆ ಒಣಗುವುದಿಲ್ಲ. ಎಂಬ ವಿಷಯವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಮನೆಯಲ್ಲಿ ತುಳಸಿ ಇದ್ದರೇ ಮನೆಗೆ ನೆಗೆಟಿವ್ ಎನರ್ಜಿ ಪ್ರವೇಶ ಮಾಡುವುದಿಲ್ಲ. ಮನೆಗೆ ಶ್ರೀರಕ್ಷೆ ಇರುತ್ತದೆ. ಮನೆಗೆ ಕಷ್ಟಬಂದರೆ ಮೊದಲೆ ತುಳಸಿ ಗಿಡಕ್ಕೆ ಗೊತ್ತಾಗುತ್ತದೆ ಮತ್ತು ಒಣಗಲು ಆರಂಭವಾಗುತ್ತದೆ. ತುಳಸಿ ಗಿಡ ನಮ್ಮನ್ನು ಮತ್ತು ನಮ್ಮ ಮನೆಯವರನ್ನ ರಕ್ಷಣೆ ಮಾಡಬೇಕು,

ನಮಗೆ ಬರುವ ಕಷ್ಟಗಳು ಕಳಿಯಬೇಕು, ತುಳಸಿ ಗಿಡ ಸದಾ ಹಸಿರಾಗಿಯೇ ಇರಬೇಕು ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಯಮಗಳು ಯಾವುವು ಎಂದರೆ ತುಳಸಿ ಗಿಡವು ವಾತಾವರಣದ ಕಾರಣದಿಂದ ಒಣಗುತ್ತದೆ. ಅಂದರೆ ಅತೀ ಬಿಸಿಲು, ಅತಿಯಾದ ಮಳೆ, ಅತೀಯಾದ ಚಳಿ ಹೀಗೆ ಇನ್ನು ಹಲವಾರು ಕಾರಣಗಳಿಂದ ಒಣಗಿ ಹೋಗುತ್ತದೆ. ಕೆಮಿಕಲ್ ಇರುವ ರಸಗೊಬ್ಬರವನ್ನು ಹಾಕಿದರೆ ತುಳಸಿ ಗಿಡ ಒಣಗಿ ಹೋಗುತ್ತದೆ. ಇಂದಿನ ಲೇಖನದಲ್ಲಿ ಒಳ್ಳೆಯ ಉಪಾಯವನ್ನು ತಿಳಿಸಿಕೊಡುತ್ತೇವೆ. Vastu Tips

ಇದರಿಂದ ನಿಮ್ಮ ಒಣಗಿದ ತುಳಸಿ ಗಿಡ ಹಚ್ಚ ಹಸಿರಾಗಿರುತ್ತದೆ. ತುಳಸಿ ಗಿಡದಲ್ಲಿ ಶ್ರೀಮನ್ನಾರಾಯಣ ಮತ್ತು ಲಕ್ಷ್ಮಿದೇವಿ ವಾಸವಿರುತ್ತಾರೆ. ಯಾರ ಮನೆ ಎದರು ತುಳಸಿ ಗಿಡ ಇರುತ್ತದೆಯೋ ಆ ಮನೆಗೆ ಲಕ್ಷ್ಮಿದೇವಿ ಮತ್ತು ಶ್ರೀಮನ್ನಾರಾಯಣರು ಆಗಮಿಸುತ್ತಾರೆ. ತುಳಸಿ ಪೂಜೆಯನ್ನು ಮಾಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ. ತುಳಸಿ ಗಿಡ ಒಣಗಿ ಹೋದರೇ ಒಳ್ಳೆಯದಲ್ಲ ಕೂಡಲೇ ಅದನ್ನು ತೆಗೆದು ಹಾಕಿ ಹೊಸ ಗಿಡವನ್ನು ನೆಡಬೇಕು. ತುಳಸಿ ಗಿಡವನ್ನು ಹೆಚ್ಚು ಬಿಸಿಲು ಬರುವ ಕಡೆ ಇಡಬಾರದು.

ಲವಣಯುಕ್ತ ನೀರು ತುಂಬಿದ ಮಣ್ಣನ್ನು ಹಾಕಬಾರದು. ತುಳಸಿ ಗಿಡದಿಂದ ಬರುವ ಹೂವುಗಳನ್ನು ಮತ್ತು ಬೀಜಗಳನ್ನು ಆಗಾಗ್ಗ ತೆಗೆಯುತ್ತಿರಬೇಕು. ಕಾಲ ಕಾಲಕ್ಕೆ ತುಳಸಿ ಬೀಜಗಳನ್ನು ತೆಗೆಯುತ್ತಿರಬೇಕು ಇಲ್ಲದಿದ್ದರೇ ತುಳಸಿ ಅನಾರೋಗ್ಯಕ್ಕೆ ಒಳಗಾಗುತ್ತದೆ. ತುಳಸಿ ದಳಗಳನ್ನು ಕೀಳುವಾಗ ತುಳಸಿ ಮಾತೆಯನ್ನು ಕೇಳಿಕೊಳ್ಳುವುದು ಅವಶ್ಯಕ. ಭಾನುವಾರ ಮತ್ತು ಏಕಾದಶಿಯಂದು ಈ ಕೆಲಸವನ್ನು ಮಾಡಬಾರದು. ತುಳಸಿಯನ್ನು ಉಗುರುಗಳಿಂದ ಕಟ್ಟುಮಾಡಬಾರದು. Vastu Tips

ತುಳಸಿ ಗಿಡಕ್ಕೆ ಒಂದು ದಿನ ಬಿಟ್ಟು ಒಂದು ದಿನ ನೀರನ್ನು ಹಾಕಿದರೇ ಒಳ್ಳೆಯದು. ಮಳೆಗಾಲದಲ್ಲಿ ವಾರಕ್ಕೆ ಎರಡು ಸಲ ಮಾತ್ರ ನೀರನ್ನು ಹಾಕಬೇಕು. ತುಳಸಿ ಗಿಡವನ್ನು ಕಟ್ಟುಮಾಡಿದ ಜಾಗದಲ್ಲಿ ಅರಿಶಿಣದ ಪೇಸ್ಟ್ ಅನ್ನು ಹಚ್ಚಬೇಕು. ನಂತರ ಅದರ ಮೇಲೆ ಪಾಲಿಥಿನ್ ಕವರ್ ಮುಚ್ಚುವುದರಿಂದ ಸೂರ್ಯನ ನೇರವಾದ ಕಿರಣದಿಂದ ರಕ್ಷಣೆ ಪಡೆಯುತ್ತದೆ. ತುಳಸಿ ಪಾಟ್ ನಲ್ಲಿ ಕಸ ಅಥವಾ ಹುಲ್ಲು ಬೆಳೆದಿದ್ದರೆ ಕ್ಲೀನ್ ಮಾಡುತ್ತಿರಬೇಕು. ತುಳಸಿ ಗಿಡಕ್ಕೆ ಗೊಬ್ಬರ ಹಾಕುವ ಮೊದಲು ಮಣ್ಣನ್ನು ಸಡಿಲಗೊಳಿಸಬೇಕು.

ಹೀಗೆ ಮಾಡುವುದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಸಗಣಿಯಿಂದ ಮಾಡಿದ ಕಾಂಪೋಸ್ಟ್ ಗೊಬ್ಬರವನ್ನು ಹಾಕುವುದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಆದರೇ ಇದನ್ನು ಹೆಚ್ಚು ಹಾಕಿದರೇ ಗಿಡ ಕೊಳೆತು ಹೋಗುತ್ತದೆ. ಹಾಗಾಗ್ಗಿ ಸರಿಯಾದ ಪ್ರಮಾಣದಲ್ಲಿ ಈ ಗೊಬ್ಬರವನ್ನು ಉಪಯೋಗಿಸಬೇಕು. ಕಾಲ್ ಕೆಜಿ ಯಷ್ಟು ಗೊಬ್ಬರ ಒಂದು ಚಮಚ ಅರಿಶಿಣ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿ ತುಳಸಿ ಗಿಡಕ್ಕೆ ಹಾಕಬೇಕು. ಇದರಿಂದ ತುಳಸಿ ಗಿಡವು ಯಾವಾಗಲೂ ಹಚ್ಚಹಸಿರಾಗಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ. Vastu Tips

ಈ ಉಪಾಯವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಮಾಡುತ್ತಾ ಹೋಗಬೇಕು. ತುಳಸಿ ಗಿಡವನ್ನು ನೆಡುವಾಗಿ ಬೇವಿನ ಪುಡಿಯನ್ನು ಮಣ್ಣಿಗೆ ಬೆರೆಸುವುದು ಒಳ್ಳೆಯದು ಹೀಗೆ ಮಾಡುವುದರಿಂದ ತುಳಸಿ ಗಿಡವು ಬೇಗನೆ ದಟ್ಟವಾಗಿ ಬೆಳೆಯುತ್ತದೆ. ತುಳಸಿ ಗಿಡಕ್ಕೆ ಅಂಗಡಿಯಿಂದ ಸ್ವಚ್ಛವಾದ ಕಪ್ಪು ಮಣ್ಣನ್ನು ಹಾಕಬೇಕು. ಈ ಮಣ್ಣಿಗೆ ಹಸುವಿನ ಸಗಣಿಯನ್ನು ಸೇರಿಸಬೇಕು. ಇದರಿಂದ ತುಳಸಿ ಗಿಡವು ಆರೋಗ್ಯಕರವಾಗಿ ಬೆಳೆಯುತ್ತದೆ. ತುಳಸಿ ಗಿಡವನ್ನು Vastu Tips

ಇನ್ನು ಚೆನ್ನಾಗಿ ಬೆಳೆಸಬೇಕಾದರೇ ಒಂದು ಬಕೆಟ್ ನಲ್ಲಿ ಮೂರು ಲೀಟರ್ ನೀರನ್ನು ತೆಗೆದುಕೊಂಡು ಗಿಡಕ್ಕೆ ಕ್ಯಾಲ್ಸಿಯಂ ಗಾಗಿ ಸ್ವಲ್ಪ ಹಸಿ ಹಾಲು ಅಥವಾ ಮಜ್ಜಿಗೆಯನ್ನು ಮಿಕ್ಸ್ ಮಾಡಿ ಒಂದು ಕಡೆ ಇಟ್ಟುಕೊಳ್ಳಬೇಕು. ನಂತರ ಅದಕ್ಕೆ ಸ್ಪೆಷಲ್ ಆದಂತಹ ಕಾಂಪೋಸ್ಟ್ ಅನ್ನು ತಯಾರು ಮಾಡಿಕೊಳ್ಳಬೇಕು. ಅದಕ್ಕೆ ಒಂದು ಲೋಟ ನೀರಿಗೆ ಧನಕರುಗಳ ಗೊಬ್ಬರ ಅಥವಾ ವರ್ಮಿ ಕಾಂಪೋಸ್ಟ್ ಸೇರಿಸಿ ಮಿಶ್ರ ಮಾಡಬೇಕು ಇದನ್ನು ಒಂದು ವಾರ ಮೊದಲೇ ಮಾಡಿ ಇಟ್ಟುಕೊಳ್ಳಬೇಕು

ಮತ್ತು ಪ್ರತಿದಿನ ಕೈಆಡಿಸುತ್ತಿರಬೇಕು. ಒಂದು ವಾರದ ನಂತರ ಅದನ್ನು ಸೇರಿಸಿಕೊಳ್ಳಬೇಕು. ಈ ಡಿಕಾಕ್ಷನ್ ಅನ್ನು ನೀರು ಮತ್ತು ಹಾಲು ಮಿಕ್ಸ್ ಮಾಡಿದ್ದ ಬಕೆಟ್ ಗೆ ಸೇರಿಸಿಕೊಳ್ಳಬೇಕು. ಚೆನ್ನಾಗಿ ಮಿಶ್ರ ಮಾಡಿ ಅರ್ಧ ಸ್ಪೂನ್ ನಷ್ಟು ಎಕ್ಸಾಸ್ಟ್ ಸಾಲ್ಟ್ ಅನ್ನು ಸೇರಿಸಿಕೊಳ್ಳಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಗಿಡಗಳಿಗೆ ಹಾಕಬೇಕು ಅಥವಾ ಸ್ಪ್ರೈ ಬಾಟಲ್ ಗೆ ಹಾಕಿಕೊಂಡು ಸ್ಪ್ರೈ ಮಾಡಬಹುದು. ಹೀಗೆ ಮಾಡುವುದರಿಂದ ತುಳಸಿ ಗಿಡಗಳು ಚೆನ್ನಾಗಿ ಬೆಳೆದು ಹಸಿರು ವನದಂತೆ ಆಗುತ್ತದೆ.

Leave A Reply

Your email address will not be published.